
ರಾಯಚೂರು, ಅಕ್ಟೋಬರ್ 24: ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ವಿಚಾರ ಬೆನ್ನಲ್ಲೇ ಇದೀಗ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಟೆಂಪಲ್ ರನ್ ರಾಜಕೀಯ ಬೆಳವಣಿಗೆಗೆ ಸಾಕಷ್ಟು ಸಾಕ್ಷಿಯಾಗುವ ಸಾಧ್ಯತೆ ಇದೆ. ಇತ್ತ ಡಿಕೆ ಶಿವಕುಮಾರ್ ಸಿಎಂ (CM) ಆಗೇ ಆಗ್ತಾರೆ ಅಂತ ಗುರುವಾರ ಪಂಚಮುಖಿ ಆಂಜನೇಯ ದೇವಸ್ಥಾನದ ಅರ್ಚಕರು ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಮಂತ್ರಾಲಯ ಶ್ರೀಗಳು ಕೂಡ ಡಿಕೆ ಶಿವಕುಮಾರ್ಗೆ ಆಶಿರ್ವದಿಸಿದ್ದು, ಮಂತ್ರಾಲಯ ಯಾತ್ರೆ ಕೈಗೊಂಡಿದ್ದೇವೆ ಎನ್ನುವುದಕ್ಕೆ ದೈವಾನುಗೃಹದ ಸೂಚನೆ ಅಂತ ಶ್ರೀಗಳು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ವಿಚಾರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಟೆಂಪಲ್ ರನ್ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಕೆ ಶಿವಕುಮಾರ್ ಗುರುವಾರದಂದು ಮಂತ್ರಾಲಯ ಹಾಗೂ ರಾಯಚೂರಿನ ಗಾಣದಾಳದಲ್ಲಿರುವ ಪಂಚಮುಖಿ ಆಂಜನೇಯ ದೇವಾಲಯದಲ್ಲೂ ಡಿಕೆ ಶಿವಕುಮಾರ್ ದಂಪತಿ, ಮಧು ಅಭಿಷೇಕ ಹಾಗೂ ಪುಷ್ಪಾರ್ಚನೆ ಮಾಡಿದರು. ದೀಪಾವಳಿ ಪಾಡ್ಯದಂದೇ ಇಂಥದೊಂದು ವಿಶೇಷ ಅಭಿಷೇಕದಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಪಂಚಮುಖಿ ಆಂಜನೇಯ ದೇವಾಲಯದ ಅರ್ಚಕರು ಶಾಮಾಚಾರ್ಯರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ ಅಂತ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಮಾಡಿದ ಸಂಕಲ್ಪ ರಹಸ್ಯ ಬಿಚ್ಚಿಟ್ಟ ದೇಗುಲದ ಅರ್ಚಕ ಶಾಮಾಚಾರ್ಯ!
ಇತ್ತ ಪಂಚಮುಖಿ ದೇವಾಲಯದ ಅರ್ಚಕರು ಭವಿಷ್ಯ ನುಡಿದಿರುವ ಬೆನ್ನಲ್ಲೇ ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಕೂಡ ಡಿಕೆ ಶಿವಕುಮಾರ್ ದೈವ ಬಲದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಏಕೆಂದರೆ ಡಿಕೆ ಶಿವಕುಮಾರ್ ರಾಯರ ಮೂಲ ಬೃಂದಾವನದ ದರ್ಶನದ ಬಳಿಕ ಮೂಲ ರಾಮದೇವರ ಮಹಾ ಅಭಿಷೇಕ ಪೂಜೆಯಲ್ಲೂ ಭಾಗಿಯಾಗಿದ್ದರು. ಈ ಮೂಲ ರಾಮದೇವರ ಪೂಜೆ ವರ್ಷಕ್ಕೆ ಎರಡೇ ದಿನ ಬರೋದು..ಹೀಗಾಗಿ ಇದು ದೈವ ಅನುಗೃಹ ಅಂತ ಮಂತ್ರಾಲಯ ಶ್ರೀಗಳು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎನ್ನುವ ಬಯಕೆ ಹೊಂದಿದ್ದಾರೆ. ಅದೇ ಅವರ ಸಂಕಲ್ಪ ಅನ್ನೋ ವಿಚಾರ ಕೇಳಿ ಬರ್ತಿದೆ. ಇತ್ತ ಸಿಎಂ ಆಗುವುದಕ್ಕೆ ಕೇವಲ ಜನರ ಬೆಂಬಲ ಮಾತ್ರವಲ್ಲದೇ ದೈವ ಬಲವೂ ಬೇಕು ಅನ್ನೋದು ಕೆಲವರ ವಾದವಾಗಿದೆ. ಈ ಬಗ್ಗೆ ಮಂತ್ರಾಲಯ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಪ್ರತಿಕ್ರಿಯಿಸಿದ್ದು, ದೈವ ಬೆಂಬಲ ಇದ್ದರೇ ಮಾತ್ರ ಈ ಕ್ಷೇತ್ರಕ್ಕೆ ಬರಲಿಕ್ಕೆ ಸಾಧ್ಯ. ಏಕೆಂದರೆ ಮಂದ ಭಾಗ್ಯ ಇರೋವವರಗೆ ದೊರೆಯದಿವರ ಸೇವಾ ಹೀಗಂತ ಅನೇಕ ಮಾಹುನುಭಾವರು ಹೇಳಿದ್ದಾರೆ ಎಂದರು.
ಮಂತ್ರಾಲಯ, ಅವರ ದರ್ಶನ, ಮನಸ್ಸು ಬಂದಿದೆ, ಮಂತ್ರಾಯಲದ ಯಾತ್ರೆ ಕೈಗೊಂಡಿದ್ದೇವೆ ಎನ್ನುವುದೇ ದೈವಾನುಗೃಹದ ಸೂಚನೆ ಅಂತ ಪರೋಕ್ಷವಾಗಿ ಡಿಕೆ ಶಿವಕುಮಾರ್ ಕೈಗೊಂಡಿರುವ ಸಂಕಲ್ಪಕ್ಕೆ ರಾಯರ ಅನುಗೃಹ ಇದೆ ಅನ್ನೋ ರೀತಿ ಹೇಳಿದ್ದಾರೆ.
ಇಲ್ಲಿ ಇನ್ನೊಂದು ವಿಚಾರ ಏನೆಂದರೆ ಮೂಲ ರಾಮದೇವರ ದರ್ಶನ, ಪೂಜೆ, ಅನುಗೃಹ ಪ್ರಸಾದ ಪಡೆದುಕೊಂಡರೇ ಇಷ್ಟಾರ್ಥ ಕಾರಣವಾಗತ್ತೆ, ಎಲ್ಲ ಕಷ್ಟಗಳು ಪರಿಹಾರವಾಗತ್ತೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಇಂಥ ಪೂಜೆಯಲ್ಲಿ ಭಾಗಿಯಾದ ಡಿಕೆ ಶಿವಕುಮಾರ್ಗೆ ಇಷ್ಟಾರ್ಥ ಪ್ರಾಪ್ತಿಯಾಗಲಿದೆ ಅನ್ನೋದು ಶ್ರೀಗಳ ಮಾತಾಗಿದೆ.
ಇದನ್ನೂ ಓದಿ: ಇಕ್ಬಾಲ್ ಹುಸೇನ್ ಬೆನ್ನಲ್ಲೇ ಡಿಕೆ ಶಿವಕುಮಾರ್ ಪರ ಶಾಸಕ ರಂಗನಾಥ್ ಬ್ಯಾಟಿಂಗ್!
ಇಷ್ಟಾರ್ಥ ಪ್ರಾಪ್ತಿ ಅನ್ನೋದು, ರಾಯರ ಅನುಗೃಹ ಪ್ರತಿಭಕ್ತರಿಗೆ ಆಗುವಂತ ಅವರವರ ಅನುಭವಕ್ಕೆ ತಿಳಿದ ವಿಷಯ. ಹೀಗಾಗಿ ಅವರು, ವರ ಕುಟುಂಬಕ್ಕೆ ಶ್ರೇಯ, ಕ್ಷೇಮ ಆಗಲಿ ಅಂತ ಶ್ರೀಗಳು ಆಶೀರ್ವಾದಿಸಿದ್ದಾರೆ. ಆದರೆ ಇದೇ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ಇದು ಯಾವ ಹಂತಕ್ಕೆ ತಲುಪತ್ತೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.