ಮಕರ ಸಂಕ್ರಾಂತಿ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲು

ಸಂಕ್ರಾಂತಿ ಹಬ್ಬ ಹಿನ್ನೆಲೆ ಪೂಜೆ ಹಾಗೂ ಪುಣ್ಯ ಸ್ನಾನಕ್ಕೆ ಎಂದು ನಿನ್ನೆ ಐದಾರು ಜನ ಸ್ನೇಹಿತರು ಕೃಷ್ಣಾ ನದಿಗೆ ಹೋಗಿದ್ದರು. ಈ ವೇಳೆ ಗಣೇಶ್ ಮತ್ತು ಉದಯ್ ಕುಮಾರ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಕರ ಸಂಕ್ರಾಂತಿ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲು
ಮಕರ ಸಂಕ್ರಾಂತಿ ಹಿನ್ನೆಲೆ ನದಿ ಸ್ನಾನಕ್ಕೆ ತೆರಳಿದ್ದ ಇಬ್ಬರು ಸ್ನೇಹಿತರು ನೀರುಪಾಲು

ರಾಯಚೂರು: ಮಕರ ಸಂಕ್ರಾಂತಿ ಹಿನ್ನೆಲೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸ್ನೇಹಿತರು ನೀರುಪಾಲಾದ ಘಟನೆ ರಾಯಚೂರು ತಾಲೂಕಿನ ಶಕ್ತಿನಗರದ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ. ಮಕರ ಸಂಕ್ರಾಂತಿ ಹಬ್ಬ ಹಿನ್ನೆಲೆ ನದಿ ಸ್ನಾನ ಮಾಡಲು ಹೋಗಿದ್ದ ಸ್ನೇಹಿತರು ನೀರುಪಾಲಾಗಿದ್ದಾರೆ. ಗಣೇಶ್(42), ಉದಯ್ ಕುಮಾರ್(43) ಮೃತರು.

ಸಂಕ್ರಾಂತಿ ಹಬ್ಬ ಹಿನ್ನೆಲೆ ಪೂಜೆ ಹಾಗೂ ಪುಣ್ಯ ಸ್ನಾನಕ್ಕೆ ಎಂದು ನಿನ್ನೆ ಐದಾರು ಜನ ಸ್ನೇಹಿತರು ಕೃಷ್ಣಾ ನದಿಗೆ ಹೋಗಿದ್ದರು. ಈ ವೇಳೆ ಗಣೇಶ್ ಮತ್ತು ಉದಯ್ ಕುಮಾರ್ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗಣೇಶ್ ಶವ ಪತ್ತೆಯಾಗಿದ್ದು ಉದಯ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿ ನಿವಾಸಿ ಹಾಗೂ ಉದಯ್‌ಕುಮಾರ್ ರಾಯಚೂರಿನ KEB ಕಾಲೋನಿಯ ನಿವಾಸಿ. ಸದ್ಯ ಶಕ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಬ್ಬದ ಸಂಭ್ರಮದಲ್ಲಿರಬೇಕಾಗಿದ್ದ ಕುಟುಂಬದಲ್ಲಿ ಸೂತಕನ ಛಾಯೆ ಆವರಿಸಿದೆ.

ಗಣೇಶ್ ಮತ್ತು ಉದಯ್ ಇಬ್ಬರೂ ನದಿಗೆ ಬೀಳ್ತಿದ್ದಂತೆ ಕೃಷ್ಣಾ ನದಿ ತೀರದಲ್ಲೇ ವಾಸವಾಗಿದ್ದ ಅನಾಥ ಯುವಕ ಬಾಲು ಕಾಪಾಡಲು ಯತ್ನಿಸಿದ್ದ. ನದಿಗೆ ಹಾರಿ ಗಣೇಶನನ್ನ ಕಾಪಾಡಿದ್ದ. ಆದರೆ ಅಷ್ಟರಲ್ಲಾಗಲೇ ಗಣೇಶ್ ಮೃತಪಟ್ಟಿದ್ದರು. ನಿನ್ನೆ ಸಂಕ್ರಾಂತಿ ಹಿನ್ನೆಲೆ ಕೃಷ್ಣಾ ನದಿಗೆ ರವಿಕುಮಾರ್, ಖಲೀಲ್, ಗಣೇಶ್, ಉದಯ್ ಕುಮಾರ್ ಸೇರಿ ಒಟ್ಟು ಆರು ಜನ ಹಳೆ ಸ್ನೇಹಿತರು ಹೋಗಿದ್ದರು. ಈ ಪೈಕಿ ನಾಲ್ಕು ಜನ ಸರ್ಕಾರಿ ನೌಕರರು. ಮೃತ ಉದಯ್ ಕುಮಾರ್, ಜೆಸ್ಕಾಂ ಲೈನ್ ಮ್ಯಾನ್. ಗಣೇಶ್ ಖಾಸಗಿ ವಾಹನ ಚಾಲಕ. ಮೊದಲು ಎಲ್ಲರೂ ಒಟ್ಟಿಗೆ ನದಿಯಲ್ಲಿ ಸ್ನಾನ ಮುಗಿಸಿದ್ದರು. ಬಳಿಕ ಮತ್ತೆ ಈಜುವುದಾಗಿ ಗಣೇಶ್ ಹಾಗೂ ಉದಯ್ ಕುಮಾರ್ ನದಿಗೆ ಇಳಿದಿದ್ದರು. ಆಗ ಘಟನೆ ನಡೆದಿದೆ.

ಇದನ್ನೂ ಓದಿ: Makar Sankranti: ಮಕರ ಸಂಕ್ರಾಂತಿ ಹಬ್ಬದ ಮಹತ್ವ ಮತ್ತು ಈ ವರ್ಷ ಸಂಕ್ರಾಂತಿ ಜನವರಿ 15 ಏಕೆ?

Published On - 10:22 am, Sat, 15 January 22

Click on your DTH Provider to Add TV9 Kannada