ಪತಿ-ಪುತ್ರಿ ಆಚೆ ಹೋಗಿದ್ದ ವೇಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಇದೇ ವೇಳೆ ಮತ್ತೋರ್ವ ಪುತ್ರಿಗೂ ತಗುಲಿದ ಬೆಂಕಿ

ಪತಿ-ಪುತ್ರಿ ಆಚೆ ಹೋಗಿದ್ದ ವೇಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಇದೇ ವೇಳೆ ಮತ್ತೋರ್ವ ಪುತ್ರಿಗೂ ತಗುಲಿದ ಬೆಂಕಿ
ಪತಿ-ಪುತ್ರಿ ಆಚೆ ಹೋಗಿದ್ದ ವೇಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಇದೇ ವೇಳೆ ಮತ್ತೋರ್ವ ಪುತ್ರಿಗೂ ತಗುಲಿದ ಬೆಂಕಿ

ಶಿರೀಷ ಪತಿ ಇನ್ನೊಬ್ಬ ಪುತ್ರಿ ಜೊತೆ ಹೊರ ಹೋಗಿದ್ದರು. ಪತಿ ಹೊರಗೆ ಹೋಗಿದ್ದಾಗ ಶಿರೀಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9kannada Web Team

| Edited By: Ayesha Banu

Feb 01, 2022 | 12:14 PM

ರಾಯಚೂರು: ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬೆಂಕಿ ಹಚ್ಚಿಕೊಂಡು ಗೃಹಿಣಿ ಆತ್ಯಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಘಟನೆ ವೇಳೆ ಪಕ್ಕದಲ್ಲಿದ್ದ ಪುತ್ರಿಗೂ ಬೆಂಕಿ ತಗಲಿದ್ದು ಮಗಳು ಕೂಡ ಮೃತಪಟ್ಟಿದ್ದಾರೆ. ಶಿರೀಷ (35) ಹಾಗೂ ಪುತ್ರಿ ಭುವನಾ(5) ಮೃತರು. ಶಿರೀಷ ಪತಿ ಇನ್ನೊಬ್ಬ ಪುತ್ರಿ ಜೊತೆ ಹೊರ ಹೋಗಿದ್ದರು. ಪತಿ ಹೊರಗೆ ಹೋಗಿದ್ದಾಗ ಶಿರೀಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಯಕ್ತಿಕ ಕಾರಣದಿಂದ ಶಿರೀಷ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಶಿರೀಷ, ಪತಿ ಇನ್ನೊಬ್ಬ ಪುತ್ರಿ ಜೊತೆ ಹೊರ ಹೋಗಿದ್ದ ವೇಳೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು ಗದಗ-ಬಾಗಲಕೋಟೆ ಮಾರ್ಗದ ಜಾಲಿಹಾಳ ಬಳಿ ಭೀಕರ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸನಗೌಡ ಪಾಟೀಲ್(60), ಸಂಗಮ್ಮ ಪಾಟೀಲ್(55) ಮಂಜುನಾಥ ಮಾರನಬಸರಿ(38) ಅಪಘಾತದಲ್ಲಿ ಮೃತಪಟ್ಟವರು. ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದೇವಸ್ಥಾನದ ಎದುರು ವೃದ್ಧೆಯನ್ನು ಥಳಿಸಿದ ಸಂಬಂಧಿಕರು ಧಾರವಾಡ: ನಗರದ ದುರ್ಗಾದೇವಿ ದೇಗುಲದ ಬಳಿ ಸಂಬಂಧಿಗಳು ವೃದ್ಧೆಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಸ್ಥಳದಲ್ಲಿದ್ದವರು ತಡೆಯಲು ಹೋದರೂ ಕೇಳದೆ ಯುವತಿಯರಿಂದ ವೃದ್ಧೆ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ. ದೇವಸ್ಥಾನಕ್ಕೆ ಬಂದಿದ್ದ ಅನೇಕರಿಂದ ಜಗಳ ಬಿಡಿಸುವ ಯತ್ನ ನಡೆದರೂ ಯಾರ ಮಾತಿಗೂ ಜಗ್ಗದೇ ವೃದ್ಧೆ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕಣ್ಣಳತೆಯಲ್ಲೇ ನಕಲಿ ಬೀಗದ ಕೈ ತಯಾರಿಸಿ ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ 13 ವರ್ಷದಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada