7 ತಿಂಗಳಿಂದ ಸಂಬಳವಿಲ್ಲದೆ ಕಂಗಾಲಾದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾರ್ಮಿಕರು, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾರ್ಮಿಕರು ಕಳೆದ 7 ತಿಂಗಳಿನಿಂದ ವೇತನವೇ ಸಿಗುತ್ತಿಲ್ಲವಂತೆ. ಅದರಲ್ಲೂ ಇಎಸ್ಐ, ಪಿಎಫ್ ಹಣ ಹಾಕುತ್ತಿಲ್ಲವಂತೆ. ಹೀಗಾಗಿ ಸಂಬಳವಿಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ. ವೇತನ ಕೊಡಬೇಕಾಗಿದ್ದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.
ರಾಯಚೂರು: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಕಾರ್ಮಿಕರಿಗೆ ನೀಡಬೇಕಿದ್ದ ಕೋಟ್ಯಾಂತರ ರೂ. ವೇತನ ಗುಳುಂ ಮಾಡಿದ್ದಾರೆ ಎಂದು ರಾಯಚೂರು ಜಿಲ್ಲೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾರ್ಮಿಕರು ಆರೋಪಿಸಿದ್ದಾರೆ. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ. ನೀರು ಸರಬರಾಜು ಮಾಡುವ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ. ಇಎಸ್ಐ, ಪಿಎಫ್ ಹಣ ಸೇರಿದಂತೆ 7 ತಿಂಗಳಿನಿಂದ ಸಂಬಳವಿಲ್ಲದೇ 748 ಕಾರ್ಮಿಕರು ಪರದಾಡುತ್ತಿದ್ದಾರೆ. 2018 ಇಎಸ್ಐ ಹಾಗೂ ಪಿಎಫ್ ಕೂಡ ನೀಡುತ್ತಿಲ್ಲ. ವೇತನ ಕೊಡುವಂತೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾರ್ಮಿಕರು ಕಳೆದ 7 ತಿಂಗಳಿನಿಂದ ವೇತನವೇ ಸಿಗುತ್ತಿಲ್ಲವಂತೆ. ಅದರಲ್ಲೂ ಇಎಸ್ಐ, ಪಿಎಫ್ ಹಣ ಹಾಕುತ್ತಿಲ್ಲವಂತೆ. ಹೀಗಾಗಿ ಸಂಬಳವಿಲ್ಲದೆ ಕಾರ್ಮಿಕರು ಪರದಾಡುತ್ತಿದ್ದಾರೆ. ವೇತನ ಕೊಡಬೇಕಾಗಿದ್ದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ವಿರೋಧದ ನಡುವೆಯೂ ಕಾಂಟ್ರಾಕ್ಟ್ ಪದ್ದತಿಗೆ ಸರ್ಕಾರ ಜೋತು ಬಿದ್ದಿದೆ. ಗುತ್ತಿಗೆದಾರರು ವೇತನ ಕೊಡದಿದ್ರೆ, ಇಲಾಖೆಯಿಂದ ಅವಕಾಶವಿದೆ. ಹೀಗಿದ್ರೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕಾರ್ಮಿಕರು ಮಾತ್ರ ತಮ್ಮ ಅಳಲನ್ನು ತೋಡಿಕೊಂಡರೂ ಫಲ ಸಿಗದಂತಾಗಿದೆ. ಈ ಸಮಸ್ಯೆಗೆ ಗುತ್ತಿಗೆದಾರರು & ಅಧಿಕಾರಿಗಳು ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೂಡಲೇ ಬಾಕಿ ಸಂಬಳ, ಇಎಸ್ಐ ಮತ್ತು ಪಿಎಫ್ ಹಣ ಬಿಡುಗಡೆಗೊಳಿಸದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಕಾರ್ಮಿಕರು ಎಚ್ಚರಿಕೆ ಕೊಟ್ಟಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರ್ಮಿಕರಿಗೆ ಸಂಬಳ ನೀಡಿಲ್ಲ.ಸಂಬಳದ ಕೋಟ್ಯಂತರ ರೂ.ಗಳನ್ನು ನೀಡದೇ ಭ್ರಷ್ಟಾಚಾರವೆಸಗಿದ್ದಾರೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾರ್ಮಿಕರಿಗೆ 7 ತಿಂಗಳ ಸಂಬಳ ನೀಡಿಲ್ಲ. ನಾಲ್ಕು ವರ್ಷಗಳಿಂದ ಇಎಸ್ಐ ಹಾಗೂ ಪಿಎಫ್ ಹಣವನ್ನು ಜಮೆ ಮಾಡಿಲ್ಲ. ಕೂಡಲೇ ಸಮಸ್ಯೆ ಪರಿಹರಿಸದೇ ಇದ್ರೆ ಉಗ್ರ ಹೋರಾಟ ಮಾಡಲಾಗುವುದು ಎಂದು ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ವ್ಯಾಪಾರ; ರೈತರು ಕಂಗಾಲು
Published On - 1:52 pm, Mon, 31 January 22