ನೀವು ವಿಡಿಯೊ ಕಾಲ್ ಮಾಡಿ ಸೌಕರ್ಯ ಘೋಷಿಸಬೇಕು: ಲೈವ್ ವಿಡಿಯೊದಲ್ಲಿ ಕೆಪಿಸಿಎಲ್ ಎಂಡಿಗೆ ಆತ್ಮಹತ್ಯೆ ಸಂದೇಶ ರವಾನಿಸಿದ ಕಾರ್ಮಿಕ

RTPS: ‘ಕಾರ್ಮಿಕರು ಎಂದರೆ ನಿಮ್ಮ ಮಕ್ಕಳಿದ್ದಂತೆ, ನೀವು ನಮಗೆ ತಂದೆ-ತಾಯಿ ದಯವಿಟ್ಟು ಅನ್ಯಾಯ ಮಾಡಬೇಡಿ’ ಎಂದು ಕೆಪಿಸಿಎಲ್ ಎಂಡಿಗೆ ಕಾರ್ಮಿಕ ಲೈವ್ ವಿಡಿಯೊದಲ್ಲಿ ಅಹವಾಲು ಸಲ್ಲಿಸಿದ್ದಾರೆ.

ನೀವು ವಿಡಿಯೊ ಕಾಲ್ ಮಾಡಿ ಸೌಕರ್ಯ ಘೋಷಿಸಬೇಕು: ಲೈವ್ ವಿಡಿಯೊದಲ್ಲಿ ಕೆಪಿಸಿಎಲ್ ಎಂಡಿಗೆ ಆತ್ಮಹತ್ಯೆ ಸಂದೇಶ ರವಾನಿಸಿದ ಕಾರ್ಮಿಕ
ರಾಯಚೂರು ಘಟಕದ ಚಿಮಣಿ ಏರಿರುವ ಕಾರ್ಮಿಕ ಸಣ್ಣಸುಗುರಪ್ಪ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 17, 2022 | 11:50 AM

ರಾಯಚೂರು: ತಾಲ್ಲೂಕಿನ ಶಕ್ತಿನಗರ ಬಳಿಯಿರುವ ಆರ್​ಟಿಪಿಎಸ್ ಘಟಕದ ಕಾರ್ಮಿಕರೊಬ್ಬರು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಘಟಕದ ಕಟ್ಟಡದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಘಟಕದ ಚಿಮಣಿ ಏರಿದ ನಂತರ ಲೈವ್ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಅವರು, ಶೀಘ್ರ ಕನಿಷ್ಠ ವೇತನ ಜಾರಿ ಮಾಡಬೇಕು, ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಟ್ಟಡದ ಮೇಲೇರಿದ ಕಾರ್ಮಿಕನನ್ನು ಸಣ್ಣಸುಗುರಪ್ಪ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸುತ್ತಿರುವ ವಿಷಯ ತಿಳಿದ ತಕ್ಷಣ ಸಾವಿರಾರು ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ವಿಡಿಯೊದಲ್ಲಿ ಅವರು ಪ್ರಸ್ತಾಪಿಸಿರುವ ಹಲವು ವಿಚಾರಗಳು ಮನಸ್ಸು ಕಲಕುವಂತಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗುತ್ತಿದೆ. ‘ಕೆಪಿಸಿಎಲ್ ಸಂಸ್ಥೆಯು ಕಾರ್ಮಿಕರಿಗೆ ಒದಗಿಸುವ ಸೌಲಭ್ಯಗಳನ್ನು ಬಹಿರಂಗವಾಗಿ ಪ್ರಕಟಿಸಬೇಕು. ಗುತ್ತಿಗೆದಾರರಿಂದ ಆಗುತ್ತಿರುವ ಶೋಷಣೇ ನಿಲ್ಲಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಅವರನ್ನು ನೇರವಾಗಿ ಉದ್ದೇಶಿಸಿ ಮಾತನಾಡಿರುವ ಕಾರ್ಮಿಕ ಸಣ್ಣಸುಗುರಪ್ಪ, ನಾವು ಕಾರ್ಮಿಕರು ಎಂದರೆ ನಿಮ್ಮ ಮಕ್ಕಳಿದ್ದಂತೆ. ನೀವು ನಮ್ಮನ್ನು ಕಾಪಾಡಬೇಕು. ಇಲ್ಲಿ ಅನ್ಯಾಯವಾಗ್ತಿದೆ. ನಿಮ್ಮನ್ನು ಭೇಟಿಯಾಗಿದ್ದೇ ತಪ್ಪು ಎಂಬಂತೆ ಬಿಂಬಿಸಿ ನನಗೆ ತೊಂದರೆ ಕೊಡುತ್ತಿದ್ದಾರೆ. ನೀವು ನನಗೆ ವಿಡಿಯೊ ಕಾಲ್ ಮಾಡಿ ಮಾತನಾಡಬೇಕು ಎಂದು ಕೋರಿದ್ದಾರೆ.

ವಿಡಿಯೊದ ಆರಂಭದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ದಾನಿ ಸುಧಾಮೂರ್ತಿ, ಖ್ಯಾತ ಲೇಖಕ ಗುರುರಾಜ ಕರಜಗಿ ಸೇರಿದಂತೆ ಹಲವರನ್ನು ನೆನಪಿಸಿಕೊಂಡಿರುವ ಕೊನೆಯಲ್ಲಿ ‘ಕೃಷ್ಣಂ ವಂದೇ ಜಗದ್ಗುರುಂ’ ಎಂದು ವಿಡಿಯೊ ಮುಗಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ರಾಯಚೂರು ಶಕ್ತಿ ಘಟಕದ ಕಾರ್ಮಿಕರ ಮೇಲೆ ನಡೆಯುತ್ತಿರುವ ಶೋಷಣೆಯನ್ನೂ ವಿವರಿಸಲಾಗಿದೆ. ವಿಡಿಯೊದಲ್ಲಿ ಪ್ರಸ್ತಾಪವಾಗಿರುವ ಮುಖ್ಯ ಅಂಶಗಳಿವು…

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

nimma_future star⭐ (@nimma_futurestar1818) ರಿಂದ ಹಂಚಲಾದ ಪೋಸ್ಟ್

‘ನೋಡಿ ಸರ್, ಇದು ಮುಖ್ಯವಾಗಿ ಆರ್​​ಟಿಪಿಎಸ್​, ಕೆಪಿಸಿಎಲ್ ಎಂಡಿ ಶ್ರೀಕಾಂತ್ ಅವರಿಗೆ ತಿಳಿಸುತ್ತೇನೆ. ಮಿಲ್ ಮೇಂಟೆನನ್ಸ್ ವಿಭಾಗದಲ್ಲಿ 10 ವರ್ಷದಿಂದ ಕೆಲಸ ಮಾಡ್ತಿದ್ದೇನೆ. ಆಗಸ್ಟ್ 6ಕ್ಕೆ ನೀವು ಬಂದಿದ್ರಿ. ನಿಮ್ಮನ್ನು ಮೀಟ್ ಮಾಡಿದ ನಂತರ ರಂಪಾಟ ಆಯಿತು. ಇದು ನಮ್ಮ ನೆಲ-ಜಲ, ನಮ್ಮೂರು. ಇಲ್ಲಿ ಕಾರ್ಖಾನೆ ಹಾಕಿ, ನಮ್ಮನ್ನು ಕಾರ್ಮಿಕರನ್ನಾಗಿ ಮಾಡಿದ್ದೀರಿ. ನಮ್ಮ ಸೌಕರ್ಯ ನಮಗೆ ಕೊಡಿ ಸರ್. ಸರ್ಕಾರಿ ನೌಕರರು, ಖಾಸಗಿ ನೌಕರರು – ಎಲ್ಲರೂ ಮನುಷ್ಯರೇ ಅಲ್ವಾ? ಅಕ್ಷರ ಕಲಿತವರು ನ್ಯಾಯವಾಗಿ ಅಲ್ಲಿನ ಜನರಿಗೆ ಸಮೃದ್ಧ ಜೀವನ ಕೊಡಬೇಕು. ಅಧಿಕಾರಿಗಳಿಗಷ್ಟೇ ದೊಡ್ಡವರ ಪರಿಚಯನಾ? ನಾವು ಮಧ್ಯಮವರ್ಗದವರು ಕೆಲಸ ಬಿಟ್ರೆ, ಫ್ಯಾಮಿಲಿ, ಫ್ಯಾಮಿಲ ಬಿಟ್ರೆ ಕೆಲಸ. ನಾವು ಎಲ್ಲಿಗೂ ಹೋಗೋಕೆ ಆಗಲ್ಲ. 11ನೇ ವರ್ಷ ಇದು. ನಮ್ಮ ಕೆಲಸ ಚೆನ್ನಾಗಿ ಮಾಡ್ತಿದ್ದೀವಿ. ಈಗ ನಾನು ಹೇಳೋದನ್ನೇ ಎಲ್ಲ ಕಾರ್ಮಿಕರೂ ಹೇಳ್ತಾರೆ. ನೀವು ಕಾರ್ಮಿರನ್ನು ಸರಿಯಾಗಿ ನೋಡಿಕೊಳ್ಳುವರ ಕೈಗೆ ಟೆಂಡರ್ ಕೊಟ್ರೆ ಪರವಾಗಿಲ್ಲ. ಆದರೆ ಇಲ್ಲಿ ಏನಾಗಿದೆ? ನಮ್ಮ ಗತಿ ಎನು? ನಾವು ಯಾರ ಹತ್ತಿರ ಕೇಳಬೇಕು? ನಿಮ್ಮನ್ನು ಭೇಟಿಯಾಗದಿದ್ದರೆ ದುಪ್ಪಟ್ಟು ಸಂಬಳ ಕೊಡ್ತೀವಿ ಅಂತಾರೆ? ಈ ರೀತಿ ಅಂದ್ರೆ ಏನು ಸರ್? ನೀವು ಖುದ್ದಾಗಿ ಮಾತಾಡಬೇಕು, ಬಹಿರಂಗವಾಗಿ ಸೌಕರ್ಯಗಳನ್ನು ಘೋಷಿಸಬೇಕು. ಘಟಕಗಳಲ್ಲಿ ಕೆಲಸ ಮಾಡುವವರ ಶ್ರಮ ನೋಡಿ ಸರ್. ಒಂದು ಮನೆಯಲ್ಲಿ 5 ಜನ ಇರ್ತೀವಿ. ಸಿಹಿ ಮಾಡಿದಾಗ, ಐದೂ ಜನರೂ ತಿನ್ನಬೇಕು ಅಲ್ವಾ? ಇದು ಒಂದು ಮನೆ ಸರ್. ನಮಗೆ ನಿಮ್ಮಷ್ಟು ಸವಲತ್ತು ಬೇಡ. ಆದರೆ ಸಿಗಬೇಕಾದ್ದನ್ನು ನೀವೇ ಖುದ್ದಾಗಿ ನಿಂತು ಕೊಡಿಸಬೇಕು. ನೀವು ನಮಗೆ ತಂದೆ-ತಾಯಿ ಇದ್ದಂತೆ. ಮೆಗಾ ಟೆಂಡರ್​ ಆಗಿ ಎಷ್ಟು ದಿನ ಆಯ್ತು? ನಾವು ಕೇಳಿದರೆ ಯಾರೂ ಉತ್ತರ ಕೊಡಲ್ಲ. ನಮ್ಮ ಲೀಡರ್​ಗೆ ನೀವು ರೆಸ್ಪಾನ್ಸ್​ ಮಾಡ್ತಿಲ್ಲ. ನಾವು ನಿಮ್ಮ ಮಕ್ಕಳು. ದಯವಿಟ್ಟು ಅನ್ಯಾಯ ಮಾಡಬೇಡಿ’ ಎಂದು ಕೋರಿದ್ದಾರೆ.

Published On - 11:45 am, Mon, 17 October 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್