Rajya Sabha Election Results 2022 Live: ಮತ ಎಣಿಕೆ ಮುಕ್ತಾಯ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ಗೆ 46 ಮತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 10, 2022 | 10:29 PM

ರಾಜ್ಯಸಭಾ ಚುನಾವಣೆ 2022 Live: ರಾಜ್ಯಸಭೆಯು ಪ್ರಸ್ತುತ 245 ಸದಸ್ಯರನ್ನು ಹೊಂದಿದೆ. ಇದರಲ್ಲಿ 233 ಚುನಾಯಿತ ಮತ್ತು 12 ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ. ಸಂವಿಧಾನದ ಪ್ರಕಾರ ಮೇಲ್ಮನೆಯು 250 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬಾರದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 233 ಸದಸ್ಯರನ್ನು ಆಯ್ಕೆ ಮಾಡಿದರೆ ಭಾರತದ ರಾಷ್ಟ್ರಪತಿಗಳು ಉಳಿದ 12 ಮಂದಿಯನ್ನು ನಾಮನಿರ್ದೇಶನ ಮಾಡುತ್ತಾರೆ. 

Rajya Sabha Election Results 2022 Live: ಮತ ಎಣಿಕೆ ಮುಕ್ತಾಯ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ಗೆ 46 ಮತ
Rajya Sabha Election 2022

Rajya Sabha Elections 2022 LIVE News Updates: ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ. ನಾಲ್ಕು ರಾಜ್ಯಗಳಲ್ಲಿ ಖಾಲಿ ಇರುವ 16 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದೆ. ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣ. ರಾಜ್ಯಸಭಾ ಚುನಾವಣೆಯನ್ನು ಜೂನ್ 10 ರಂದು 57 ಖಾಲಿ ಸ್ಥಾನಗಳನ್ನು ತುಂಬಲು ನಿಗದಿಪಡಿಸಲಾಗಿತ್ತು. ಆದಾಗ್ಯೂ ಹಲವಾರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು. ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಮೇಲ್ಮನೆಯ ಚುನಾವಣೆ ನಿರ್ಣಾಯಕವಾಗಿದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಂತ ಕಷ್ಟಕರವಾದ ಸ್ಪರ್ಧೆಗಳು ಕಂಡುಬರುತ್ತವೆ. ಉತ್ತರ ಪ್ರದೇಶವು ಹೆಚ್ಚು ಸ್ಥಾನಗಳನ್ನು ಹೊಂದಿದೆ, ಒಟ್ಟು 11 ಸ್ಥಾನಗಳನ್ನು ಹೊಂದಿದೆ. ತಲಾ ಆರು ಸ್ಥಾನಗಳೊಂದಿಗೆ ಮಹಾರಾಷ್ಟ್ರ ಮತ್ತು ತಮಿಳುನಾಡು ಮುಂದಿನ ಎರಡು ರಾಜ್ಯಗಳಾಗಿವೆ.

ರಾಜ್ಯಸಭೆಯು ಪ್ರಸ್ತುತ 245 ಸದಸ್ಯರನ್ನು ಹೊಂದಿದೆ. ಇದರಲ್ಲಿ 233 ಚುನಾಯಿತ ಮತ್ತು 12 ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ. ಸಂವಿಧಾನದ ಪ್ರಕಾರ ಮೇಲ್ಮನೆಯು 250 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರಬಾರದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 233 ಸದಸ್ಯರನ್ನು ಆಯ್ಕೆ ಮಾಡಿದರೆ ಭಾರತದ ರಾಷ್ಟ್ರಪತಿಗಳು ಉಳಿದ 12 ಮಂದಿಯನ್ನು ನಾಮನಿರ್ದೇಶನ ಮಾಡುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LIVE NEWS & UPDATES

The liveblog has ended.
  • 10 Jun 2022 08:32 PM (IST)

    ಜೆಡಿಎಸ್​ನಿಂದ ಮತ್ತೊಂದು ಅಡ್ಡಮತದಾನ

    ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿರುವ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿ ಲೆಹರ್​ ಸಿಂಗ್ ಅವರಿ​ಗೆ​ ಮತಹಾಕಿದ್ದಾರೆ. ಹೆಸರು ಮುಚ್ಚಿಟ್ಟು ರೇವಣ್ಣಗೆ ಖಾಲಿ ಪತ್ರ ತೋರಿಸಿದ್ದ ಶ್ರೀನಿವಾಸ್ ಲಹರ್​ಸಿಂಗ್​ಗೆ ಮೊದಲ ಮತ ಹಾಕಿದ್ದರು. ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಸಹ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟಿದ್ದರು. ಇದೀಗ ಎಸ್​.ಆರ್.ಶ್ರೀನಿವಾಸ್ ಸಹ ಅಡ್ಡ ಮತದಾನ ಮಾಡಿರುವುದು ಜಗಜ್ಜಾಹೀರಾಗಿದೆ.

  • 10 Jun 2022 08:26 PM (IST)

    ಮತ ಎಣಿಕೆ ಮುಕ್ತಾಯ

    ಬೆಂಗಳೂರು: ರಾಜ್ಯಸಭಾ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಮೊದಲನೇ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಅವರಿಗೆ 46 ಮತಗಳು ಸಿಕ್ಕಿವೆ. ಕಾಂಗ್ರೆಸ್​ನ ಜೈರಾಂ ರಮೇಶ್ ಅವರಿಗೂ 46 ಮತಗಳು ಸಿಕ್ಕಿದೆ. ಕಾಂಗ್ರೆಸ್​ನ ಮನ್ಸೂರ್ ಅಲಿಖಾನ್ ಅವರಿಗೆ 25 ಮತ್ತು ಬಿಜೆಪಿ ಲಹರ್ ಸಿಂಗ್ ಅವರಿಗೆ 33, ಜೆಡಿಎಸ್​ನ ಕುಪೇಂದ್ರ ರೆಡ್ಡಿ ಅವರಿಗೆ 30 ಮತಗಳು ಸಿಕ್ಕಿವೆ.


  • 10 Jun 2022 07:22 PM (IST)

    ಅಧಿಕೃತ ಘೋಷಣೆ ತಡ

    ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದರೂ, ಅಭ್ಯರ್ಥಿಗಳ ಗೆಲುವು ಅಧಿಕೃತ ಘೋಷಣೆ ತಡವಾಗಲಿದೆ. ಮತ ಎಣಿಕೆ ಮುಗಿದ ಬಳಿಕ ಚುನಾವಣಾ ಆಯೋಗಕ್ಕೆ ಚುನಾವಣಾಧಿಕಾರಿ ಫಲಿತಾಂಶ ಕಳುಹಿಸಲಿದ್ದಾರೆ. ನಂತರ ಕೇಂದ್ರ ಚುನಾವಣಾ ಆಯೋಗವೇ ಅಭ್ಯರ್ಥಿಗಳ ಗೆಲುವನ್ನು ಅಧಿಕೃತವಾಗಿ ಘೋಷಿಸಲಿದೆ.

  • 10 Jun 2022 07:18 PM (IST)

    ಎಚ್​ಡಿ ರೇವಣ್ಣ ಮತ ಊರ್ಜಿತ: ಕೇಂದ್ರ ಚುನಾವಣಾ ಆಯೋಗ ಆದೇಶ

    ದೆಹಲಿ: ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ಅವರು ರಾಜ್ಯಸಭಾ ಚುನಾವಣೆಗೆ ಚಲಾವಣೆ ಮಾಡಿದ್ದ ಮತಕ್ಕೆ ಸಿಂಧುತ್ವ ನೀಡಿ ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿದೆ. ಗೌಪ್ಯತಾ ನಿಯಮ ಉಲ್ಲಂಘನೆ ಆರೋಪದ ಮೇಲೆ ಕಾಂಗ್ರೆಸ್‌ ಮತ್ತು ಬಿಜೆಪಿ ದೂರು ನೀಡಿದ್ದವು. ಕಾಂಗ್ರೆಸ್‌ ಮತ್ತು ಬಿಜೆಪಿ ಮನವಿ ತಿರಸ್ಕರಿಸಿರುವ ಕೇಂದ್ರ ಆಯೋಗವು ಮತ ಸಿಂಧುಗೊಳಿಸಿ ಆದೇಶ ನೀಡಿದೆ.

  • 10 Jun 2022 03:58 PM (IST)

    ರಾಜ್ಯಸಭೆ ಚುನಾವಣೆ: ಫಲಿತಾಂಶದ ಅಧಿಕೃತ ಘೋಷಣೆಗೆ ಕ್ಷಣಗಣನೆ

    ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ನಡೆದ ಮತದಾನ ಅಂತ್ಯಗೊಂಡಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಜೂನ್ 10) ಸಂಜೆ ವೇಳೆಗೆ ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ. ಬಿಜೆಪಿಯ ಮೂವರು, ಕಾಂಗ್ರೆಸ್​​ನ ಒಬ್ಬರಿಗೆ ಗೆಲುವು ಖಚಿತ. ಆದರೆ ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ. ಕರ್ನಾಟಕದಿಂದ ಲಭ್ಯವಿದ್ದ 4 ರಾಜ್ಯಸಭಾ ಸ್ಥಾನಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್​​ನಿಂದ ಇಬ್ಬರು, ಬಿಜೆಪಿಯಿಂದ ಮೂವರು, ಜೆಡಿಎಸ್​ನಿಂದ ಒಬ್ಬರು ಕಣದಲ್ಲಿದ್ದರು.

  • 10 Jun 2022 03:54 PM (IST)

    ಶ್ರೀನಿವಾಸಗೌಡ ಮನೆ ಎದುರು ಜೆಡಿಎಸ್ ಪ್ರತಿಭಟನೆ

    ಕೋಲಾರ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ನಿವಾಸದ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

  • 10 Jun 2022 03:47 PM (IST)

    ಮತ ಅಸಿಂಧುಗೊಳಿಸಲು ದೂರು: ರೇವಣ್ಣ ಆಕ್ರೋಶ

    ಬೆಂಗಳೂರು: ಜೆಡಿಎಸ್ ಶಾಸಕ ಎಚ್​.ಡಿ.ರೇವಣ್ಣ ಚಲಾವಣೆ ಮಾಡಿರುವ ಮತವನ್ನು ಅಸಿಂಧುಗೊಳಿಸಬೇಕು ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ರೇವಣ್ಣ ಏರಿದ ದನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಏಜೆಂಟ್​​ಗಳ ಜೊತೆ ರೇವಣ್ಣ ವಾಗ್ವಾದಕ್ಕಿಳಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಚುನಾವಣಾಧಿಕಾರಿ ವಿಶಾಲಾಕ್ಷಿ, ಪರಿಸ್ಥಿತಿ ತಿಳಿಗೊಳಿಸಿದರು.

  • 10 Jun 2022 03:22 PM (IST)

    ಕೋಲಾರ: ಶ್ರೀನಿವಾಸಗೌಡ ಮನೆ ಎದುರು ಪೊಲೀಸ್ ಬಂದೋಬಸ್ತ್

    ಕೋಲಾರ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಮನೆ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದ್ದಾರೆ.

  • 10 Jun 2022 03:19 PM (IST)

    ರೇವಣ್ಣ ಮತ ಅಸಿಂಧುಗೊಳಿಸದ ಚುನಾವಣಾಧಿಕಾರಿ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪ

    ಬೆಂಗಳೂರು: ಚುನಾವಣಾ ಅಧಿಕಾರಿ ವಿಶಾಲಾಕ್ಷಿ ಅವರು ಜೆಡಿಎಸ್ ಶಾಸಕ ಎಚ್​.ಡಿ.ರೇವಣ್ಣ ಅವರಿಗೆ ಕ್ಲೀನ್​​ಚಿಟ್ ಕೊಟ್ಟಿರುವ ಕ್ರಮವನ್ನು ಪ್ರಶ್ನಿಸಲು ಕಾಂಗ್ರೆಸ್ ನಿರ್ಧರಿಸಿದೆ. ರೇವಣ್ಣ ಮತ ಅಸಿಂಧುಗೊಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ದೂರು ನೀಡಿದ್ದವು. ರೇವಣ್ಣ ಮತ ಚಲಾಯಿಸಿದ ವಿಡಿಯೊ ಪರಿಶೀಲಿಸಿದ್ದ ವಿಶಾಲಾಕ್ಷಿ ಅವರು ಕ್ಲೀನ್​​ಚಿಟ್ ನೀಡಿದ್ದರು.

  • 10 Jun 2022 02:40 PM (IST)

    ಹೈಜಾಕ್ ಆರೋಪ ತಳ್ಳಿ ಹಾಕಿದ ಡಿಕೆ ಶಿವಕುಮಾರ್

    ಬೆಂಗಳೂರು: ‘ಕಾಂಗ್ರೆಸ್ ನಮ್ಮ ಶಾಸಕರನ್ನು ಹೈಜಾಕ್ ಮಾಡಿದೆ’ ಎನ್ನುವ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಳ್ಳಿಹಾಕಿದ್ದಾರೆ. ಹೈಜಾಕ್ ಮಾಡಬೇಕು ಎಂದು ನಿರ್ಧರಿಸಿದ್ದರೆ 12 ಜನರು ಇದ್ದರು. ನಮಗೆ ಅದರ ಅವಶ್ಯಕತೆಯಿಲ್ಲ. ನಮ್ಮ ಸ್ನೇಹಿತರಿಗೆ ನಾವು ಮುಜುಗರ ತರುವುದಿಲ್ಲ. ಪಕ್ಷದ ಅಧ್ಯಕ್ಷರಾಗಿ, ಪಕ್ಷದ ಏಜೆಂಟ್ ಆಗಿ ನಾನು ಮತದಾನ ನಡೆಯುವ ಸ್ಥಳದಲ್ಲಿ ಇದ್ದೆ. ಗೌಪ್ಯ ಮಾತದಾನದ ಬಗ್ಗೆ ಮಾತನಾಡುವ ಹಕ್ಕು ಇಲ್ಲ. ನಮ್ಮ ಪಕ್ಷದ 69 ಶಾಸಕರು ಮತ ಹಾಕಿರುವುದನ್ನು ನೋಡಿದ್ದೇನೆ. ಜೆಡಿಎಸ್ ಶಾಸಕರು ಕಾಂಗ್ರೆಸ್​ಗೆ ಮತಹಾಕಿರುವ ವಿಚಾರ ನನಗೆ ಗೊತ್ತಿಲ್ಲ. ಶ್ರೀನಿವಾಸ ಗೌಡರು ನನ್ನ ಸ್ನೇಹಿತರು ಎಂದಷ್ಟೇ ಹೇಳಿದರು.

  • 10 Jun 2022 02:21 PM (IST)

    ನಾನು ಖಾಲಿ ಬ್ಯಾಲೆಟ್ ಹಾಕಿಲ್ಲ: ಗುಬ್ಬಿ ಶಾಸಕ ಶ್ರೀನಿವಾಸ್

    ತುಮಕೂರು: ನಾನು ಜೆಡಿಎಸ್​ಗೆ ಮತದಾನ ನೀಡಿದ್ದೇನೆ. ಖಾಲಿ‌ ಬ್ಯಾಲೆಟ್ ಪೇಪರ್ ಹಾಕಿಲ್ಲ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು. ಸಂಜೆಯವರೆಗೂ ಕಾದು ನೋಡಿದರೆ ವಿಷಯ ಏನೆಂದು ಸ್ಪಷ್ಟವಾಗಲಿದೆ. ನಮ್ಮ ನಾಯಕರಿಗೆ ಯಾಕೆ ಅಸಮಾಧಾನ ಇದೆಯೋ ಗೊತ್ತಿಲ್ಲ. ನಿನ್ನೆ ಸಂಜೆ 5 ಗಂಟೆಗೆ ಕುಮಾರಸ್ವಾಮಿಯವರು ಸಾರಾ ಮಹೇಶ್ ಮೂಲಕ ಸಂಪರ್ಕ ಮಾಡಿದ್ದರು. ನಾನು ಬರುತ್ತೇನೆ ಎಂದು ಹೇಳಿದ್ದೆ, ಅದರಂತೆ ಬಂದು ಜೆಡಿಎಸ್​ಗೆ ಮತ ಹಾಕಿದ್ದೇನೆ. ಆದರೂ ಕುಮಾರಸ್ವಾಮಿ ‘ಮಾನಮರ್ಯಾದೆ ಇಲ್ವಾ’ ಅಂತಾ ಮಾತನಾಡಿದ್ದಾರೆ. ಇದರ ಬಗ್ಗೆ ಸಂಜೆ ತಿಳಿಯಲಿದೆ ಎಂದು ಟಿವಿ9ಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಹೇಳಿದರು.

  • 10 Jun 2022 02:09 PM (IST)

    ರಾಜ್ಯಸಭೆ ಮತದಾನ ಅಂತ್ಯ

    ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ನಡೆದ ಮತದಾನ ಮಧ್ಯಾಹ್ನ 2 ಗಂಟೆ ವೇಳೆಗೆ ಅಂತ್ಯವಾಗಿದೆ. ಒಟ್ಟು 224 ಶಾಸಕರು ಮತ ಚಲಾಯಿಸಿದ್ದಾರೆ. ಓರ್ವ ಶಾಸಕರಿಂದ ಅಡ್ಡ ಮತದಾನವಾಗಿದೆ (ಕ್ರಾಸ್​ ವೋಟಿಂಗ್). ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಿತು. ಇಂದು ಸಂಜೆಯೇ ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಮತದಾನ ಪ್ರಕ್ರಿಯೆಗೆ ಇನ್ನೂ ಎರಡು ತಾಸು ಬಾಕಿಯಿರುವಂತೆಯೇ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಅಧಿಕೃತವಾಗಿ ಮತದಾನದ ಸಮಯವು ಸಂಜೆ 4 ಗಂಟೆಗೆ ಅಂತ್ಯಗೊಳ್ಳುತ್ತದೆ.

  • 10 Jun 2022 02:01 PM (IST)

    Rajya Sabha Election 2022 Live: ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ

    ಗೌಪ್ಯ ಮತದಾನದ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಶಾಸಕರು ಪ್ರಾಮಾಣಿಕವಾಗಿ ಮತ ಚಲಾಯಿಸಿದ್ದಾರೆ. ಹೈಜಾಕ್ ಮಾಬೇಕಿದ್ರೆ ಸುಮಾರು ಶಾಸಕರಿದ್ದರು, ನಾವು ಮಾಡಲಿಲ್ಲ ಎಂದು ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.

  • 10 Jun 2022 01:53 PM (IST)

    Rajya Sabha Election 2022 Live: ನಮ್ಮ ಶಾಸಕರಲ್ಲಿ ಎಷ್ಟೇ ವಿರಸ ಇದ್ರೂ ನಮ್ಮ ಮತ ಪಕ್ಷಕ್ಕೆ

    ನಮ್ಮ ಶಾಸಕರಲ್ಲಿ ಎಷ್ಟೇ ವಿರಸ ಇದ್ರೂ ನಮ್ಮ ಮತ ಪಕ್ಷಕ್ಕೆ. ನನ್ನ ಕ್ಷೇತ್ರದ ಮತದಾರರು ಮತ ಕೊಟ್ಟಿದ್ದು ಜೆಡಿಎಸ್​ ಪಕ್ಷಕ್ಕೆ ಎಂದು ವಿಧಾನಸೌಧದಲ್ಲಿ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದರು. ನಾನು ನನ್ನ ಜೆಡಿಎಸ್​ ಅಭ್ಯರ್ಥಿಗೇ ಮತ ಹಾಕುತ್ತೇನೆ ಎಂದು ಹೇಳಿದರು.

  • 10 Jun 2022 01:42 PM (IST)

    Rajya Sabha Election 2022 Live: ಮಾಜಿ ಸಚಿವ ಹೆಚ್​.ಡಿ.ರೇವಣ್ಣಗೆ ಕ್ಲೀನ್​ ಚಿಟ್

    ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸಲು ದೂರು ವಿಚಾರವಾಗಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣಗೆ ಕ್ಲೀನ್​ ಚಿಟ್ ನೀಡಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ದೂರನ್ನು ಆಯೋಗ ತಿರಸ್ಕರಿಸಿದೆ. ಸಿಸಿಟಿವಿಯಲ್ಲಿ ಎಲ್ಲಾ ರೀತಿಯ ಪರಿಶೀಲನೆ ನಡೆಸಲಾಗಿದೆ. ಯಾವುದೇ ರೀತಿಯಲ್ಲೂ ಮತ ಅಸಿಂಧು ಆಗಿಲ್ಲ. ರಾಜ್ಯ ಚುನಾವಣಾ ಅಧಿಕಾರಿ ವೀಶಾಲಾಕ್ಷಿ ಪತ್ರದಲ್ಲಿ ತಿಳಿಸಿದ್ದಾರೆ.

  • 10 Jun 2022 01:13 PM (IST)

    Rajya Sabha Election 2022 Live: ಇಲ್ಲಿಂದ ಹೊಸ ರಾಜಕೀಯದ ಚಾಪ್ಟರ್ ಶುರುವಾಗುತ್ತದೆ

    ಇಬ್ಬರು ಅಡ್ಡ ಮತದಾನ ಮಾಡುವ ನಿರೀಕ್ಷೆ ಮೊದಲೇ ಇತ್ತು ಎಂದು ಟಿವಿ 9ಗೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದರು. ಇಲ್ಲಿಂದ ಹೊಸ ರಾಜಕೀಯದ ಚಾಪ್ಟರ್ ಶುರುವಾಗುತ್ತದೆ. ಜನ ಹೊಸ ಚಾಪ್ಟರ್ ಶುರು ಮಾಡುತ್ತಾರೆ. 8-10 ಜನ ಅಡ್ಡಮತದಾನ ಮಾಡ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನ ಕಾಂಗ್ರೆಸ್​​ಗೆ ಗೂಟ ಹೊಡೆಯುತ್ತಾರೆ ಎಂದು ಹೇಳಿದರು.

  • 10 Jun 2022 12:44 PM (IST)

    Rajya Sabha Election 2022 Live: ಶ್ರೀನಿವಾಸ್​ಗೌಡ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕೆಂಡ

    ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ. ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮ ಅಗತ್ಯವಿಲ್ಲ ಎಂದು ಶ್ರೀನಿವಾಸ್​ಗೌಡ ವಿರುದ್ಧ ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. ಈ ರೀತಿಯಾಗಿ ಮಾಡಿ ಜನರ ಮುಂದೆ ಹೇಗೆ ಹೋಗ್ತಾರೆ. ಇಂತಹವರು ಪ್ರಜಾಪ್ರಭುತ್ವ ಉಳಿಸುತ್ತಾರಾ. ಕಾಂಗ್ರೆಸ್​ನವರಿಗೆ ಶ್ರೀನಿವಾಸ್​ಗೌಡರ ಮತದಿಂದ ಏನ್​​ ಸಿಕ್ತು. ನೀವು ಬಿಜೆಪಿ ಗೆಲ್ಲಿಸಿಕೊಂಡು ಜನರ ಮುಂದೆ ಹೇಗೆ ಹೋಗ್ತೀರಿ ಎಂದು ಕಿಡಿಕಾರಿದರು. ಇವತ್ತು ಬಿಜೆಪಿ ಏನಾದ್ರು ಗೆದ್ದರೆ ಅದು ಕಾಂಗ್ರೆಸ್​ನಿಂದಲೇ. ಕಾಂಗ್ರೆಸ್​ನವರು ಇನ್ನೂ ಮತ ಹಾಕುವುದಕ್ಕೆ ಬಂದಿಲ್ಲ. ಬಿಜೆಪಿಯವರಿಗೆ ಮತ ಹಾಕಲು ಕಾಯ್ಕೊಂಡು ಕುಳಿತಿದ್ದಾರೆ ಎಂದರು.

  • 10 Jun 2022 12:30 PM (IST)

    Rajya Sabha Election 2022 Live: ಮಹಾರಾಷ್ಟ್ರ: ಶೇ. 50ರಷ್ಟು ಮತದಾನ ಪೂರ್ಣ

    ಮಹಾರಾಷ್ಟ್ರದಲ್ಲಿ ಮೊದಲ 1.5 ಗಂಟೆಗಳಲ್ಲಿ ಶೇ.50ರಷ್ಟು ಮತದಾನ ಪೂರ್ಣಗೊಂಡಿದೆ. 143 ಶಾಸಕರು ಮತದಾನದ ಹಕ್ಕನ್ನು ಚಲಾಯಿಸಲಾಗಿದೆ. 60 ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು 20 ಕಾಂಗ್ರೆಸ್ ಶಾಸಕರು ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಿದ್ದಾರೆ.

  • 10 Jun 2022 12:20 PM (IST)

    Rajya Sabha Election 2022 Live: ಬಿಜೆಪಿ ಅಭ್ಯರ್ಥಿಗಳ ಪರ ಮತದಾನದ ಲೆಕ್ಕಾಚಾರ

    ಬಿಜೆಪಿ ಎಲ್ಲಾ ಮತಗಳು ಪೂರ್ಣವಾಗಿದೆ. ನಿರ್ಮಲಾ ಸೀತಾರಾಮನ್​ಗೆ 46 ಮೊದಲ ಪ್ರಾಶಸ್ತ್ಯದ ಮತಗಳು. ಜಗ್ಗೇಶ್​ಗೆ 44 ಎರಡನೇ ಪ್ರಾಶಸ್ತ್ಯದ ಮತಗಳು ಮತ್ತು ಲೆಹರ್ ಸಿಂಗ್​ಗೆ 32 ಮೊದಲ ಪ್ರಾಶಸ್ತ್ಯದ ಮತಗಳು ಚಲಾವಣೆಯಾಗಿದೆ. ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕ ಜಗ್ಗೇಶ್ ಗೆಲ್ಲಲಿದ್ದಾರೆ.  ನಿರ್ಮಲಾ ಸೀತಾರಾಮನ್ ಬಳಿ ಇರುವ ಮೊದಲ ಪ್ರಾಶಸ್ತ್ಯದ 1.17 ಮತಗಳು ಲೆಹರ್ ಸಿಂಗ್​ಗೆ ವರ್ಗಾವಣೆಯಾಗಲಿದ್ದು, ಆಗ ಲೆಹರ್ ಸಿಂಗ್​ಗೆ 33.17 ಮತಗಳಾಗಲಿವೆ. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್ ಮತಗಳು 33.17 ದಾಟಿದರೆ ಮಾತ್ರ ಮನ್ಸೂರ್ ಖಾನ್ ಅಥವಾ ಕುಪೇಂದ್ರ ರೆಡ್ಡಿ ಗೆಲುವು,
    ಇಲ್ಲದಿದ್ದರೆ ಲೆಹರ್ ಸಿಂಗ್ ಗೆಲುವು ನಿರಾಯಾಸವಾಗಲಿದೆ. ಒಂದು ವೇಳೆ ಕಾಂಗ್ರೆಸ್ ಅಥವಾ ಜೆಡಿಎಸ್​ನಿಂದ ಬಿಜೆಪಿಗೆ ಅಡ್ಡ ಮತದಾನವಾದಲ್ಲಿ 33.17 ನಂತರ ಲೆಹರ್ ಸಿಂಗ್ ಮತಗಳು ಏರಿಕೆಯಾಗುತ್ತಾ ಹೋಗಲಿವೆ.

  • 10 Jun 2022 12:16 PM (IST)

    Rajya Sabha Election 2022 Live: ರಾಹುಕಾಲ ಬಳಿಕ ಮತದಾನಕ್ಕೆ ಹೊರಟ JDS ಶಾಸಕರು

    ರಾಹುಕಾಲ ಬಳಿಕ ಜೆಡಿಎಸ್​ ಶಾಸಕರು ಮತದಾನಕ್ಕೆ ಹೊರಟಿದ್ದಾರೆ. 10:30 ರಿಂದ 12 ಗಂಟೆಯವರೆಗೆ ರಾಹುಕಾಲ ಇದ್ದ ಹಿನ್ನೆಲೆ
    ರಾಹುಕಾಲ ಬಳಿಕ ಮತದಾನಕ್ಕೆ ಹೊರಟಿದ್ದಾರೆ. ವಿಧಾನಸೌಧದಲ್ಲಿ ಜೆಡಿಎಸ್​ ನಾಯಕರಿಂದ ಮತದಾನ ಮಾಡಿದ್ದು, ಕುಮಾರಸ್ವಾಮಿ ಮತ ಚಲಾವಣೆ ಮಾಡಿದರು.

  • 10 Jun 2022 12:08 PM (IST)

    Rajya Sabha Election 2022 Live: ನಾನು ಕಾಂಗ್ರೆಸ್​ಗೆ ಮತ ಹಾಕಿದ್ದೇನೆ ಎಂದ ಶ್ರೀನಿವಾಸ್​ಗೌಡ

    ನಾನು ಕಾಂಗ್ರೆಸ್​ಗೆ ಮತ ಹಾಕಿದ್ದೇನೆ ಎಂದು ವಿಧಾನಸೌಧದಲ್ಲಿ ಜೆಡಿಎಸ್​​ ಶಾಸಕ ಶ್ರೀನಿವಾಸ್​ಗೌಡ ಹೇಳಿಕೆ ನೀಡಿದರು. ನಾನು ಹಿಂದೆ ಕಾಂಗ್ರೆಸ್​ನಿಂದಲೇ ಸಚಿವನಾಗಿದ್ದೆ. ಕುಮಾರಸ್ವಾಮಿ ಸಿಟ್ಟಾದ್ರೆ ಆಗಲಿ ಬಿಡಿ. ರಾಜಕೀಯದಲ್ಲಿ ಇದೆಲ್ಲಾ ಕಾಮನ್ ಎಂದು ಶ್ರೀನಿವಾಸ್​ಗೌಡ ಹೇಳಿದರು.

  • 10 Jun 2022 12:01 PM (IST)

    Rajya Sabha Election 2022 Live: ಕಾಂಗ್ರೆಸ್ ಕಡೆಯೇ ವಾಲಿದ ಶರತ್

    ಒಂದೂವರೆ ವರ್ಷದಿಂದ ಕಾಂಗ್ರೆಸ್ ನಾಯಕರ ಜೊತೆ ಗುರುತಿಸಿಕೊಂಡಿದ್ದೇನೆ. ಈಗ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತೇನೆ. ನಂತರ ಯಾರಿಗೆ ಮತ ಹಾಕಬೇಕೆಂದು ತೀರ್ಮಾನ ಮಾಡುತ್ತೇನೆ. ಯಾವುದೇ ಬಿಜೆಪಿ ನಾಯಕರೂ ಕೂಡ ನನ್ನ ಸಂಪರ್ಕ ಮಾಡಿಲ್ಲ ಎಂದು ವಿಧಾನಸೌಧ ಬಳಿ ಶಾಸಕ ಶರತ್ ಬಚ್ಚೇಗೌಡ ಹೇಳಿಕೆ ನೀಡಿದರು. ಕಾಂಗ್ರೆಸ್​ನ ಮನ್ಸೂರ್​ಗೆ ಶರತ್ ಬಚ್ಚೇಗೌಡ ಅಭಿನಂದಿಸಿದ್ದು, ಕಾಂಗ್ರೆಸ್ ಕಡೆಯೇ ವಾಲಿದ್ದಾರೆ.

  • 10 Jun 2022 11:46 AM (IST)

    Rajya Sabha Election 2022 Live: ಬಿಜೆಪಿಯ ಎಲ್ಲ ಶಾಸಕರ ಮತಗಳು ಪೂರ್ಣ

    ಬಿಜೆಪಿಯ ಎಲ್ಲ ಶಾಸಕರ ಮತಗಳು ಪೂರ್ಣವಾಗಿದೆ. ಈವರೆಗೆ ಕಾಂಗ್ರೆಸ್​ ಪಕ್ಷದ 40​ ಶಾಸಕರಿಂದ ಮತ ಚಲಾವಣೆ ಮಾಡಲಾಗಿದ್ದು, ಬಿಜೆಪಿ 120, ಜೆಡಿಎಸ್ 12 ಶಾಸಕರಿಂದ ಮತದಾನ ಮಾಡಲಾಗಿದೆ.

  • 10 Jun 2022 11:35 AM (IST)

    Rajya Sabha Election 2022 Live: ಕಾಂಗ್ರೆಸ್​ನ ಮೊದಲ ಅಭ್ಯರ್ಥಿಗೆ ಮತಗಳು ಪೂರ್ಣ

    ಕಾಂಗ್ರೆಸ್​ನ ಮೊದಲ ಅಭ್ಯರ್ಥಿಗೆ ಮತಗಳು ಪೂರ್ಣವಾಗಿದೆ. ಜೈರಾಂ ರಮೇಶ್​ಗೆ 46 ಮತಗಳು ಪೂರ್ಣವಾಗಿದ್ದು, ಕೈ ಅಭ್ಯರ್ಥಿ ಜೈರಾಂ ರಮೇಶ್​ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈವರೆಗೆ ಕಾಂಗ್ರೆಸ್​ ಪಕ್ಷದ 40​ ಶಾಸಕರಿಂದ ಮತ ಚಲಾವಣೆಯಾಗಿದ್ದು, ಬಿಜೆಪಿ 105, ಜೆಡಿಎಸ್ 12 ಶಾಸಕರಿಂದ ಮತದಾನ ಮಾಡಲಾಗಿದೆ.

  • 10 Jun 2022 11:31 AM (IST)

    Rajya Sabha Election 2022 Live: ಬಿಜೆಪಿ ಅಭ್ಯರ್ಥಿಗಳ ಪರ ಮತದಾನದ ಲೆಕ್ಕಾಚಾರ

    ನಿರ್ಮಲಾ ಸೀತಾರಾಮನ್​ಗೆ 45 ಮತಗಳು ಮೊದಲ ಪ್ರಾಶಸ್ತ್ಯದ ಮತ ಚಲಾವಣೆಯಾಗಿದ್ದು, 39 ದ್ವಿತೀಯ ಪ್ರಾಶಸ್ತ್ಯ ಮತ ಚಲಾವಣೆ ನಡೆಯಲಿದ್ದು, ಅಗತ್ಯ ಬಿದ್ದಲ್ಲಿ ಒಂದು ಮತ ಹೆಚ್ಚುವರಿಯಾಗಿ ಹಾಕಲು ನಿರ್ಧಾರ ಮಾಡಲಾಗಿದೆ. ಜಗ್ಗೇಶ್​ಗೆ 44 ಮೊದಲ ಪ್ರಾಶಸ್ತ್ಯದ ಮತ ಚಲಾವಣೆ, 19 ಎರಡನೇ ಪ್ರಾಶಸ್ತ್ಯ ಮತ ಚಲಾವಣೆ. ಅಗತ್ಯ ಬಿದ್ದಲ್ಲಿ ಎರಡನೇ ಮತ ಹಾಕಲು ನಿರ್ಧಾರ. ಲೆಹರ್ ಸಿಂಗ್​ಗೆ 32 ಮತಗಳು ಮೊದಲ ಪ್ರಾಶಸ್ತ್ಯ, ಹೆಚ್ಚುವರಿಯಾಗಿ ಒಂದು ಮತ ಉಳಿಸಿಕೊಂಡಿರುವ ಬಿಜೆಪಿ,
    32+1= 33 ಮತಗಳನ್ನ ಹಾಕಿ ಮೊದಲ ಪ್ರಾಶಸ್ತ್ಯದಡಿಯಲ್ಲೇ ಗೆಲ್ಲಿಸುವ ಲೆಕ್ಕಾಚಾರ ಹಾಕಿದೆ. ಕಾಂಗ್ರೆಸ್ ಶಾಸಕರು ಜೆಡಿಎಸ್‌ ಅಭ್ಯರ್ಥಿಗೆ ಎರಡನೇ ಪ್ರಾಶಸ್ತ್ಯದ ಮತ ಹಾಕದೇ ಇದ್ದರೆ ಬಿಜೆಪಿಗೆ ಮೂರನೇ ಅಭ್ಯರ್ಥಿ ಗೆಲುವಿನ‌ ಲೆಕ್ಕಾಚಾರ ಹಾಕಿದೆ. ಒಂದು ವೇಳೆ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಎರಡನೇ ಪ್ರಾಶಸ್ತ್ಯದ ಮತ ಹಾಕಿದರೆ ಜೆಡಿಎಸ್ ಗೆಲ್ಲುವ ಸಾಧ್ಯತೆ ಇದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಬಿಜೆಪಿ ರಣತಂತ್ರ ಮಾಡುತ್ತಿದೆ.

  • 10 Jun 2022 11:20 AM (IST)

    Rajya Sabha Election 2022 Live: ಚುನಾವಣಾ ಮತ ಎಣಿಕೆ ವಿಳಂಬವಾಗುವ ಸಾಧ್ಯತೆ

    ಚುನಾವಣಾ ಮತ ಎಣಿಕೆ ವಿಳಂಬವಾಗುವ ಸಾಧ್ಯತೆಯಿದ್ದು, ಸಂಜೆ 5ಗಂಟೆಗೆ ನಿಗದಿಯಾಗಿರುವ ಮತ ಎಣಿಕೆ ಪ್ರಕ್ರಿಯೆ ಕನಿಷ್ಠ ಎರಡು ಗಂಟೆ ಕಾಲ ಮತ ಎಣಿಕೆ ವಿಳಂಬ ಸಾಧ್ಯತೆಯಿದೆ. ರೇವಣ್ಣ ಮತ ಅಸಿಂಧುಗೊಳಿಸುವ ವಿಚಾರವಾಗಿ ಆಯೋಗಕ್ಕೆ  ಬಿಜೆಪಿ, ಕಾಂಗ್ರೆಸ್​ ದೂರು ನೀಡಿದೆ. ಆಯೋಗ ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಮತ ಎಣಿಕೆ ಇಲ್ಲ ಎನ್ನಲಾಗುತ್ತಿದೆ.

  • 10 Jun 2022 11:15 AM (IST)

    Rajya Sabha Election 2022 Live: ಮಹಾರಾಷ್ಟ್ರದಲ್ಲಿ ಆರು ರಾಜ್ಯಸಭೆ ಸ್ಥಾನಗಳಿಗೆ ಮತದಾನ

    ಮಹಾರಾಷ್ಟ್ರದಲ್ಲಿ ಆರು ರಾಜ್ಯಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಎರಡು ಗಂಟೆಯಲ್ಲಿ 50% ಮತದಾನವಾಗಿದೆ. ಒಟ್ಟು 143 ಶಾಸಕರಿಂದ ಮತದಾನವಾಗಿದ್ದು, 60ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು 20 ಕಾಂಗ್ರೆಸ್ ಶಾಸಕರಿಂದ ಮತ ಚಲಾವಣೆ ಮಾಡಲಾಗಿದೆ.

  • 10 Jun 2022 11:12 AM (IST)

    Rajya Sabha Election 2022 Live: ಐದು ಮತಗಳನ್ನು ರಿಸರ್ವ್ ಇಟ್ಟಿರುವ ಕೈ‌ ನಾಯಕರು

    ಮತಗಳು ಅಸಿಂಧು ಆಗದಂತೆ ತಡೆಯಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ತಮ್ಮ ಐದು ಮತಗಳನ್ನು ಕಾಂಗ್ರೆಸ್ ನಾಯಕರು ಕಾಯ್ದಿರಿಸಿಕೊಂಡಿದ್ದಾರೆ. ಕೊನೆಯಲ್ಲಿ ಮತ ಚಲಾಯಿಸಲು ಐವರು ನಾಯಕರು ನಿರ್ಧರಿಸಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಈಶ್ವರ್ ಖಂಡ್ರೆ, ಯು.ಟಿ.ಖಾದರ್​ ಸೇರಿ ಐವರು ನಾಯಕರ ಮತ ರಿಸರ್ವ್ ಮಾಡಲಾಗಿದೆ. JDS​ನಿಂದ ಎಷ್ಟು ಮತ ಬರಬಹುದೆಂಬ ಲೆಕ್ಕಾಚಾರದ ಬಳಿಕ ಮತದಾನ ಮಾಡಲಿದ್ದಾರೆ.

  • 10 Jun 2022 11:06 AM (IST)

    Rajya Sabha Election 2022 Live: ಬಿಜೆಪಿ 2ನೇ ಅಭ್ಯರ್ಥಿ ಜಗ್ಗೇಶ್​ಗೆ 44 ಮತಗಳು ಚಲಾವಣೆ

    ಈವರೆಗೆ ಬಿಜೆಪಿ ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್​ಗೆ 46 ಮತಗಳ ಚಲಾವಣೆಯಾಗಿದೆ. ಎರಡನೇ ಅಭ್ಯರ್ಥಿ ಜಗ್ಗೇಶ್​ಗೆ 44 ಮತ ಬಿಜೆಪಿ ಹಾಕಿದ್ದು, ಕೊನೆಯ ಕ್ಷಣದ ಲೆಕ್ಕಾಚಾರಗಳನ್ನು ಆಧರಿಸಿ ಜಗ್ಗೇಶ್​ಗೆ ಇನ್ನೊಂದು ಪ್ರಥಮ ಪ್ರಾಶಸ್ತ್ಯದ ಮತ ಹಾಕುವುದನ್ನು ಬಿಜೆಪಿ ಇನ್ನೂ ಕೂಡಾ ಕಾಯ್ದಿರಿಸಿದೆ.

  • 10 Jun 2022 11:02 AM (IST)

    Rajya Sabha Election 2022 Live: 2 ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಹೀಗೆ ಮಾಡುತ್ತಿವೆ.

    ರೇವಣ್ಣ ಮತ ಅಸಿಂಧುಗೊಳಿಸಲು ಕಾಂಗ್ರೆಸ್, ಬಿಜೆಪಿ ದೂರು ನೀಡಿದ್ದು, ಈ ಕುರಿತು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. 2 ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಹೀಗೆ ಮಾಡುತ್ತಿವೆ. ಸೋಲುವ ಭೀತಿಯಿಂದ ಈ ರೀತಿಯಾಗಿ ಮಾಡುತ್ತಿವೆ ಎಂದು ಹೇಳಿದರು. ರೇವಣ್ಣ ಮತವನ್ನು ಡಿ.ಕೆ. ಶಿವಕುಮಾರ್​ಗೆ ತೋರಿಸಿದ ತಕ್ಷಣ ಬಿಜೆಪಿ ಆಕ್ಷೇಪ ಎತ್ತಿದ್ದು, ಬಳಿಕ ಲಿಖಿತವಾಗಿ ದೂರು ಸಲ್ಲಿಸಿದೆ. ಒಂದು ಪಕ್ಷದ ಶಾಸಕ ಮತವನ್ನು ಮತ್ತೊಂದು ಪಕ್ಷದ ಏಜೆಂಟ್​ಗೆ ತೋರಿಸುವಂತಿಲ್ಲ.

  • 10 Jun 2022 10:54 AM (IST)

    ಹೆಚ್.ಡಿ. ರೇವಣ್ಣ ಮತ ಅಸಿಂಧುಗೊಳಿಸಲು ದೂರು ನೀಡಿದ ಬಿಜೆಪಿ

    ಹೆಚ್.ಡಿ.ರೇವಣ್ಣ ಮತ ಅಸಿಂಧುಗೊಳಿಸಲು ಚುನಾವಣಾಧಿಕಾರಿಗೆ ಬಿಜೆಪಿ ಶಾಸಕ ಸತೀಶ್ ರೆಡ್ಡಿಗೆ ಬಿಜೆಪಿ ದೂರು ನೀಡಿದೆ. ರೇವಣ್ಣ ಮತದಾನದ ಬಳಿಕ ಮತವನ್ನು ಡಿ.ಕೆ. ಶಿವಕುಮಾರಗೆ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ವಿಧಾನಸೌಧದಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದು, ನಾನು ಮತ ಹಾಕಿದ್ದನ್ನು ಯಾರಿಗೂ ತೋರಿಸಿಲ್ಲ. ನಾನು ಮತ ಹಾಕುವುದನ್ನ ಡಿಕೆ ಶಿವಕುಮಾರಗೆ ಯಾಕೆ ತೋರಿಸಲಿ. ಉದ್ದೇಶಪೂರ್ವಕವಾಗಿ ನನ್ನನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದು ಹೇಳಿದರು.

  • 10 Jun 2022 10:49 AM (IST)

    Rajya Sabha Election 2022 Live: ನಮ್ಮ 13 ಸ್ವತಂತ್ರ ಶಾಸಕರು ಕಾಂಗ್ರೆಸ್ ಜೊತೆಗಿದ್ದಾರೆ

    ನಮ್ಮ 13 ಸ್ವತಂತ್ರ ಶಾಸಕರು ಕಾಂಗ್ರೆಸ್ ಜೊತೆಗಿದ್ದಾರೆ. ನಮ್ಮ ಬಳಿ 126 ಮತಗಳಿವೆ, ಮತ್ತು ಕಾಂಗ್ರೆಸ್‌ನ ಎಲ್ಲಾ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಕಾಂಗ್ರೆಸ್‌ಗೆ ಸೇರಿದ ಮಾಜಿ ಬಿಎಸ್‌ಪಿ ಶಾಸಕ ರಾಜೇಂದ್ರ ಗುಡಾ ಹೇಳಿದರು.

  • 10 Jun 2022 10:44 AM (IST)

    Rajya Sabha Elections 2022 LIVE: ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ

    ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದು ವಿಧಾನಸೌಧದಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು. ಬಿಜೆಪಿ ಆಲದ ಮರ ಇದ್ದಂತೆ ಎಂದು ಹೇಳಿದರು. ಈವರೆಗೆ ಕಾಂಗ್ರೆಸ್​ ಪಕ್ಷದ 31​ ಶಾಸಕರಿಂದ ಮತ ಚಲಾವಣೆಯಾಗಿದ್ದು, ಬಿಜೆಪಿ 86, ಜೆಡಿಎಸ್ 7 ಶಾಸಕರಿಂದ ಮತದಾನ ಆಗಿದೆ.

  • 10 Jun 2022 10:35 AM (IST)

    Rajya Sabha Election 2022 Live: ಮತದಾನ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ವಿಧಾನಸೌಧದಲ್ಲಿ ಮತ ಚಲಾಯಿಸಿದರು. ಸಮ್ಮೇಳನ ಸಭಾಂಗಣದಿಂದ ತೆರಳುವ ವೇಳೆ ವಿಕ್ಟರಿ ಸಂಕೇತ ತೋರಿಸಿ ಸಿಎಂ ತೆರಳಿದರು. ಇಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ನನ್ನ ಮತದಾನದ ಹಕ್ಕನ್ನು ಚಲಾಯಿಸಿದೆನು‌ ಎಂದು ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

  • 10 Jun 2022 10:23 AM (IST)

    Rajya Sabha Elections 2022 LIVE: ಬಿಜೆಪಿ ಅಭ್ಯರ್ಥಿ ಗೆದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ

    ಬಿಜೆಪಿ ಅಭ್ಯರ್ಥಿ ಗೆದ್ದರೆ ಅದಕ್ಕೆ ಕಾಂಗ್ರೆಸ್ ಹೊಣೆ ಎಂದು ಟಿವಿ 9ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದರು. ಕಾಂಗ್ರೆಸ್ ಜಾತ್ಯತೀತ ಶಕ್ತಿ ಕೊಡುತ್ತಿಲ್ಲ ಅನ್ನೋದು ತಿಳಿಯುತ್ತಿದೆ. ಕಾಂಗ್ರೆಸ್​ನವರ ನಡೆಯಿಂದಲೇ ಎಲ್ಲವೂ ತಿಳಿಯುತ್ತೆ ಎಂದರು.‘ ಕಾಂಗ್ರೆಸ್ ನಾಯಕರು ಶ್ರೀನಿವಾಸ್ ಗೌಡರನ್ನು ಬ್ರೈನ್ ವಾಶ್ ಮಾಡಿದ್ದಾರೆ. ಈ ಮೂಲಕ ರಮೇಶ್ ಕುಮಾರ್, ಸಿದ್ದರಾಮಯ್ಯ ಸೇರಿ ಬಿಜೆಪಿನ ಗೆಲ್ಸಿದ್ದಾರೆ. ಆದರೂ ನಾವು ಭರಸವೆ ಕಳೆದುಕೊಂಡಿಲ್ಲ. ಆತ್ಮಸಾಕ್ಷಿಯ ಮತ ನಮಗೂ ಬಾಣದ ರೀತಿಯಲ್ಲಿ ಬೀಳಬಹುದು ಎಂಬ ಭರಸವೆ ಇದೆ. ನಾವು ಯಾರಿಗೂ ವೈಯುಕ್ತಿಕವಾಗಿ ಮಾತನಾಡಿಲ್ಲ. ಜೆಡಿಎಸ್ ಎರಡನೇ ಪ್ರಾಶಸ್ತ್ಯ ಮತವೂ ಬೀಳದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ. ಹತ್ತನೇ ತಾರೀಖು ನಂತರ ನಿಜವಾಗಿ ಬಿಜೆಪಿ ಟೀಂ ಯಾರು ಅಂತ ಗೊತ್ತಾಗುತ್ತೆ ಎಂದು ಹೇಳಿದರು.

  • 10 Jun 2022 09:55 AM (IST)

    Rajya Sabha Elections 2022 LIVE: ಗೆಲ್ಲುವ ವಿಶ್ವಾಸದಲ್ಲಿ ಜೆಡಿಎಸ್​ ಅಭ್ಯರ್ಥಿ ಕುಪೇಂದ್ರ ರೆಡ್ಡಿ

    ರಾಜ್ಯಸಭೆಯಲ್ಲಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್​ನಿಂದ ಕಣಕ್ಕಿಳಿದ​ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ನಾವೇ ಗೆಲ್ಲುತ್ತೇವೆ ಅಂತ ಆತ್ಮವಿಶ್ವಾಸದಲ್ಲಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ. ಮುಂಜಾನೆಯಿಂದಲೇ ವಿಧಾನಸೌಧದಲ್ಲಿರುವ ಕುಪೇಂದ್ರ ರೆಡ್ಡಿ, ಶಾಸಕಾಂಗ ಕೊಠಡಿಯಲ್ಲಿ ಸಿ.ಎಂ ಇಬ್ರಾಹಿಂ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

  • 10 Jun 2022 09:50 AM (IST)

    Rajya Sabha Elections 2022 LIVE: ನಿರ್ಮಲಾ ಸೀತಾರಾಮನ್​ಗೆ ಮೊದಲ ಪ್ರಾಶಸ್ತ್ಯದ 46 ಮತ ಚಲಾವಣೆ

    ರಾಜ್ಯಸಭೆಗೆ ಬಿಜೆಪಿಯಿಂದ ಕಣಕ್ಕಿಳಿದ ನಿರ್ಮಲಾ ಸೀತಾರಾಮನ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಈಗಾಗಲೇ ಬಿಜೆಪಿ ಶಾಸಕರು ಕೋಟಾ ಮುಗಿಸಿದ್ದಾರೆ. 46 ಬಿಜೆಪಿ ಶಾಸಕರು ನಿರ್ಮಲಾ ಸೀತಾರಾಮನ್​ ಅವರಿಗೆ ಮೊದಲ‌ ಪ್ರಾಶಸ್ತ್ಯದ ಮತ ಚಲಾಯಿಸಿದ್ದು, ಗೆಲುವಿನ ಅಧಿಕೃತ ಘೋಷಣೆ ಸಂಜೆ ವೇಳೆಗೆ ಹೊರಬೀಳಲಿದೆ. ಲೆಹರ್ ಸಿಂಗ್​ ಅವರಿಗೆ 46 ಎರಡನೇ ಪ್ರಾಶಸ್ತ್ಯದ ಮತ ಬೇಕಾಗಿದೆ.

  • 10 Jun 2022 09:31 AM (IST)

    Rajya Sabha Election 2022 Live: ಟಿವಿ9ಗೆ ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಹೇಳಿಕೆ

    ನನಗೆ ಸಂಪೂರ್ಣ ವಿಶ್ವಾಸ ಇದೆ ಗೆಲುವು ನನ್ನದೆ. ದೇವರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಟಿವಿ 9ಗೆ ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್ ಹೇಳಿಕೆ ನೀಡಿದರು. 2016ರಲ್ಲಿ ಸ್ಪರ್ಧೆ ಮಾಡದ ಸಂದರ್ಭದಲ್ಲಿ ಜಯಗಳಿಸಿದ್ದೆ. ಇಂದು ಸಹ ಕ್ರಾಸ್ ವೋಟ್ ಆಗದೆ ಇದ್ರೆ ಜಯ ನನ್ನದೇ. 6 ಕೋಟಿ ಕನ್ನಡ ಜನತೆಯ ಆರ್ಶೀವಾದ ನನ್ನ ಮೇಲಿದೆ. ಎಲ್ಲಾ ಪಕ್ಷದ ಮತದಾರರು ಅವರಿಗೆ ಹೋಗಬೇಕು. ದೇವರ ಮುಂದೆ ಹೇಳುತ್ತಿದ್ದೇನೆ ಕನ್ನಡಿಗರ ಕೆಲಸ ಮಾಡಲು ನನಗೆ ಜಯ. ಪ್ರಮಾಣಿಕವಾಗಿ ಕನ್ನಡಿಗರ ಸೇವೆ ಮಾಡಲು ಸಿಗುತ್ತೆ. ನಮ್ಮ ಪಕ್ಷ ಕೋಮುವಾದಿ ಪಕ್ಷ. ನನಗೆ ಮುಸ್ಲಿಂರ ಒಡನಾಟವಿದೆ ಎಂದು ಹೇಳಿದರು.

     

  • 10 Jun 2022 09:26 AM (IST)

    Rajya Sabha Election 2022 Live: ಮತದಾನ ಮಾಡಲು ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ‌

    ಮತದಾನ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ‌ ತೆರಳಿದ್ದು, ಸಮ್ಮೇಳನ ಸಭಾಂಗಣದಿಂದ ತೆರಳುವ ವೇಳೆ ವಿಕ್ಟರಿ ಸಂಕೇತ ತೋರಿಸಿ ಸಿಎಂ ತೆರಳಿದರು. ಕಾಂಗ್ರೆಸ್ ಶಾಸಕ ರಾಜೇಗೌಡ ಮತಗಟ್ಟೆಗೆ ಆಗಮಿಸಿದ್ದು, ಕಾಂಗ್ರೆಸ್​ನ ಕುಸುಮಾ ಶಿವಳ್ಳಿ, ಬಸವನಗೌಡ ದದ್ದಲ್, ರಾಘವೇಂದ್ರ ಹಿಟ್ನಾಳ್, ವೆಂಕಟರಮಣಪ್ಪ ಮತದಾನ ಮಾಡಿದರು. ಬಿಜೆಪಿಯಿಂದ ಇದುವರೆಗೆ ೩೧ ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಒಬ್ಬೊರೇ ಶಾಸಕರನ್ನ ಸಿದ್ದರಾಮಯ್ಯ ಮತದಾನಕ್ಕೆ ಕಳುಹಿಸುತ್ತಿದ್ದಾರೆ.

  • 10 Jun 2022 09:18 AM (IST)

    Rajya Sabha Election 2022 Live: ಮತದಾನ ಮಾಡಲು ಹೊರಟ ಬಿಜೆಪಿ ಶಾಸಕರು

    ವಿಧಾನಸೌಧದ ಸಮ್ಮೇಳನ ಸಭಾಂಗಣದಿಂದ ಮತದಾನ ಮಾಡಲು ಬಿಜೆಪಿ ಶಾಸಕರು ಹೊರಟಿದ್ದಾರೆ. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಮತದಾನ ಕೇಂದ್ರಕ್ಕೆ ಬಿಜೆಪಿ ಶಾಸಕರು ಹೊರಟಿದ್ದು, ಬಿಜೆಪಿ ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್​ಗೆ ಮತ ಚಲಾಯಿಸಲು ಒಬ್ಬೊಬ್ಬರಾಗಿ ತೆರಳುತ್ತಿದ್ದಾರೆ.

  • 10 Jun 2022 09:14 AM (IST)

    Rajya Sabha Election 2022 Live:100ಕ್ಕೆ ನೂರು ನಾವೇ ಗೆಲ್ಲುತ್ತೆವೆ: ಮಾಜಿ ಸಿಎಂ ಯಡಿಯೂರಪ್ಪ

    ರಾಜ್ಯಸಭಾ ಚುನಾವಣೆ ಹಿನ್ನೆಲೆ ವಿಧಾನಸೌಧದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದು, 100ಕ್ಕೆ ನೂರು ನಾವೇ ಗೆಲ್ಲುತ್ತೆವೆ. 3ನೇ ಅಭ್ಯಾರ್ಥಿ ಗೆಲ್ಲುತ್ತಾರೆ. ಸಿದ್ದರಾಮಯ್ಯ ದಿನಕ್ಕೆ ಒಂದು ಹೇಳಿಕೆ ಕೊಡುತ್ತಾರೆ. ನಮ್ಮವರು ನಮಗೆ ಓಟ್​ಹಾಕುತ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.

  • 10 Jun 2022 09:11 AM (IST)

    ನಮ್ಮ ಪಕ್ಷದ 32 ಶಾಸಕರಲ್ಲಿ 31 ಶಾಸಕರು ಮತ ಹಾಕ್ತಾರೆ

    ನಮ್ಮ ಪಕ್ಷದ 32 ಶಾಸಕರಲ್ಲಿ 31 ಶಾಸಕರು ಮತ ಹಾಕುತ್ತಾರೆ ಎಂದು  ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಮ್ಮ 31 ಶಾಸಕರ ಮತಗಳು ನಮ್ಮ ಅಭ್ಯರ್ಥಿಗೆ ಬೀಳುತ್ತವೆ. ಶ್ರೀನಿವಾಸ್ ಗೌಡ ಕಾಂಗ್ರೆಸ್​​ಗೆ ಮತ ಹಾಕ್ತೀವಿ ಎಂದಿದ್ದಾರೆ. ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದೇ ಮತ ಒಡೆಯುವುದಕ್ಕೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು. ನಮ್ಮ ಶಾಸಕರಿಗೆ ವಾಟ್ಸಾಪ್​ ಸಂದೇಶ ಕೂಡ ಕಳಿಸಿದ್ದಾರೆ. ಸಿದ್ದರಾಮಯ್ಯ ಕೂಡ ನಮ್ಮ ಶಾಸಕರಿಗೆ ಪತ್ರ ಬರೆದಿದ್ದಾರೆ. ಯಾರು ಬಿಜೆಪಿಯ ಬಿ ಟೀಮ್ ಅನ್ನೋದು ಈಗ ಗೊತ್ತಾಗುತ್ತೆ ಎಂದು ಹೇಳಿದರು.

  • 10 Jun 2022 09:03 AM (IST)

    Rajya Sabha Election 2022 Live: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪೋಲಿಂಗ್ ಏಜೆಂಟರ ನೇಮಕ

    ಕಾಂಗ್ರೆಸ್ ಮತ್ತು ಬಿಜೆಪಿ ಹಿರಿಯ ನಾಯಕರನ್ನು ಪೋಲಿಂಗ್ ಏಜೆಂಟರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತಗಟ್ಟೆ ಏಜೆಂಟ್ ಆಗಿದ್ದು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿ ಪಕ್ಷದ ಪೋಲಿಂಗ್ ಏಜೆಂಟಾಗಿದ್ದಾರೆ. ಜೆಡಿಎಸ್ ಪರ ಹೆಚ್.ಡಿ.ರೇವಣ್ಣ ಕರ್ತವ್ಯ ನಿರ್ವಹಿಸಲಿದ್ದಾರೆ.

  • 10 Jun 2022 08:56 AM (IST)

    Rajya Sabha Election 2022 Live: ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಮತದಾನ ಆರಂಭ

    ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಮತದಾನ ಆರಂಭವಾಗಿದ್ದು, ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಆರಂಭವಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5-6ರವರೆಗೆ ಮತ ಎಣಿಕೆ, ನಂತರ ಫಲಿತಾಂಶ ಪ್ರಕಟವಾಗಲಿದೆ.

  • 10 Jun 2022 08:50 AM (IST)

    ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್

    ರಾಜ್ಯಸಭೆ 4 ಸ್ಥಾನಗಳ ಮತದಾನಕ್ಕೆ ಕೌಂಟ್​​ಡೌನ್​ ಶುರುವಾಗಿದ್ದು, ರಾಜ್ಯಸಭಾ ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಜತೆಗೆ ಸಚಿವರು ಮತ್ತು ಬಿಜೆಪಿ ಶಾಸಕರು ವಿಧಾನಸೌಧದ ಸಮ್ಮೇಳನ ಸಭಾಂಗಣಕ್ಕೆ ಆಗಮಿಸುತ್ತಿದ್ದಾರೆ.

     

  • 10 Jun 2022 08:41 AM (IST)

    Rajya Sabha Election 2022 Live: ನಿರ್ಮಲಾ ಸೀತಾರಾಮನ್​ ಮತ್ತು ಜಗ್ಗೇಶ್​ ಚುನಾವಣಾ ಕಣದಲ್ಲಿ

    ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು (ಜೂನ್ 10) ಚುನಾವಣೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದು, ಸಂಜೆ 6 ಗಂಟೆಯವರೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟವಾಗಲಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದ್ದು, 224 ಸದಸ್ಯರು ಮತಚಲಾಯಿಸಲಿದ್ದಾರೆ.

Published On - 8:38 am, Fri, 10 June 22

Follow us on