ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಡಿಕೆ ಶಿವಕುಮಾರ್ ಮನವಿ
2ನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ಗೆ ಮನವಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಾತ್ಯತೀತ ಶಕ್ತಿಗಳು ಒಂದಾಗಬೇಕೆಂದರೆ ಕಾಂಗ್ರೆಸ್ಗೆ ಮತಹಾಕಲಿ.
ಬೆಂಗಳೂರು: ಇಂದು (ಜೂನ್ 10) ಕರ್ನಾಟಕದಲ್ಲಿ ರಾಜ್ಯಸಭಾ (Rajya Sabha Polls) ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 4 ಸ್ಥಾನಗಳಿಗೆ ಮೂರು ಪಕ್ಷದಿಂದ ಒಟ್ಟು 6 ಸ್ಪರ್ಧಿಗಳು ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್ (JDS) ಅಭ್ಯರ್ಥಿ ಗೆಲ್ಲಲು ಬೇರೆ ಪಕ್ಷದ ಶಾಸಕರ ಮತಗಳು ಬೇಕು. ಹಾಗೇ, ಕಾಂಗ್ರೆಸ್ನ ಎರಡನೇ ಅಭ್ಯರ್ಥಿ ಜಯ ಸಾಧಿಸಲು ಬೇರೆ ಪಕ್ಷದ ಶಾಸಕರ ಮತಗಳು ಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿವೆ. ಸಿದ್ದರಾಮಯ್ಯ ತಮಗೆ ಬೆಂಬಲ ನೀಡುವಂತೆ ಬೆಂಬಲ ನೀಡುವಂತೆ ಜೆಡಿಎಸ್ಗೆ ಮನವಿ ಮಾಡುತ್ತಿದ್ದರೆ, ಹಲವು ಬಾರಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದೇವೆ ಈ ಬಾರಿ ನಮಗೆ ಬೆಂಬಲ ನೀಡಲಿ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಜೆಡಿಎಸ್ ಶಿವಕುಮಾರ್ ಮನವಿ: 2ನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ಗೆ ಮನವಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಾತ್ಯತೀತ ಶಕ್ತಿಗಳು ಒಂದಾಗಬೇಕೆಂದರೆ ಕಾಂಗ್ರೆಸ್ಗೆ ಮತಹಾಕಲಿ. ಹಿಂದೆ ನಾವು ಜೆಡಿಎಸ್ಗೆ ಸಹಾಯ ಮಾಡಿದ್ದೇವೆ. ಮುಂದಿನ ನಿರ್ಧಾರ ಜೆಡಿಎಸ್ಗೆ ಬಿಟ್ಟಿದ್ದು. ಆತ್ಮಸಾಕ್ಷಿ ಮತಗಳು ಎಷ್ಟು ಬೀಳುತ್ತೋ ನೋಡೋಣ ಎಂದರು.
ಇದನ್ನೂ ಓದಿ: 777 Charlie: ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ರಿಲೀಸ್; ಪೈರಸಿ ತಡೆಯಲು ಚಿತ್ರತಂಡ ಮಾಡಿರುವ ತಯಾರಿ ಏನು?
ನಿನ್ನೆ ಯಾರ ಮನೆಗೆ ಯಾರು ಹೋಗಿದ್ರು ಎಲ್ಲಾ ಗೊತ್ತಿದೆ. ಅವರ ಶಾಸಕರ ಬಗ್ಗೆ ಅನುಮಾನ ಇರಬೇಕು ಹಾಗಾಗಿಹೀಗೆ ಮಾಡಿದ್ದಾರೆ. ಅಡ್ಡ ಮತದಾನ ಆಗತ್ತಾ ಅನ್ನೋದು ಆಮೇಲೆ ಗೊತ್ತಿದೆ. ಚುನಾವಣೆಯಲ್ಲಿ ಎಲ್ಲರೂ ಗೆಲ್ಲಲು ಆಗಲ್ಲ ಎಂದು ತಮ್ಮ ನಿವಾಸದಿಂದ ಡಿಕೆಶಿ ತೆರಳಿದರು.
ಕುಪೇಂದ್ರ ರೆಡ್ಡಿ ಸಾಲ ಪ್ರಸ್ತಾಪ: ರಾಜಕಾರಣಿಗಳಿಗೆ ಕುಪೇಂದ್ರ ರೆಡ್ಡಿ ಸಾಲ ನೀಡಿರುವ ವಿಚಾರವನ್ನು ವಿಧಾನಸೌಧದ ಸಿದ್ದರಾಮಯ್ಯ ಕೊಠಡಿಯಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದರು. ಕುಪೇಂದ್ರ ರೆಡ್ಡಿ ನೀಡಿರುವ ಸಾಲದ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ಜೈರಾಮ್ ರಮೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Fri, 10 June 22