ಇಂದು 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 41 ಸ್ಥಾನಗಳು ಅವಿರೋಧ ಆಯ್ಕೆ, ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತದೆ. ಬೆಜೆಪಿಯಿಂದ ಮೊದಲ ಅಭ್ಯರ್ಥಿಯಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿಯಾಗಿ ನಟ ಜಗ್ಗೇಶ್ ಮತ್ತು ಮೂರನೇ ಅಭ್ಯರ್ಥಿಯಾಗಿ ಲೇಹರ್ ಸಿಂಗ್ ಕಣಕ್ಕೆ ಇಳಿದಿದ್ದಾರೆ.

ಇಂದು 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 41 ಸ್ಥಾನಗಳು ಅವಿರೋಧ ಆಯ್ಕೆ, ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: sandhya thejappa

Updated on:Jun 10, 2022 | 8:44 AM

ಬೆಂಗಳೂರು: ಇಂದು ದೇಶದ 15 ರಾಜ್ಯಗಳ 57 ರಾಜ್ಯಸಭಾ (Rajya Sabha Polls) ಸ್ಥಾನಗಳಿಗೆ ಚುನಾವಣೆ (Election) ನಡೆಯಲಿದ್ದು, 57 ಸ್ಥಾನಗಳಲ್ಲಿ ಈಗಾಗಲೇ 41 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ. ಉಳಿದ 16 ರಾಜ್ಯಸಭಾ ಸ್ಥಾನಗಳಿಗೆ ಇಂದು ಶಾಸಕರು ಮತದಾನ ಮಾಡಲಿದ್ದಾರೆ. ಉತ್ತರ ಪ್ರದೇಶದಲ್ಲಿ 11, ಬಿಹಾರ 5, ತಮಿಳುನಾಡು 6, ಕರ್ನಾಟಕ 4, ಆಂಧ್ರ ಪ್ರದೇಶ 4, ಒಡಿಶಾ 3, ಮಹಾರಾಷ್ಟ್ರ 6, ಮಧ್ಯಪ್ರದೇಶದಲ್ಲಿ 3, ತೆಲಂಗಾಣ, ಛತ್ತೀಸ್​ಗಢ, ಪಂಜಾಬ್, ಜಾರ್ಖಂಡ್ ತಲಾ 2 ಹಾಗೂ ಉತ್ತರಾಖಂಡ್​ನ ಒಂದು ರಾಜ್ಯಸಭಾ ಸ್ಥಾನಕ್ಕೆ ಮತದಾನ ನಡೆಯುತ್ತದೆ.

ಇನ್ನು ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತದೆ. ಬೆಜೆಪಿಯಿಂದ ಮೊದಲ ಅಭ್ಯರ್ಥಿಯಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿಯಾಗಿ ನಟ ಜಗ್ಗೇಶ್ ಮತ್ತು ಮೂರನೇ ಅಭ್ಯರ್ಥಿಯಾಗಿ ಲೇಹರ್ ಸಿಂಗ್ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ನಲ್ಲಿ ಮೊದಲ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದಾರೆ.

ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಮತ ಬೇಕು. ಕರ್ನಾಟಕದಲ್ಲಿ ಬಿಜೆಪಿ 121, ಕಾಂಗ್ರೆಸ್ 70, ಜೆಡಿಎಸ್ 32 ಮತಗಳನ್ನು ಹೊಂದಿವೆ.

ಇದನ್ನೂ ಓದಿ
Image
777 Charlie: ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ರಿಲೀಸ್​; ಪೈರಸಿ ತಡೆಯಲು ಚಿತ್ರತಂಡ ಮಾಡಿರುವ ತಯಾರಿ ಏನು?
Image
ದಾವಣಗೆರೆಯಲ್ಲಿ ಮೈಜುಮ್ಮೆನ್ನಿಸುವ ವಿಶೇಷ ಹರಕೆ ಜಾತ್ರೆ; ಬಾಯಲ್ಲಿ ಕಬ್ಬಣದ ರಾಡ್, ಬೆನ್ನಿಗೆ ಹುಕ್‌ ಹಾಕಿಕೊಂಡು ಭಯಾನಕವಾಗಿ ಹರಕೆ ತೀರಿಸಿದ ಭಕ್ತರು
Image
ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್​ಗೆ ಪರಿಹಾರ ಇಲ್ಲಿದೆ
Image
NBK Birthday: ನಂದಮೂರಿ ಬಾಲಕೃಷ್ಣ ಜನ್ಮದಿನಕ್ಕೆ ಟೀಸರ್​ ಮೂಲಕ ವಿಶ್​ ಮಾಡಿದ ‘ಎನ್​ಬಿಕೆ 107’ ಬಳಗ

ಇದನ್ನೂ ಓದಿ: ನನ್ನ ಆತ್ಮಸಾಕ್ಷಿಗನುಗುಣವಾಗಿ ಜೆಡಿಎಸ್​​ ಅಭ್ಯರ್ಥಿಗೆ ಮತ ಹಾಕುತ್ತೇನೆ: ಜಿ.ಟಿ.ದೇವೇಗೌಡ

ಜಿದ್ದಾಜಿದ್ದಿನ ಸ್ಪರ್ಧೆ: 121 ಶಾಸಕರನ್ನು ಹೊಂದಿರುವ ಬಿಜೆಪಿ ಮತ್ತು 70 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆಲ್ಲುವುದು ಖಚಿತ. ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ. ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ಸಂಖ್ಯಾಬಲದ ಕೊರತೆಯ ಹೊರತಾಗಿಯೂ 32 ಶಾಸಕರನ್ನು ಹೊಂದಿರುವ ಜೆಡಿಎಸ್ ತನ್ನ ಏಕೈಕ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ನಾಲ್ಕನೇ ಸ್ಥಾನಕ್ಕಾಗಿ ಲೆಹರ್ ಸಿಂಗ್ ಸಿರೋಯಾ , ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ನಾಲ್ಕನೇ ಸ್ಥಾನವನ್ನು ಗೆಲ್ಲಲು ಅಗತ್ಯವಿರುವ ಮತಗಳನ್ನು ಮೂರು ಪಕ್ಷಗಳೂ ಹೊಂದಿಲ್ಲ, ಅದಕ್ಕಾಗಿಯೇ ಅವರು ಪರಸ್ಪರ ಬೆಂಬಲವನ್ನು ಕೋರುತ್ತಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 am, Fri, 10 June 22

ಎಂಟನೇ ತರಗತಿವರೆಗೆ ಓದಿರುವ ಮಗ ಗ್ಯಾರೇಜಲ್ಲಿ ಕೆಲಸ ಮಾಡುತ್ತಾನೆ: ತಾಯಿ
ಎಂಟನೇ ತರಗತಿವರೆಗೆ ಓದಿರುವ ಮಗ ಗ್ಯಾರೇಜಲ್ಲಿ ಕೆಲಸ ಮಾಡುತ್ತಾನೆ: ತಾಯಿ
ಸಂಡೂರಿನ ಸಿದ್ದಾಪುರದಲ್ಲಿ ಪ್ರಜಾಪ್ರಭುತ್ವದ ಹಬ್ಬ, ಊರಹಬ್ಬ ಒಟ್ಟಿಗೆ ಬಂದಿವೆ
ಸಂಡೂರಿನ ಸಿದ್ದಾಪುರದಲ್ಲಿ ಪ್ರಜಾಪ್ರಭುತ್ವದ ಹಬ್ಬ, ಊರಹಬ್ಬ ಒಟ್ಟಿಗೆ ಬಂದಿವೆ
ಪಾರ್ಟನ್ ಚೈತ್ರಾ ವಿರುದ್ಧ ಉರಿದು ಬಿದ್ದ ತ್ರಿವಿಕ್ರಮ್, ಮಾಡಿದ್ದಾರೂ ಏನು?
ಪಾರ್ಟನ್ ಚೈತ್ರಾ ವಿರುದ್ಧ ಉರಿದು ಬಿದ್ದ ತ್ರಿವಿಕ್ರಮ್, ಮಾಡಿದ್ದಾರೂ ಏನು?
ಸರ್ಕಾರಿ ಕಾರಿನ ಮೇಲೆ ಹತ್ತಿ ಯುವತಿಯ ಅಶ್ಲೀಲ ನೃತ್ಯ; ವಿಡಿಯೋ ವೈರಲ್
ಸರ್ಕಾರಿ ಕಾರಿನ ಮೇಲೆ ಹತ್ತಿ ಯುವತಿಯ ಅಶ್ಲೀಲ ನೃತ್ಯ; ವಿಡಿಯೋ ವೈರಲ್
ಬೈಕ್ ಶೋರೂಂಗೆ ನುಗ್ಗಿ ಯುವಕನಿಗೆ ತಿವಿದ ಗೂಳಿ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂಗೆ ನುಗ್ಗಿ ಯುವಕನಿಗೆ ತಿವಿದ ಗೂಳಿ; ಶಾಕಿಂಗ್ ವಿಡಿಯೋ ವೈರಲ್
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ
ಪ್ರಿಯಾಂಕಾ ಗೆದ್ದರೆ ಬಂಡೀಪುರ ರಾತ್ರಿ ಸಂಚಾರ: ಡಿಕೆಶಿ ಹೇಳಿಕೆ ವಿಡಿಯೋ ನೋಡಿ
ಪ್ರಿಯಾಂಕಾ ಗೆದ್ದರೆ ಬಂಡೀಪುರ ರಾತ್ರಿ ಸಂಚಾರ: ಡಿಕೆಶಿ ಹೇಳಿಕೆ ವಿಡಿಯೋ ನೋಡಿ
ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಜಿತ್ ಪವಾರ್ ಬ್ಯಾಗ್ ಪರಿಶೀಲನೆ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಈಡಿ ಅಧಿಕಾರಿಗಳು ಮಾಡುತ್ತಿರುವ ತನಿಖೆಗೆ ನಾವು ಅಡ್ಡಿಯಾಗಲ್ಲ: ಸಿದ್ದರಾಮಯ್ಯ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ
ಉಪ ಚುನಾವಣೆ ಹೊತ್ತಲ್ಲಿ ಚುನಾವಣಾಧಿಕಾರಿಯ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ