Bank ATM: ಹಿರಿಯರಿಗೆ ನೆರವಾಗುವ ನೆಪದಲ್ಲಿ ಪಿನ್​ ನಂಬರ್ ಪಡೆದು ತಮ್ಮ ಕಾರ್ಡ್​​ನಿಂದ ಹಣ ಎಗರಿಸುತ್ತಿದ್ದ ಖತರ್ನಾಕ್ ಜೋಡಿ ಅಂದರ್​

ಹಿರಿಯರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಪಿನ್ ಪಡೆದು ಹಣ ಡ್ರಾ ಮಾಡಿಕೊಡಿತ್ತಿದ್ದರು. ನಂತರ ಅವರ ಎಟಿಎಂ ಕಾರ್ಡ್ ಬದಲು, ತಮ್ಮ ಬಳಿಯಿರುವ ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ಹೊರಬರುತ್ತಿದ್ದರು. ನಂತರ ಹೇಗೂ ಪಿನ್ ನಂಬರ್ ಗೊತ್ತಿರುತ್ತಿತ್ತು. ಜೊತೆಗೆ ಅಸಲಿ ಎಟಿಎಂ ಕಾರ್ಡ್ ಇವರ ಬಳಿ ಇರುತ್ತಿತ್ತು. ಅದನ್ನ ಉಪಯೋಗಿಸಿಕೊಂಡು ಹಣ ಎಗರಿಸುತ್ತಿದ್ದರು!

Bank ATM: ಹಿರಿಯರಿಗೆ ನೆರವಾಗುವ ನೆಪದಲ್ಲಿ ಪಿನ್​ ನಂಬರ್ ಪಡೆದು ತಮ್ಮ ಕಾರ್ಡ್​​ನಿಂದ ಹಣ ಎಗರಿಸುತ್ತಿದ್ದ ಖತರ್ನಾಕ್ ಜೋಡಿ ಅಂದರ್​
ನೆರವಾಗುವ ನೆಪದಲ್ಲಿ ಪಿನ್​ ನಂಬರ್ ಪಡೆದು ತಮ್ಮ ಕಾರ್ಡ್​​ನಿಂದ ಹಣ ಎಗರಿಸುತ್ತಿದ್ದರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 17, 2023 | 12:22 PM

ಅವರಿಬ್ಬರೂ ಖತರ್ನಾಕ್ ಗಳು. ಎಟಿಎಂ ಕೇಂದ್ರಗಳಿಗೆ (Bank ATM) ಬರುವ ವಯಸ್ಸಾದ ಜನರೇ ಅವರ ಟಾರ್ಗೆಟ್. ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅವರ ಗಮನ ಬೇರೆಡೆ ಸೆಳೆದು, ದೋಖಾ ಮಾಡುತ್ತಿದ್ದರು. ಪಿನ್ ನಂಬರ್ ಪಡೆದು, ನಕಲಿ ಎಟಿಎಂ ಕಾರ್ಡ್ ನೀಡಿ, ಅಸಲಿ ಎಟಿಎಂ ಕಾರ್ಡ್ ನಿಂದ ಹಣವನ್ನ ಎಗರಿಸುತ್ತಿದ್ದರು. ಕೊನೆಗೂ ಆ ಖತರ್ನಾಕ್ (Scamster) ಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೌದು ಎಟಿಎಂ ಕೇಂದ್ರಗಳಿಗೆ ಬರುವ ಜನರ ಗಮನ ಬೇರೆಡೆ ಸೆಳೆದು ಅವರ ಪಿನ್ ಕಾರ್ಡ್ ನಂಬರ್ ಪಡೆದು, ಜನರ ಎಟಿಎಂ ಕಾರ್ಡ್ ಪಡೆದು ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ಅಸಲಿ ಎಟಿಎಂ ಕಾರ್ಡ್ ನಿಂದ ಹಣ ದೋಚುತ್ತಿದ್ದ ಖತರ್ನಾಕ್ ಗಳನ್ನ ರಾಮನಗರದ (Ramanagara) ಐಜೂರು ಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ನಗರದ ತಿಮ್ಮರಾಯಪ್ಪ ಹಾಗೂ ಕೋಲಾರ ಜಿಲ್ಲೆ ಮಾಲೂರು ನಗರದ ಮಂಜುನಾಥ್ ಬಂಧಿತ ಆರೋಪಿಗಳು.

ಖತರ್ನಾಕ್ ಜೋಡಿಯ ಮೋಡಸ್ ಆಪರೆಂಡಿ ಹೀಗಿತ್ತು!

ಅಂದಹಾಗೆ ಈ ಇಬ್ಬರು ಖತರ್ನಾಕ್ ಗಳು ಕೋಲಾರದಿಂದ ರಾಮನಗರ ಜಿಲ್ಲೆಗೆ ಬಂದು ಎಟಿಎಂ ಕೇಂದ್ರದ ಬಳಿ ನಿಂತು ವಯಸ್ಸದಾವರು, ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಿಕೊಳ್ಳಲು ಬರದಿರುವವನ್ನ ಗಮನ ಸೆಳೆದು ಅವರಿಗೆ ಸಹಾಯ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಪಿನ್ ಪಡೆದು ಹಣ ಡ್ರಾ ಮಾಡಿಕೊಡಿತ್ತಿದ್ದರು. ನಂತರ ಅವರ ಎಟಿಎಂ ಕಾರ್ಡ್ ಬದಲು, ತಮ್ಮ ಬಳಿಯಿರುವ ಬೇರೊಂದು ಎಟಿಎಂ ಕಾರ್ಡ್ ಕೊಟ್ಟು ಹೊರಬರುತ್ತಿದ್ದರು. ನಂತರ ಹೇಗೂ ಪಿನ್ ನಂಬರ್ ಗೊತ್ತಿರುತ್ತಿತ್ತು. ಜೊತೆಗೆ ಅಸಲಿ ಎಟಿಎಂ ಕಾರ್ಡ್ ಇವರ ಬಳಿ ಇರುತ್ತಿತ್ತು. ಅದನ್ನ ಉಪಯೋಗಿಸಿಕೊಂಡು ಹಣ ಎಗರಿಸುತ್ತಿದ್ದರು!

ಅದೇ ರೀತಿ ರಾಮನಗರ ತಾಲೂಕಿನ ಅರಳಿಮರದದೊಡ್ಡಿ ಗ್ರಾಮದ ಶಾಂತಮ್ಮ ಎಂಬ ವೃದ್ದೆಗೆ ಸಹಾಯ ಮಾಡುವ ನೆಪದಲ್ಲಿ ಹಣವನ್ನ ಎಗರಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಐಜೂರು ಠಾಣೆ ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ ಎಂದು ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಬೇರೆನೂ ಕೆಲಸ ಮಾಡದ ಇವರು ಎಟಿಎಂ ಕೇಂದ್ರಗಳಲ್ಲಿ ದೋಖಾ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳನ್ನ ಮಾತನಾಡುವ ಇವರು, ಕೋಲಾರದಿಂದ ಹೊರಟು ಸಿಕ್ಕ ಸಿಕ್ಕ ಕಡೆಗಳಲ್ಲಿ ಜನರಿಗೆ ಟೋಪಿ ಹಾಕುವುದನ್ನೇ ಕಾಯಕ ಮಾಡಿಕೊಂಡಿದ್ದರು. ರಾಮನಗರ ಜಿಲ್ಲೆಯಲ್ಲಿಯೇ ನಾಲ್ಕು ಜನರಿಗೆ ಮೋಸ ಮಾಡಿದ್ದಾರೆ.

ಬೆಂಗಳೂರು, ಮೈಸೂರು ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶದಲ್ಲೂ ಈ ರೀತಿ ಹಣವನ್ನ ಎಗರಿಸಿದ್ದಾರೆ. ಆದರೆ ಹಲವು ಕಡೆಗಳಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇನ್ನು ಬಂಧಿತರಿಂದ ವಿವಿಧ ಬ್ಯಾಂಕ್ ಗಳ 20 ಎಟಿಎಂ ಕಾರ್ಡ್ ಗಳು ಹಾಗೂ 50 ಸಾವಿರ ರೂ ನಗದನ್ನ ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇವರ ಬಳಿ ಸಿಕ್ಕಿರುವ ಎಟಿಎಂ ಕಾರ್ಡ್ ಗಳ ಮೂಲವನ್ನ ಸಹಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಒಟ್ಟಾರೆ ಗ್ರಾಮೀಣ ಭಾಗದ ಅನಕ್ಷರಸ್ಥ ಜನರ ಗಮನ ಬೇರೆಡೆ ಸೆಳೆದು, ಸಹಾಯ ಮಾಡುವ ನೆಪದಲ್ಲಿ ಹಣ ಎಗರಿಸುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿ, ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ 9, ರಾಮನಗರ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು