ವೃಷಭಾವತಿ ಒಡಲಲ್ಲಿ ರಾಶಿ ರಾಶಿ ತ್ಯಾಜ್ಯ: ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಎಂದು?

ಗ್ರೇಟರ್​ ಬೆಂಗಳೂರು ಪ್ರಾಧಿಕಾರ ದಂಡ, ಕಸ ಎಸೆಯುವವರ ಮನೆ ಮುಂದೆಯೇ ತ್ಯಾಜ್ಯ ತಂದು ಸುರಿಯುವುದು ಸೇರಿ ಹತ್ತು ಹಲವು ಜಾಗೃತಿ ಕ್ರಮಗಳನ್ನ ಕೈಗೊಂಡರೂ ಬೆಂಗಳೂರಲ್ಲಿ ಮಾತ್ರ ಕಸದ ಸಮಸ್ಯೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಕುಂಬಳಗೂಡು- ಕಗ್ಗಲಿಪುರ ರಸ್ತೆಯ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ವೃಷಭಾವತಿ ನದಿ ಒಡಲನ್ನು ಇವು ಸೇರುತ್ತಿವೆ.

ವೃಷಭಾವತಿ ಒಡಲಲ್ಲಿ ರಾಶಿ ರಾಶಿ ತ್ಯಾಜ್ಯ: ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಎಂದು?
ವೃಷಭಾವತಿ ನದಿ ಸೇರುತ್ತಿರುವ ರಾಶಿ ರಾಶಿ ಕಸ
Image Credit source: Tv9 Kannada
Edited By:

Updated on: Nov 03, 2025 | 6:35 PM

ಬೆಂಗಳೂರು ದಕ್ಷಿಣ (ರಾಮನಗರ), ನವೆಂಬರ್​ 03: ಸಾಕಷ್ಟು ಕಠಿಣ ಕ್ರಮಗಳ ಬಳಿಕವೂ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಸದ್ಯಕ್ಕೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ದಂಡ, ಕಸ ಎಸೆಯುವವರ ಮನೆ ಮುಂದೆಯೇ ತ್ಯಾಜ್ಯ ತಂದು ಸುರಿಯುವುದು ಸೇರಿ ಹತ್ತು ಹಲವು ಜಾಗೃತಿ ಕ್ರಮಗಳನ್ನ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಕೈಗೊಂಡರೂ ಈ ಸಮಸ್ಯೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿರುವ ಕಾರಣ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್​ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಪಣತೊಟ್ಟಿದ್ದು, ಈ ಬಗ್ಗೆ ಸ್ವತಃ ಮುತುವರ್ಜಿ ವಹಿಸಿದ್ದಾರೆ. ಹೀಗಿದ್ದರೂ ಕಸದ ವಿಲೇವಾರಿ ಮಾತ್ರ ಸರಿಯಾಗಿ ನಡೆಯುತ್ತಿಲ್ಲ. ಕುಂಬಳಗೂಡು- ಕಗ್ಗಲಿಪುರ ರಸ್ತೆಯ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ರಸ್ತೆಬದಿ ಓಡಾಲೂ ಜನ ಅಸಹ್ಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾಳಿ ಬಂದರೆ ಅಕ್ಕ ಪಕ್ಕದ ಏರಿಯಾಗಳ ವರೆಗೆ ದುರ್ವಾಸನೆ ಹರಡುತ್ತಿದೆ.

ಇದನ್ನೂ ಓದಿ: ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ

ವೃಷಭಾವತಿ ನದಿ ನೀರು ಕಲುಷಿತ

GBA Starts Garbage Dumping Festival In Bengaluru: ವೃಷಭಾವತಿ ನದಿಗೆ ಸೇರುತ್ತಿದೆ ನಗರದ ಕಸಇನ್ನು ಇದೇ ರಾಶಿ ರಾಶಿ ಕಸ ಒಂದು ಕಾಲದಲ್ಲಿ ಜೀವ ಸೆಲೆಯಾಗಿದ್ದ ವೃಷಭಾವತಿ ನದಿಯ ಒಡಲನ್ನ ಸೇರುತ್ತಿದ್ದು,ಈಗಾಗಲೇ ನದಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಪರಿಸರದ ಸಮೀಪವೇ ಅಪಾರ್ಟ್​ಮೆಂಟ್​ಗಳಿದ್ದು, ನಿವಾಸಿಗಳು ಪ್ರತಿನಿತ್ಯ ಪರದಾಡಬೇಕಾದ ಸ್ಥಿತಿ ಇದೆ. ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂಚರಿಸಬೇಕಿದೆ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:32 pm, Mon, 3 November 25

ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Loading...
Unable to load recommendations.
Follow Us