AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

112ಗೆ ಕರೆ ಮಾಡಿದ್ದ ಮಹಿಳೆಯನ್ನೇ ಬಲೆಗೆ ಬೀಳಿಸಿಕೊಂಡು ಪೊಲೀಸಪ್ಪನ ಪೋಲಿ ಆಟ

ಈತ ಡಿಎಆರ್ ಪೊಲೀಸ್ ಪೇದೆ. 112 ವಾಹನದ ಚಾಲಕನಾಗಿದ್ದ. ಆದರೆ ರಕ್ಷಣೆ ಕೋರಿ ಮಹಿಳೆಯೊಬ್ಬರು 112ಗೆ ಕರೆ ಮಾಡಿ ದೂರು ಕೊಟ್ಟಿದ್ರು. ದೂರು ಕೊಟ್ಟ ಮಹಿಳೆಯ ರಕ್ಷಣೆಗೆ ನಿಲ್ಲಬೇಕಾದ ಪೊಲೀಸಪ್ಪ, ಆಕೆಯ ನಂಬರ್ ಪಡೆದು ಸಲುಗೆ ಬೆಳಸಿಕೊಂಡು ನಂತರ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ. ಪೊಲಿ ಆಟವಾಡಿದ ಪೊಲೀಸಪ್ಪನ ವಿರುದ್ಧ ಇದೀಗ ಆತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ‌ಇಲ್ಲಿದೆ.

112ಗೆ ಕರೆ ಮಾಡಿದ್ದ ಮಹಿಳೆಯನ್ನೇ ಬಲೆಗೆ ಬೀಳಿಸಿಕೊಂಡು ಪೊಲೀಸಪ್ಪನ ಪೋಲಿ ಆಟ
Putta Swamy
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ|

Updated on: Jul 20, 2025 | 1:22 PM

Share

ರಾಮನಗರ, (ಜುಲೈ 20): ಪೊಲೀಸರೆಂದರೆ (Police) ಒಂದು ನಂಬಕೆ ಹಾಗೂ ಧೈರ್ಯ. ಆದರೆ ಅಂತಹ ಹುದ್ದೆಗೆ ಅಪವಾದವೆಂಬಂತೆ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯ ಮೇಲೆಯೇ ಪೊಲೀಸ್ ಪೇದೆ ಆತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು ದಕ್ಷಿಣ (ರಾಮನಗರ) (Bengaluru South) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ 112 ವಾಹನದ ಚಾಲಕನಾಗಿರುವ ಪುಟ್ಟಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂತ್ರಸ್ತೆ ಮಹಿಳೆ ದೂರು ದಾಖಲಿಸಿದ್ದಾಳೆ. ಇದರ ಬೆನ್ನಲ್ಲೇ  ಪೇದೆ ಪುಟ್ಟಸ್ವಾಮಿಯನ್ನು ಅಮಾನತು ಮಾಡಲಾಗಿದೆ.

ಅದೊಂದು ದಿನ 112ಗೆ ಕರೆ ಬಂದಿತ್ತು. ನಮ್ಮೂರಲ್ಲಿ ಗಲಾಟೆಯಾಗುತ್ತಿದೆ ಬನ್ನಿ ಎಂದು ಎಂ ಕೆ ದೊಡ್ಡಿ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬಳು ಕರೆ ಮಾಡಿದ್ದರು. ಮಾಡ್ತಾಳೆ. ಆದರೆ ಆಕೆಯ ಫೋನ್ ನಂಬರ್ ಪಡೆದ ಪೇದೆ ಪುಟ್ಟಸ್ವಾಮಿ, ಆಕೆಯ ಜೊತೆ ಸಲುಗೆ ಬೆಳೆಸಿ ಆನಂತರ ಆಕೆಯ ಮನೆಯಲ್ಲಿಯೇ ನಾಲ್ಕು ಬಾರಿ ಆತ್ಯಾಚಾರ ಎಸಗಿದ್ದಾನೆ. ಕೇವಲ ಅದಷ್ಟೇ ಅಲ್ಲದೆ ಆಕೆಯಿಂದ ನಿರಂತರವಾಗಿ 12 ಲಕ್ಷ ರೂ. ಹಣವನ್ನು ಕೂಡ ಪೀಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಇದನ್ನೂ ಓದಿ: ಪ್ರೀತಿಸುವಂತೆ ಮಹಿಳೆಗೆ ಕಿರುಕುಳ: ಮಾತುಕತೆಗೆ ಕರೆದವರಿಗೆ ಹೀಗಾ ಮಾಡೋದು?

ಸಂತ್ರಸ್ತೆಯಿಂದ ಹಣಪೀಕಿದ ಪೇದೆ ಪುಟ್ಟಸ್ವಾಮಿ ಕಾಲಕ್ರಮೇಣ ಆಕೆಯನ್ನ ಕಡೆಗಣಿಸಲು ಪ್ರಾರಂಭಿಸಿದ್ದಾನೆ. ಬಂಗಾರವನ್ನ ಅಡವಿಟ್ಟು ಕೊಟ್ಟ ಹಣವನ್ನ ವಾಪಸ್ ಕೇಳಿದ್ರೆ ದರ್ಪ ಮೆರೆದಿದ್ದಾನೆ. ಇದರಿಂದಾಗಿ ಆಕೆ ಮನೆಯಲ್ಲೇ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಕೊನೆಗೆ ವಿಧಿ ಇಲ್ಲದೆ ಮಹಿಳೆ ಎಂಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತ ಮಹಿಳೆ ದೂರು ನೀಡುತ್ತಿದ್ದಂತೆ ಪೇದೆ ಪುಟ್ಟಸ್ವಾಮಿ ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಎಸ್ ಪಿ ಶ್ರೀನಿವಾಸ್ ಗೌಡ ಅವರು ಪೇದೆ ಪುಟ್ಟಸ್ವಾಮಿಯನ್ನು ಅಮಾನತು ಮಾಡಿದ್ದಾರೆ.

ಇನ್ನು ಆತ್ಯಾಚಾರದ ಪ್ರಕರಣದ ತನಿಖೆಯನ್ನ ಡಿಸಿಆರ್ ಇ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ ಮಹಿಳೆಯೊಂದಿಗೆ ಮಾಡಿದೆಲ್ಲ ಮಾಡಿ ಪೊಲೀಸಪ್ಪ ತಲೆಮರೆಸಿಕೊಂಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ