ಟೋಯಿಂಗ್ ಮಾಡಿಕೊಂಡು ಹೋಗುವ ವೇಳೆ ಹೊತ್ತಿ ಉರಿದ ಕಾರು

ಮಧ್ಯಾಹ್ನ ಅಪಘಾತದಿಂದಾಗಿ ಕಾರು ಕೆಟ್ಟು‌ನಿಂತಿತ್ತು. ಸಂಜೆ ವೇಳೆ ಟೋಯಿಂಗ್ ಮಾಡಿಕೊಂಡು ಹೋಗುವಾಗ ಬೆಂಕಿ ಅವಘಡವಾಗಿದೆ. ಮೈಸೂರು ಕಡೆಗೆ ಟೋಯಿಂಗ್ ‌ಮಾಡಿಕೊಂಡು ಹೋಗುವಾಗ ಕಾರು ಹೊತ್ತಿ ಉರಿದಿದೆ.

ಟೋಯಿಂಗ್ ಮಾಡಿಕೊಂಡು ಹೋಗುವ ವೇಳೆ ಹೊತ್ತಿ ಉರಿದ ಕಾರು
ಟೋಯಿಂಗ್ ಮಾಡಿಕೊಂಡು ಹೋಗುವ ವೇಳೆ ಹೊತ್ತಿ ಉರಿದ ಕಾರು
TV9kannada Web Team

| Edited By: sadhu srinath

Sep 30, 2022 | 9:24 PM

ರಾಮನಗರ: ಬೆಂಗಳೂರು-ಮೈಸೂರು ಬೈಪಾಸ್ ರಸ್ತೆಯಲ್ಲಿ (Bangalore Mysore bypass road) ಬೆಂಕಿ ಅವಘಡ ಸಂಭವಿಸಿದೆ. ಟೋಯಿಂಗ್ (towing) ಮಾಡಿಕೊಂಡು ಹೋಗುವ ವೇಳೆ ಕಾರೊಂದು ಹೊತ್ತಿ ಉರಿದಿದೆ (Car burnt). ರಾಮನಗರ ಜಿಲ್ಲೆಯ ‌ಚನ್ನಪಟ್ಟಣ ತಾಲೂಕಿನ ಲಂಬಾಣಿದೊಡ್ಡಿ ಗ್ರಾಮದ ಬಳಿಯ ಬೈಪಾಸ್ ರಸ್ತೆಯಲ್ಲಿ ‌ಘಟನೆ ನಡೆದಿದೆ.

ಮಧ್ಯಾಹ್ನ ಅಪಘಾತದಿಂದಾಗಿ ಕಾರು ಕೆಟ್ಟು‌ನಿಂತಿತ್ತು. ಸಂಜೆ ವೇಳೆ ಟೋಯಿಂಗ್ ಮಾಡಿಕೊಂಡು ಹೋಗುವಾಗ ಬೆಂಕಿ ಅವಘಡವಾಗಿದೆ. ಮೈಸೂರು ಕಡೆಗೆ ಟೋಯಿಂಗ್ ‌ಮಾಡಿಕೊಂಡು ಹೋಗುವಾಗ ಕಾರು ಹೊತ್ತಿ ಉರಿದಿದೆ. ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಮತ್ತೆ ಸಾವಿನ ಸ್ಪಾಟ್ ಆದ ಕಳ್ಳಂಬೆಳ್ಳ, ಮಾಡದ ತಪ್ಪಿಗೆ ಮಸಣ ಸೇರಿದ ಮಹಿಳೆ

ಹೌದು‌..ಕಳ್ಳಂಬೆಳ್ಳ ,ಈ ಹೆಸರು ಕೇಳಿದ್ರೆ ಸಾಕು,ಪ್ರಯಾಣಿಕರ, ವಾಹನ ಸವಾರರ ಎದೆ ಜಲ್ ಎನ್ನಿಸುತ್ತೆ,ಯಾಕೆಂದರೆ ಅಷ್ಟರಮಟ್ಟಿಗೆ ಈ ಹೆಸರು ಭಯಬೀಳಿಸಿದೆ.ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ವ್ಯಾಪ್ತಿ ಅಪಘಾತಕ್ಕೆ ಕುಖ್ಯಾತಿ ಪಡೆದ ಸ್ಥಳ,ಕಳೆದ ತಿಂಗಳು ಇದೇ ವ್ಯಾಪ್ತಿಯಲ್ಲಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತ ನಡೆದು ಬರೋಬ್ಬರಿ 9 ಜನರು ಸ್ಥಳದಲ್ಲೇ ಸಾವನ್ನಪಿದ್ದರು,ಅದಾದ ಬಳಿಕ ಆಗಾಗ ಅಪಘಾತ ಗಳು ನಡೆಯುತ್ತಲೇ ಇವೆ.ಅದರಂತೆ ಇಂದು ಕೂಡ ಲಾರಿ ಅಪಘಾತ ವಾಗಿ ಮಹಿಳೆ ಸಾವನ್ನಪ್ಪಿದ್ದು,ಮನೆಗೆ ಹೋಗ್ತಿದ್ದ ಮಹಿಳೆ ಮಸಣಕ್ಕೆ ಸೇರಿದ್ದಾರೆ.

ಸಾವಿನ ಹೆದ್ದಾರಿಯಾದ ಕಳ್ಳಂಬೆಳ್ಳ @48

ಇಂದು ಕೂಡ ಕಳ್ಳಂಬೆಳ್ಳ ಬಸ್ ನಿಲ್ದಾಣ ಬಳಿಯೇ ಅಪಘಾತ ವಾಗಿದ್ದು ಚಂದ್ರಮ್ಮ ಎನ್ನುವರು ಸಾವನ್ನಪ್ಪಿದ್ದಾರೆ,ರಂಗಸ್ವಾಮಿ ಎನ್ನುವರಿಗೆ ಗಾಯವಾಗಿದೆ.ಚಂದ್ರಮ್ಮ ಕೆಎಸ್ ಆರ್ ಟಿಸಿ ಬಸ್ ಇಳಿದು ಮನೆಯ ಕಡೆ ಹೋಗುವಾಗ ವೇಗವಾಗಿ ಬಂದ ಲಾರಿಯೊಂದು ಮಹಿಳೆಗೆ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ಮೇಲೆ ಹರಿದು ಮಹಿಳೆ ಸಾವನ್ನಪ್ಪಿದ್ದಾಳೆ.

ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಸಾವಿಗೆ ಕಾರಣ

ಇನ್ನೂ ಲಾರಿ ಚಾಲಕ ವೇಗವಾಗಿ ಬರ್ತಿದ್ದ ಎನ್ನಲಾಗಿದೆ, ಲಾರಿ ವೇಗ ಸ್ಥಳಿಯರು ಗಮನಿಸಿದ್ದು ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎನ್ನಲಾಗಿದೆ. ಸೈಡ್ ನಲ್ಲಿದ್ದ ಡಿವೈಡರ್ ಗೆ ಡಿಕ್ಕಿಯಾಗಿ, ಬಳಿಕ ಮಹಿಳೆಗೆ ಡಿಕ್ಕಿ ಹೊಡೆದ ಕಾರಣ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾಲ್ಕೈದು ಜನರು ಮಸಣ ಸೇರಬೇಕಿತ್ತು. ಅದೃಷ್ಟವಶಾತ್ ಸ್ಥಳೀಯರು ಚೆಲ್ಲಾಪಿಲ್ಲಿಯಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಲಾರಿ ಯಾವಾಗ ಅತಿ ವೇಗದಿಂದ ಬರ್ತಿತ್ತೋ ಇದನ್ನ ಗಮನಿಸಿ, ನಿಂತಿದ್ದ ಸ್ಥಳೀಯರು ಕೂಗಾಡಿ ದೂರ ಹೋಗಿದ್ದಾರೆ. ಆದರೆ ಚಂದ್ರಮ್ಮ ದೂರ ಹೋಗಲು ಆಗದೆ ಲಾರಿಯಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ತಿಂಗಳಿಗೆ, ವಾರಕ್ಕೊಮ್ಮೆ ಅಪಘಾತಗಳು ನಡೆಯುತ್ತಿದ್ದು ಸಾವಿನ ಹೆದ್ದಾರಿಯಿಂದ ಜನರು ಧೃತಿಗೆಟ್ಟಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada