ಮೇಕೆದಾಟು ಮಹಾಯುದ್ಧ: ಇಂದಿನಿಂದ ಮೇಕೆದಾಟು ಪಾದಯಾತ್ರೆ ಶುರು, 165 ಕಿ.ಮೀ. ಪಾದಯಾತ್ರೆ ಮಾಡಲಿದೆ ಕಾಂಗ್ರೆಸ್

ಮೇಕೆದಾಟು ಮಹಾಯುದ್ಧ: ಇಂದಿನಿಂದ ಮೇಕೆದಾಟು ಪಾದಯಾತ್ರೆ ಶುರು, 165 ಕಿ.ಮೀ. ಪಾದಯಾತ್ರೆ ಮಾಡಲಿದೆ ಕಾಂಗ್ರೆಸ್
ಮೇಕೆದಾಟು

ಹಲವು ಅಡ್ಡಿ ಆತಂಕಗಳ ನಡುವೆಯೂ ಮೇಕೆದಾಟು ಪಾದಯಾತ್ರೆಗೆ ಇಂದು ಕೈ ಪಡೆ ಕಹಳೆ ಮೊಳಗಿಸೋಕೆ ಸಜ್ಜಾಗಿದೆ. ಬರೋಬ್ಬರಿ 11 ದಿನ 165ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ.

TV9kannada Web Team

| Edited By: Ayesha Banu

Jan 09, 2022 | 7:15 AM

ರಾಮನಗರ: ಯಾರೇ ತಡೆದ್ರೂ ಬಿಡಲ್ಲ.. ಎಷ್ಟೇ ಅಡ್ಡಿಪಡಿಸಿದ್ರೂ ಹಿಂಜರಿಯಲ್ಲ.. ಎಷ್ಟೇ ರೂಲ್ಸ್ ತಂದ್ರೂ ಕೇರೇ ಮಾಡಲ್ಲ. ಏನೇ ಅಡ್ಡ ಬಂದ್ರೂ ಎದುರುಸಿ ಪಾದಯಾತ್ರೆ ಯಶಸ್ವಿಗೊಳಿಸಿಯೇ ಸಿದ್ಧ ಅಂತಾ ಕಾಂಗ್ರೆಸ್ ಸನ್ನದ್ಧವಾಗಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಮೇಕೆದಾಟು ಮಡಿಲಿನಿಂದ ಕಾಂಗ್ರೆಸ್ ನಾಯಕರ ಕಾಲ್ನಡಿಗೆ ಸಾಗಲಿದೆ.

ಮೇಕೆದಾಟು ಮಹಾಯುದ್ಧಕ್ಕೆ ‘ಕೈ’ ಪಡೆ ಸರ್ವಸನ್ನದ್ಧ! ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಕನಕಪುರ ಕೋಟೆಯಿಂದ ಬೆಂಗಳೂರಿನವರೆಗೂ ಕಾಲ್ನಡಿಗೆ ಜಾಥಾ ಸಾಗಲಿದೆ. ಇಂದಿನಿಂದ 11 ದಿನ ಅಂದ್ರೆ ಜನವರಿ 19ರವರೆಗೂ ಪಾದಯಾತ್ರೆ ನಡೆಯಲಿದ್ದು, 165ಕ್ಕೂ ಹೆಚ್ಚು ಕಿಲೋ ಮೀಟರ್ ದೂರ ಹೆಜ್ಜೆ ಹಾಕಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಂ ತಯಾರಾಗಿ ನಿಂತಿದೆ.

ಗೋಕಾಕ್ ಚಳವಳಿಯಲ್ಲಿ ಅಣ್ಣಾವ್ರು.. ಮೇಕೆದಾಟಿಗೆ ಶಿವಣ್ಣ 80ರ ದಶಕದಲ್ಲಿ ವರನಟ ಡಾ.ರಾಜ್ಕುಮಾರ್ ಗೋಕಾಕ್ ಚಳವಳಿಯಲ್ಲಿ ಭಾಗಿಯಾಗಿದ್ರು. ಕನ್ನಡ ಭಾಷೆ ಉಳಿವಿಗಾಗಿ ಹೋರಾಡಿದ್ದರು. ಈಗ ಶಿವರಾಜ್ಕುಮಾರ್ ಕೂಡ ತಂದೆ ಹಾದಿಯಲ್ಲೇ ಹೆಜ್ಜೆ ಹಾಕ್ತಿದ್ದು, ಜಲದ ವಿಚಾರವಾಗಿ ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ. ಈಗಾಗ್ಲೇ ಪಾದಯಾತ್ರೆ ಉದ್ಘಾಟನೆಗೆ ಶಿವರಾಜ್ಕುಮಾರ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಹ್ವಾನ ನೀಡಿದ್ದಾರೆ. ಅದ್ರಂತೆ ಬೆಳಗ್ಗೆ 7.30ಕ್ಕೆ ಡಿಕೆಶಿ ನಿವಾಸಕ್ಕೆ ಶಿವಣ್ಣ ತೆರಳಲಿದ್ದು, ಬಳಿಕ ಡಿಕೆಶಿ, ಸಿದ್ದರಾಮಯ್ಯ ಜತೆ ಸಂಗಮಕ್ಕೆ ತೆರಳಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ.

‘ಕೈ ನಾಯಕರನ್ನು ಅರೆಸ್ಟ್ ಮಾಡೋದು ಬೇಡ’ ಈಗಾಗ್ಲೇ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ವೀಕೆಂಡ್ನಲ್ಲಿ ರಾಜಕೀಯ ಱಲಿ, ಸಭೆ, ಸಮಾರಂಭಗಳಿಗೆಲ್ಲಾ ನಿಷೇಧವಿದೆ. ಈ ರೂಲ್ಸ್ ಮಧ್ಯೆಯೂ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು, ಯಾವುದೇ ಕಾರಣಕ್ಕೂ ಕೈ ನಾಯಕರನ್ನು ಅರೆಸ್ಟ್ ಮಾಡ್ಬೇಡಿ ಅಂತಾ ಹಿರಿಯ ಸಚಿವರು ಸಿಎಂ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ. ಅಲ್ದೆ, ಕಾಂಗ್ರೆಸ್ ನಾಯಕರು ನಿಯಮ ಉಲ್ಲಂಘಿಸಿದರು ಅಂತಾ ಜನರ ಮುಂದೆ ತೋರಿಸಿ. ಕೊರೊನಾ ಸಮಸ್ಯೆ ಆದರೆ ಅವರೇ ಜವಾಬ್ದಾರಿಯಾಗುತ್ತಾರೆ. ಸರ್ಕಾರದಷ್ಟೇ ಅವರಿಗೂ ಜವಾಬ್ದಾರಿ‌ ಇದೆ. ಪಾದಯಾತ್ರೆ ಮಾಡಲಿ ಅಂತಾ ಸಿಎಂ ಬೊಮ್ಮಾಯಿಗೆ ಹಿರಿಯ ಸಚಿವರು ಸಲಹೆ ನೀಡಿದ್ದಾರೆ. ಸಚಿವರ ಮಾತಿಗೆ ಸಿಎಂ ಬೊಮ್ಮಾಯಿ ಕೂಡ ಸಹಮತ ವ್ಯಕ್ತಪಡಿಸಿದ್ದು, 500 ಜನ ಸೇರಿದ್ರೂ ಬಂಧಿಸದಂತೆ ನಿರ್ಧಾರ ಮಾಡಿದ್ದಾರೆ.

165 ಕಿ.ಮೀ. ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ಹೇಗಿದೆ? ಹಲವು ಅಡ್ಡಿ ಆತಂಕಗಳ ನಡುವೆಯೂ ಮೇಕೆದಾಟು ಪಾದಯಾತ್ರೆಗೆ ಇಂದು ಕೈ ಪಡೆ ಕಹಳೆ ಮೊಳಗಿಸೋಕೆ ಸಜ್ಜಾಗಿದೆ. ಬರೋಬ್ಬರಿ 11 ದಿನ 165ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ.

ಸಂಗಮ To ಬೆಂಗಳೂರು Day 1: 15 ಕಿ.ಮೀ. ಪಾದಯಾತ್ರೆ (ಮೇಕೆದಾಟು ಸಂಗಮದಿಂದ ದೊಡ್ಡ ಆಲದಹಳ್ಳಿ) Day 2 ಜನವರಿ 10: 16 ಕಿಲೋ ಮೀಟರ್ ಪಾದಯಾತ್ರೆ (ದೊಡ್ಡ ಆಲದಹಳ್ಳಿಯಿಂದ ಕನಕಪುರ) Day 3 ಜನವರಿ 11: 14.5 ಕಿಲೋ ಮೀಟರ್ ಪಾದಯಾತ್ರೆ(ಕನಕಪುರದಿಂದ ಚಿಕ್ಕೇಹಳ್ಳಿ ಗ್ರಾಮ) Day 4 ಜನವರಿ 12: 15 ಕಿಲೋ ಮೀಟರ್ ಪಾದಯಾತ್ರೆ (ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್) Day 5 ಜನವರಿ 13: 13 ಕಿಲೋ ಮೀಟರ್ ಪಾದಯಾತ್ರೆ (ರಾಮನಗರ ಟೌನ್ನಿಂದ ಬಿಡದಿ ಟೌನ್) Day 6 ಜನವರಿ 14: 16 ಕಿಲೋ ಮೀಟರ್ ಪಾದಯಾತ್ರೆ (ಬಿಡದಿ ಟೌನ್ನಿಂದ ಕೆಂಗೇರಿ ಪೊಲೀಸ್ ಸ್ಟೇಷನ್) Day 7 ಜನವರಿ 15: 15.5 ಕಿಲೋ ಮೀಟರ್ ಪಾದಯಾತ್ರೆ (ಕೆಂಗೇರಿ ಪೊಲೀಸ್ ಸ್ಟೇಷನ್ನಿಂದ ಸಾರಕ್ಕಿ ಸಿಗ್ನಲ್) Day 8 ಜನವರಿ 16: 16 ಕಿಲೋ ಮೀಟರ್ ಪಾದಯಾತ್ರೆ (ಸಾರಕ್ಕಿ ಸಿಗ್ನಲ್ನಿಂದ ಮಾರತ್ತಹಳ್ಳಿ ಜಂಕ್ಷನ್) Day 9 ಜನವರಿ 17: 13.5 ಕಿಲೋ ಮೀಟರ್ ಪಾದಯಾತ್ರೆ (ಮಾರತ್ತಹಳ್ಳಿ ಜಂಕ್ಷನ್ನಿಂದ ಲಿಂಗರಾಜಿಪುರ ಜಂಕ್ಷನ್) Day 10 ಜನವರಿ 18: 14 ಕಿಲೋ ಮೀಟರ್ ಪಾದಯಾತ್ರೆ (ಲಿಂಗರಾಜಿಪುರ ಜಂಕ್ಷನ್ನಿಂದ ಡಿಸಿಸಿ ಕಾಂಗ್ರೆಸ್ ಭವನ) Day 11 ಜನವರಿ 19: 8 ಕಿಲೋ ಮೀಟರ್ ಪಾದಯಾತ್ರೆ (ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು, ಬಸವನಗುಡಿ) ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ.

ಒಟ್ನಲ್ಲಿ, ಸರ್ಕಾರದ ರೂಲ್ಸ್ ಗೆ ಸೆಡ್ಡುಹೊಡೆದು ಇವತ್ತು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಲಿದೆ. ಮೇಕೆದಾಟು ಸಂಗಮದಿಂದ ಬೆಂಗಳೂರುವರೆಗೂ ಪಾದಯಾತ್ರೆ ನಡೆಸಲಿದ್ದು, ರಾಜಧಾನಿಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಕೈ ಪಡೆ ಸಿದ್ಧವಾಗಿರೋದಂತೂ ಸುಳ್ಳಲ್ಲ.

ಇದನ್ನೂ ಓದಿ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರವೇ ಮುಂದಳತ್ವ ವಹಿಸಿದರೆ ಸಹಕಾರ ನೀಡಲು ಕಾಂಗ್ರೆಸ್ ತಯಾರಿದೆ: ಡಿಕೆ ಶಿವಕುಮಾರ್

Follow us on

Related Stories

Most Read Stories

Click on your DTH Provider to Add TV9 Kannada