Mekedatu Padayatra: ಪಾದಯಾತ್ರೆಗೆ ಬರುವ ಯಾರನ್ನು ನೀವು ತಡೆಯುವುದಕ್ಕೆ ಆಗಲ್ಲ: ಡಿಕೆ ಶಿವಕುಮಾರ್

ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ. ಪಾದಯಾತ್ರೆಗೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Mekedatu Padayatra: ಪಾದಯಾತ್ರೆಗೆ ಬರುವ ಯಾರನ್ನು ನೀವು ತಡೆಯುವುದಕ್ಕೆ ಆಗಲ್ಲ: ಡಿಕೆ ಶಿವಕುಮಾರ್
ಕಾಂಗ್ರೆಸ್‌ನಿಂದ ಪಾದಯಾತ್ರೆ
Follow us
TV9 Web
| Updated By: preethi shettigar

Updated on:Jan 09, 2022 | 8:43 AM

ಬೆಂಗಳೂರು: ಇಂದಿನಿಂದ (ಜನವರಿ, 09) ಮೇಕೆದಾಟು ಯೋಜನೆಗಾಗಿ (Mekedatu Padayatra) ಕಾಂಗ್ರೆಸ್‌ನಿಂದ ಪಾದಯಾತ್ರೆ ನಡೆಯಲಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ದೀಪ ಬೆಳಗಿಸುವ ಮೂಲಕ ಕಾಂಗ್ರೆಸ್ (Congress) ಪಾದಯಾತ್ರೆ ಆರಂಭ ಆಗಲಿದೆ. ಬೆಳಗ್ಗೆ 8 ಗಂಟೆಗೆ ಸಂಗಮದಲ್ಲಿ ಕಾವೇರಿ ನದಿಗೆ ಪೂಜೆ ನಡೆಸಿ ಪಾದಯಾತ್ರೆ ಆರಂಭ ಮಾಡಲಾಗುತ್ತದೆ. ಈ ಕುರಿತು ಈಗಾಗಲೇ ಕಾಂಗ್ರೆಸ್​ ನಾಯಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲ ದಿನ 14 ಕಿಲೋ ಮೀಟರ್​ ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದೆ.

ಪಾದಯಾತ್ರೆಗೆ ಬರುವವರಿಗೆ ತೊಂದರೆ ನೀಡುತ್ತಿದ್ದಾರೆ: ಡಿಕೆ ಶಿವಕುಮಾರ್​ ಮೇಕೆದಾಟು ಪಾದಯಾತ್ರೆಗೆ ಬರುವವರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ನೀವು ಯಾರನ್ನೂ ತಡೆಯುವುದಕ್ಕೆ ಆಗಲ್ಲ. ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗಲ್ಲ. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯುವುದಕ್ಕೆ ಆಗಲ್ಲ. ಪಾದಯಾತ್ರೆಗೆ ನಮ್ಮ ತಾಲೂಕಿನಲ್ಲಿ ಎಲ್ಲರೂ ಬೆಂಬಲಿಸುತ್ತಿದ್ದಾರೆ. ಆದರೆ ಕೆಲವರು ಪಾದಯಾತ್ರೆಗೆ ಹೋಗದಂತೆ ಕರೆ ಮಾಡಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಎಲ್ಲರಿಗೂ ಪಾದಯಾತ್ರೆಗೆ ಬನ್ನಿ ಎಂದು ಆಹ್ವಾನ ನೀಡುತ್ತೇನೆ. ಪಾದಯಾತ್ರೆಗೆ ಬರಲು ನಾನು ಯಾರಿಗೂ ಬಲವಂತ ಮಾಡಲ್ಲ. ಪಾದಯಾತ್ರೆ ನಮ್ಮ ಕಾರ್ಯಕ್ರಮವಲ್ಲ, ನಿಮ್ಮ ಕಾರ್ಯಕ್ರಮ. ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಎಸ್‌ಪಿ, ಡಿಸಿ ಏನು ಮಾಡುತ್ತಾರೆ. ಹೆಚ್ಚು ಎಂದರೆ ಇವರು ಸಿದ್ದರಾಮಯ್ಯ ಮತ್ತು ನನ್ನ ಮೇಲೆ ಕೇಸ್ ಹಾಕಬಹುದು. ನಾನು ಫಿಲ್ಮ್ ಚೇಂಬರ್‌ಗೆ ಕೂಡ ಹೋಗಿ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಯಾರು ಬರುತ್ತಾರೆಂದು ನನಗೆ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

165 ಕಿ.ಮೀ. ಪಾದಯಾತ್ರೆಗೆ ಕಾಂಗ್ರೆಸ್ ಸಿದ್ಧತೆ ಹೇಗಿದೆ? ಹಲವು ಅಡ್ಡಿ ಆತಂಕಗಳ ನಡುವೆಯೂ ಮೇಕೆದಾಟು ಪಾದಯಾತ್ರೆಗೆ ಇಂದು ಕೈ ಪಡೆ ಕಹಳೆ ಮೊಳಗಿಸೋಕೆ ಸಜ್ಜಾಗಿದೆ. ಬರೋಬ್ಬರಿ 11 ದಿನ 165ಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ಸಾಗಲಿದೆ.

ಸಂಗಮ To ಬೆಂಗಳೂರು Day 1: 15 ಕಿ.ಮೀ. ಪಾದಯಾತ್ರೆ (ಮೇಕೆದಾಟು ಸಂಗಮದಿಂದ ದೊಡ್ಡ ಆಲದಹಳ್ಳಿ) Day 2 ಜನವರಿ 10: 16 ಕಿಲೋ ಮೀಟರ್ ಪಾದಯಾತ್ರೆ (ದೊಡ್ಡ ಆಲದಹಳ್ಳಿಯಿಂದ ಕನಕಪುರ) Day 3 ಜನವರಿ 11: 14.5 ಕಿಲೋ ಮೀಟರ್ ಪಾದಯಾತ್ರೆ(ಕನಕಪುರದಿಂದ ಚಿಕ್ಕೇಹಳ್ಳಿ ಗ್ರಾಮ) Day 4 ಜನವರಿ 12: 15 ಕಿಲೋ ಮೀಟರ್ ಪಾದಯಾತ್ರೆ (ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್) Day 5 ಜನವರಿ 13: 13 ಕಿಲೋ ಮೀಟರ್ ಪಾದಯಾತ್ರೆ (ರಾಮನಗರ ಟೌನ್ನಿಂದ ಬಿಡದಿ ಟೌನ್) Day 6 ಜನವರಿ 14: 16 ಕಿಲೋ ಮೀಟರ್ ಪಾದಯಾತ್ರೆ (ಬಿಡದಿ ಟೌನ್ನಿಂದ ಕೆಂಗೇರಿ ಪೊಲೀಸ್ ಸ್ಟೇಷನ್) Day 7 ಜನವರಿ 15: 15.5 ಕಿಲೋ ಮೀಟರ್ ಪಾದಯಾತ್ರೆ (ಕೆಂಗೇರಿ ಪೊಲೀಸ್ ಸ್ಟೇಷನ್ನಿಂದ ಸಾರಕ್ಕಿ ಸಿಗ್ನಲ್) Day 8 ಜನವರಿ 16: 16 ಕಿಲೋ ಮೀಟರ್ ಪಾದಯಾತ್ರೆ (ಸಾರಕ್ಕಿ ಸಿಗ್ನಲ್ನಿಂದ ಮಾರತ್ತಹಳ್ಳಿ ಜಂಕ್ಷನ್) Day 9 ಜನವರಿ 17: 13.5 ಕಿಲೋ ಮೀಟರ್ ಪಾದಯಾತ್ರೆ (ಮಾರತ್ತಹಳ್ಳಿ ಜಂಕ್ಷನ್ನಿಂದ ಲಿಂಗರಾಜಿಪುರ ಜಂಕ್ಷನ್) Day 10 ಜನವರಿ 18: 14 ಕಿಲೋ ಮೀಟರ್ ಪಾದಯಾತ್ರೆ (ಲಿಂಗರಾಜಿಪುರ ಜಂಕ್ಷನ್ನಿಂದ ಡಿಸಿಸಿ ಕಾಂಗ್ರೆಸ್ ಭವನ) Day 11 ಜನವರಿ 19: 8 ಕಿಲೋ ಮೀಟರ್ ಪಾದಯಾತ್ರೆ (ಕಾಂಗ್ರೆಸ್ ಭವನದಿಂದ ನ್ಯಾಷನಲ್ ಕಾಲೇಜು, ಬಸವನಗುಡಿ) ಜನವರಿ 19ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ.

ಇದನ್ನೂ ಓದಿ: ಮೇಕೆದಾಟು ಮಹಾಯುದ್ಧ: ಇಂದಿನಿಂದ ಮೇಕೆದಾಟು ಪಾದಯಾತ್ರೆ ಶುರು, 165 ಕಿ.ಮೀ. ಪಾದಯಾತ್ರೆ ಮಾಡಲಿದೆ ಕಾಂಗ್ರೆಸ್

Mekedatu Project: ಮೇಕೆದಾಟು ಪಾದಯಾತ್ರೆ; ಕಾಂಗ್ರೆಸ್​ ಹೋರಾಟ ಹೇಗಿರಲಿದೆ? ಸಂಪೂರ್ಣ ವಿವರ ಇಲ್ಲಿದೆ

Published On - 8:38 am, Sun, 9 January 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್