Mekedatu Project: ಮೇಕೆದಾಟು ಪಾದಯಾತ್ರೆ; ಕಾಂಗ್ರೆಸ್​ ಹೋರಾಟ ಹೇಗಿರಲಿದೆ? ಸಂಪೂರ್ಣ ವಿವರ ಇಲ್ಲಿದೆ

Mekedatu Padayatre: ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್​ ಪಕ್ಷದ ಇತರೆ ನಾಯಕರು ಭಾಗಿ ಆಗಲಿದ್ದಾರೆ.

Mekedatu Project: ಮೇಕೆದಾಟು ಪಾದಯಾತ್ರೆ; ಕಾಂಗ್ರೆಸ್​ ಹೋರಾಟ ಹೇಗಿರಲಿದೆ? ಸಂಪೂರ್ಣ ವಿವರ ಇಲ್ಲಿದೆ
ಕಾಂಗ್ರೆಸ್ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ganapathi bhat

Updated on:Jan 08, 2022 | 6:22 PM

ರಾಮನಗರ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಕುರಿತಂತೆ ಮಾಹಿತಿ ಲಭ್ಯವಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಸಂಗಮದಲ್ಲಿ ಕಾವೇರಿ ನದಿಗೆ ಪೂಜೆ ನಡೆಸಿ ಪಾದಯಾತ್ರೆ ಆರಂಭ ಮಾಡಲಾಗುವುದು. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದಲ್ಲಿ ದೀಪ ಬೆಳಗಿಸುವ ಮೂಲಕ ಕಾಂಗ್ರೆಸ್ ಪಾದಯಾತ್ರೆ ಆರಂಭ ಆಗಲಿದೆ. ಪೂಜೆ ಬಳಿಕ ವೇದಿಕೆ ಮೇಲೆ ಪ್ರಮುಖ ನಾಯಕರ ಭಾಷಣ ನಡೆಯಲಿದೆ. ಮೊದಲ ದಿನ 14 ಕಿಲೋ ಮೀಟರ್​ ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದೆ.

ಕನಕಪುರ ತಾಲೂಕಿನ ಹೆಗ್ಗನೂರಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು ದೊಡ್ಡಆಲದಹಳ್ಳಿಯಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಕಾಂಗ್ರೆಸ್​ ಪಕ್ಷದ ಇತರೆ ನಾಯಕರು ಭಾಗಿ ಆಗಲಿದ್ದಾರೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​​​ನಿಂದ ಪಾದಯಾತ್ರೆ ಬಗ್ಗೆ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ. ನೀರು ನಮ್ಮ ಹಕ್ಕು ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಏನೇ ಮಾಡಿದರೂ ನಮ್ಮ ಹೋರಾಟ ನಿಲ್ಲಲ್ಲ. ಸಂಗಮದಲ್ಲಿ ಅಣೆಕಟ್ಟು ಆಗಬೇಕು, ಜನರಿಗೆ ನೀರು ಬೇಕು. ತಮಿಳುನಾಡು ಕ್ಯಾತೆ ತೆಗೆಯುತ್ತಿದೆ ಎಂಬ ವಿಚಾರ ಬೇಡ. ಇದು ನಮ್ಮ ಹಕ್ಕು ಅದನ್ನ ಮಾಡಲೇಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಬಗ್ಗೆ ಕನಕಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಸಲಾಗಿದೆ. ರಾಮನಗರ ಜಿಲ್ಲೆ ಕನಕಪುರ ಪಟ್ಟಣದ ಡಿಕೆಶಿ ನಿವಾಸದಲ್ಲಿ ಸಭೆ ನಡೆಸಲಾಗಿದೆ. ನಾಳೆಯ ಹೋರಾಟದ ರೂಪರೇಷೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ರಾಲಿಗೆ ಅವಕಾಶ ನೀಡದಿದ್ರೆ ಪ್ಲ್ಯಾನ್ ಬಿ ಕುರಿತು ಮಾತುಕತೆ ನಡೆಸಲಾಗಿದೆ. ಹೇಗೆ ಪಾದಯಾತ್ರೆ ಮಾಡಬೇಕು ಎಂದು ಸಮಾಲೋಚಿಸಲಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್ ಸೇರಿ ಹಲವರು ಭಾಗಿ ಆಗಿದ್ದಾರೆ.

ಮೇಕೆದಾಟು ಹೋರಾಟಕ್ಕೆ ಹೊರಟ ದಾವಣಗೆರೆ ರೈತರು ರೈಲಿನಲ್ಲಿ ರಾಮನಗರಕ್ಕೆ ತೆರಳಿದ್ದಾರೆ. ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ಶಿವಗಂಗಾ ನೇತೃತ್ವದಲ್ಲಿ ರೈತರು ತೆರಳಿದ್ದಾರೆ. ವಾಹನಗಳಿಗೆ ನಿರ್ಬಂಧ ಹಿನ್ನೆಲೆ ರೈಲಿನಲ್ಲಿ ಪ್ರಯಾಣಿಸಿದ ರೈತರು ಅಜ್ಮೀರ್ ಎಕ್ಸಪ್ರೆಸ್ ರೈಲಿನಲ್ಲಿ 200 ಕ್ಕೂ ಅಧಿಕ ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ಪ್ರಯಾಣ ಬೆಳೆಸಿದ್ದಾರೆ. ನಾಳೆ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಸಂಗಮದಿಂದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಮೇಕೆದಾಟು ಪಾದಯಾತ್ರೆ ಯೋಜನೆಯ ವಿವರ ಇಲ್ಲಿದೆ ಜನವರಿ 09 ಮೇಕೆದಾಟುವಿನಿಂದ ಬೆಂಗಳೂರು ಪಾದಯಾತ್ರೆ ಕಾರ್ಯಕ್ರಮ, ಕೆಪಿಸಿಸಿಯಿಂದ ನೀರಿಗಾಗಿ ನಡಿಗೆ ಪಾದಯಾತ್ರೆ ಆರಂಭವಾಗಲಿದೆ. ಜನವರಿ 9 ರಿಂದ 19 ರ ವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ಜನವರಿ 9 ರಂದು ಬೆಳಿಗ್ಗೆ 8-30ಕ್ಕೆ ಸಂಗಮದಲ್ಲಿ ಪಾದಯಾತ್ರೆ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಹೆಗ್ಗನೂರು ತಲುಪಲಿರುವ ಪಾದಯಾತ್ರೆ, ಹೆಗ್ಗನೂರಿನಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ದೊಡ್ಡಆಲಹಳ್ಳಿ ತಲುಪಲಿರುವ ನಾಯಕರು, ಅಂದು ದೊಡ್ಡಆಲಹಳ್ಳಿಯಲ್ಲೇ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 10 ದೊಡ್ಡಆಲಹಳ್ಳಿಯಿಂದ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಾದಪ್ಪನದೊಡ್ಡಿ ತಲುಪಲಿರುವ ಪಾದಯಾತ್ರೆ, ಮಧ್ಯಾಹ್ನ 1ಕ್ಕೆ ಮಾದಪ್ಪನದೊಡ್ಡಿ/ಕರಿಯಣ್ಣನದೊಡ್ಡಿ ತಲುಪಲಿದೆ. ಮಾದಪ್ಪನದೊಡ್ಡಿ/ಕರಿಯಣ್ಣನದೊಡ್ಡಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕನಕಪುರಟೌನ್​ ತಲುಪಲಿರುವ ನಾಯಕರು ಅಂದು ಕನಕಪುರಟೌನಲ್ಲೇ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 11 ಕನಕಪುರದಿಂದ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ತಲುಪಲಿರುವ ಪಾದಯಾತ್ರೆ, ಮಧ್ಯಾಹ್ನ 1ಕ್ಕೆ ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ತಲುಪಲಿರುವ ಪಾದಯಾತ್ರೆ, ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿರುವ ಪಾದಯಾತ್ರೆ ಬಳಿಕ ಅಂದು ಚಿಕ್ಕೇನಹಳ್ಳಿ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 12 ಚಿಕ್ಕೇನಹಳ್ಳಿ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೃಷ್ಣಾಪುರದೊಡ್ಡಿ ತಲುಪಲಿರುವ ಪಾದಯಾತ್ರೆ ಕೃಷ್ಣಾಪುರದೊಡ್ಡಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ರಾಮನಗರ ಟೌನ್ ತಲುಪಲಿರುವ ಪಾದಯಾತ್ರೆ, ಅಂದು ರಾಮನಗರ ಟೌನ್ ನಲ್ಲಿ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 13 ರಾಮನಗರ ಟೌನ್ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮಾಯಾಗಾನಹಳ್ಳಿ ರಾಷ್ಟ್ರೀಯ ಹೆದ್ದಾರಿ ತಲುಪಲಿರುವ ಪಾದಯಾತ್ರೆ ಮಾಯಾಗಾನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಬಿಡದಿ ತಲುಪಲಿರುವ ಪಾದಯಾತ್ರೆ, ಅಂದು ಬಿಡದಿಯಲ್ಲಿ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 14 ಬಿಡದಿಯಲ್ಲಿ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ರಾಜ್​ಕುಮಾರ್​ ಫಾರ್ಂ-ಮಂಚನಾಯಕನಹಳ್ಳಿ ತಲುಪಲಿರುವ ಪಾದಯಾತ್ರೆ ಮಂಚನಾಯಕನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್​ ಹಾಲ್)​ ಬಳಿ ತಲುಪಲಿರುವ ಪಾದಯಾತ್ರೆ ಅಂದು ಕೆಂಗೇರಿ(ಪೂರ್ಣಿಮಾ ಕನ್ವೆಷನ್​ ಹಾಲ್) ಯಲ್ಲಿ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 15 ಕೆಂಗೇರಿ (ಪೂರ್ಣಿಮಾ ಕನ್ವೆಷನ್​ ಹಾಲ್) ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ವೆಂಕಟಾದ್ರಿ ಚೌಟ್ರಿ ಬನಶಂಕರಿ ತಲುಪಲಿರುವ ಪಾದಯಾತ್ರೆ ವೆಂಕಟಾದ್ರಿ ಚೌಟ್ರಿ ಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ತಲುಪಲಿರುವ ಪಾದಯಾತ್ರೆ ಅಂದು ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಲ್ಲಿ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 16 ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಿಂದ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೋರಮಂಗಲ (ಮಂಗಳ ಕಲ್ಯಾಣ ಮಂಟಪ) ತಲುಪಲಿರುವ ಪಾದಯಾತ್ರೆ ಅಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆ ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರ ತಲುಪಲಿರುವ ಪಾದಯಾತ್ರೆ ಅಂದು ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರದಲ್ಲಿ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 17 ಸುಬ್ರಮಣ್ಯ ಚೌಟ್ರಿ ಲಕ್ಷ್ಮೀಪುರದಲ್ಲಿ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಎಎಸ್ ಕಲ್ಯಾಣ ಮಂಟಪ ತಲುಪಲಿರುವ ಪಾದಯಾತ್ರೆ ಸಂಜೆ ಮತ್ತೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ತಲುಪಲಿದೆ. ಅಂದು ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ಸಭೆ/ವಾಸ್ತವ್ಯ ಮಾಡಲಿದ್ದಾರೆ.

ಜನವರಿ 18 ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಿಂದ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮೇಕ್ರಿ ಸರ್ಕಲ್ ಹತ್ತಿರದ ಗಾಯತ್ರಿ ವಿಹಾರದಲ್ಲಿ ಭೋಜನ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಅರಮನೆ ಆವರಣದ ಗಾಯತ್ರಿ ವಿಹಾರದಲ್ಲೇ ನಾಯಕರು ವಾಸ್ತವ್ಯ ಮಾಡಲಿದ್ದಾರೆ.

ಜನವರಿ 19 ರೇಸ್ ಕೋರ್ಸ್ ರಸ್ತೆಯಿಂದ ಬೆಳಿಗ್ಗೆ 8-30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1.30ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ತಲುಪಲಿರುವ ನಾಯಕರು, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ ಮೇಕೆದಾಟು ಪಾದಯಾತ್ರೆ; ಕನಕಪುರದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್

ಇದನ್ನೂ ಓದಿ: Mekedatu Ground Report : ಮೇಕೆದಾಟು ಎಲ್ಲಿದೆ, ಹೇಗಿದೆ ಅನ್ನೋ ಗ್ರೌಂಡ್​ ರಿಪೋರ್ಟ್​ ಇಲ್ಲಿದೆ

Published On - 6:21 pm, Sat, 8 January 22