AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mekedatu Padayatre: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ; ವಿಶ್ರಾಂತಿ ಪಡೆಯಲು ಸೂಚಿಸಿದ ವೈದ್ಯರು

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಸಿದ್ದರಾಮಯ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗ್ಗೆಯಿಂದ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ, ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ.

Mekedatu Padayatre: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ; ವಿಶ್ರಾಂತಿ ಪಡೆಯಲು ಸೂಚಿಸಿದ ವೈದ್ಯರು
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
TV9 Web
| Edited By: |

Updated on:Jan 09, 2022 | 4:02 PM

Share

ರಾಮನಗರ: ಮೇಕೆದಾಟು ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಸಿದ್ದರಾಮಯ್ಯ ವಿಶ್ರಾಂತಿ ಪಡೆದಿದ್ದಾರೆ. ಬೆಳಗ್ಗೆಯಿಂದ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ, ವಿಶ್ರಾಂತಿ ಪಡೆದಿದ್ದಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ.

ಜ್ವರ ಹಿನ್ನೆಲೆ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸಾಗಿದ್ದಾರೆ. ಪಾದಯಾತ್ರೆ ನಡಿಗೆ ಅರ್ಧಕ್ಕೆ ಮೊಟಕುಗೊಳಸಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನತ್ತ ಹೊರಟಿದ್ದಾರೆ. ಅನಾರೋಗ್ಯ ಹಿನ್ನೆಲೆ ಹೆಗ್ಗನೂರಿನಿಂದ ಬೆಂಗಳೂರಿಗೆ ಹೊರಟಿದ್ದಾರೆ. ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡಿರುವ ಬಗ್ಗೆ ಬಿಜೆಪಿ ನಾಯಕ, ಸಚಿವ ಗೋವಿಂದ ಕಾರಜೋಳ ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದ್ದು ನನಗೆ ಕಳವಳ ಆಗಿದೆ.ಸಿದ್ಧರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ.ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು ಎಂದು ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿರುವ ಕೊರೊನಾ ಪ್ರಕರಣದ ಲೆಕ್ಕವೇ ಬೋಗಸ್ ಎಂದು ಹೆಗ್ಗನೂರಿನಲ್ಲಿ ಮಾಜಿ ಸಂಸದ ಧ್ರುವನಾರಾಯಣ ಆರೋಪ ಮಾಡಿದ್ದಾರೆ. ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲು ಪ್ರಕರಣ ಹೆಚ್ಚಳ ಮಾಡಲಾಗಿದೆ. ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚು ತೋರಿಸಿದ್ದಾರೆ. ನಮ್ಮನ್ನು ಹತ್ತಿಕ್ಕಲು ನೈಟ್ ಕರ್ಫ್ಯೂ ಹೇರಿಕೆ ಮಾಡಿದ್ದಾರೆ. ದಿನಕ್ಕೆ 8 ಸಾವಿರ ಕೇಸ್ ಬಂದರೂ ತೊಂದರೆ ಏನೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದ್ದಾರೆ.

ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡ್ತಿದ್ದಾರೆ. ಜಲ ವಿವಾದಗಳನ್ನು ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಹೋರಾಟದ ಮೂಲಕ ಇದನ್ನು ಪರಿಹರಿಸೋಕೆ ಆಗಲ್ಲ. ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷವಿದೆ. ಕಾಂಗ್ರೆಸ್ ಪಕ್ಷ ಈಗಿನಿಂದಲೇ ರಾಜಕಾರಣ ಆರಂಭಿಸಿದೆ. ನೀರಿನ ಯೋಜನೆ ಚುನಾವಣಾ ಅಸ್ತ್ರವಾಗಿ ಬಳಸುತ್ತಿದ್ದಾರೆ. ಪಾದಯಾತ್ರೆಯಿಂದ ಪರಿಸ್ಥಿತಿ ಮತ್ತಷ್ಟು ಜಟಿಲಗೊಳಿಸ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ನ ಪಾದಯಾತ್ರೆ ಕೇವಲ ರಾಜಕೀಯ ಉದ್ದೇಶಕ್ಕಾಗಿ ನಡೆಯುತ್ತಿದೆ. ಕಾಂಗ್ರೆಸ್​ ಪಾದಯಾತ್ರೆ ಮುಂದಿನ ಚುನಾವಣೆಗಾಗಿ ಮಾತ್ರ. ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿಕೆ‌ ನೀಡಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯನ್ನು ಬೆಂಬಲಿಸಿ ಜನವರಿ 19ರಂದು ತಮಿಳುನಾಡು ಗಡಿ ಬಂದ್: ವಾಟಾಳ್ ನಾಗರಾಜ್

ಇದನ್ನೂ ಓದಿ: ‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

Published On - 2:27 pm, Sun, 9 January 22

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್