AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆವಯ್ಯ ಮೂಡ್ ಬಂದಂಗೆ, ಮನಸ್ಸಿಗೆ ಬಂದಂಗೆ ಮಾತಾಡ್ತಾರೆ – ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸಿ.ಪಿ. ಯೋಗೇಶ್ವರ್ ವಾಗ್ದಾಳಿ

ಆವಯ್ಯ ಮೂಡ್ ಬಂದಂಗೆ ಮನಸ್ಸಿಗೆ ಬಂದಂಗೆ ಮಾತಾಡ್ತಾರೆ. ಒಂದು ಸಲ ಹೇಳಿದ್ರು ಮಳೆ ಆಗಲು ನಾನೇ ಕಾರಣ ಅಂದರು. ಮಳೆ ಅನಾಹುತಕ್ಕೂ ಅವರೇ ಕಾರಣವಾಗಬೇಕು ಅಲ್ಲವೇ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಅಷ್ಟು ಗೌರವವಿಲ್ಲ.

ಆವಯ್ಯ ಮೂಡ್ ಬಂದಂಗೆ, ಮನಸ್ಸಿಗೆ ಬಂದಂಗೆ ಮಾತಾಡ್ತಾರೆ - ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸಿ.ಪಿ. ಯೋಗೇಶ್ವರ್ ವಾಗ್ದಾಳಿ
ಸಿ.ಪಿ. ಯೋಗೇಶ್ವರ್
TV9 Web
| Updated By: ಆಯೇಷಾ ಬಾನು|

Updated on:Sep 03, 2022 | 3:36 PM

Share

ರಾಮನಗರ: ಸರ್ಕಾರ ಉರುಳಿಸಲು ಯಾರೋ ನಾಲ್ಕು ಜನರಿಂದ ಸಾಧ್ಯವೇ? ಸರ್ಕಾರ ಏನು ಕಡ್ಡಿ ಮೇಲೆ ನಿಂತಿದೆಯಾ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್​ ವ್ಯಂಗ್ಯ ಮಾಡಿದ್ರು. ಹಾಗೂ ಇದೇ ವೇಳೆ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ವಿರುದ್ಧ ಸಿ.ಪಿ. ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಅವರ ವೈಫಲ್ಯದಿಂದ JDS, ಕಾಂಗ್ರೆಸ್​ ಮೈತ್ರಿ ಸರ್ಕಾರ ಉರುಳಿತ್ತು. ಅವರು ಮೋಜು ಮಸ್ತಿ ಮಾಡುತ್ತಿದ್ದರಿಂದ ಸರ್ಕಾರ ಪತನವಾಗಿತ್ತು. ಆದರೆ ಇಂದು ನನ್ನ ಮೇಲೆ ಬೊಟ್ಟು ಮಾಡುವುದರಲ್ಲಿ ಅರ್ಥವಿಲ್ಲ. ಸಮ್ಮಿಶ್ರ ಸರ್ಕಾರ ಯಾಕೆ ಉರುಳಿತು ಎಂದು ಎಲ್ಲರಿಗೂ ಗೊತ್ತಿದೆ ಸಿ.ಪಿ.ಯೋಗೇಶ್ವರ್​(CP Yogeshwar) ಟೀಕಿಸಿದ್ದಾರೆ.

ಒಂದು ಸಲ ಹೇಳಿದ್ರು ಮಳೆ ಆಗಲು ನಾನೇ ಕಾರಣ ಅಂದರು

ಇನ್ನು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್​ ವಾಗ್ದಾಳಿ ನಡೆಸಿದ್ದಾರೆ. ಆವಯ್ಯ ಮೂಡ್ ಬಂದಂಗೆ ಮನಸ್ಸಿಗೆ ಬಂದಂಗೆ ಮಾತಾಡ್ತಾರೆ. ಒಂದು ಸಲ ಹೇಳಿದ್ರು ಮಳೆ ಆಗಲು ನಾನೇ ಕಾರಣ ಅಂದರು. ಮಳೆ ಅನಾಹುತಕ್ಕೂ ಅವರೇ ಕಾರಣವಾಗಬೇಕು ಅಲ್ಲವೇ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಅಷ್ಟು ಗೌರವವಿಲ್ಲ. ಹೆಚ್​ಡಿಕೆ ಆರೋಪಗಳಿಗೆ ಉತ್ತರ ಕೊಡುವುದು ಸಮಂಜಸವಲ್ಲ. ಹೀಗಾಗಿ ನಾವು ಪ್ರಮಾಣಿಕವಾಗಿ ಕೆಲಸ ಮಾಡಲು ನಿಂತಿದ್ದೇವೆ. ಬಹಿರಂಗ ಚರ್ಚೆಗೆ ಬಂದರೆ ಅವರ ಜೊತೆ ಮಾತನಾಡಬಹುದು. ಹೆಚ್​.ಡಿ.ಕುಮಾರಸ್ವಾಮಿ ‌ಹಿಟ್ & ರನ್ ಹೇಳಿಕೆ ನೀಡುತ್ತಾರೆ. ಮೊದಲು ಮಾತಾಡಿ ಬಳಿಕ ಓಡಿ ಹೋಗುವುದು ನಾನು ಮಾಡಲ್ಲ ಎಂದರು.

ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ಕುಮಾರಸ್ವಾಮಿ ‌ಇಡೀ ತಾಲೂಕಿನಲ್ಲಿ ‌ಒಬ್ಬನೇ ಕಂಟ್ರಾಕ್ಟರ್ ‌ಇಟ್ಟುಕೊಂಡು ದಲ್ಲಾಳಿ‌ ವ್ಯಾಪಾರ ಮಾಡುತ್ತಿದ್ದಾರೆ. ನಾನು ಅವರ ಬಗ್ಗೆ ಕೇವಲವಾಗಿ ಮಾತನಾಡಿ ಚಿಕ್ಕವನಾಗಲು ಹೋಗುವುದಿಲ್ಲ. 2023 ರಲ್ಲಿ ಜನ ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಸರಿನಾ, ಯೋಗೇಶ್ವರ್ ಸರಿನಾ ಅಂತಾ ನನ್ನ ಬಗ್ಗೆ ಇನ್ನೇನೋ‌ ಆರೋಪ ಮಾಡಲು ತಾಲ್ಲೂಕಿನಲ್ಲಿ ಜನ ಕುಮಾರಸ್ವಾಮಿ ಅವರ ಕೈ ಬಿಟ್ಟಿದ್ದಾರೆ. ನಾಲ್ಕು ಜನ ಕಂಟ್ರಾಕ್ಟರ್ ಬಿಟ್ಟರೇ ಜೆಡಿಎಸ್ ನಲ್ಲಿ ನಂಬಲು ಯಾರು ಇಲ್ಲ. ಜನರಿಗೆ ಅರಿವು ಆಗಿದೆ. ಕುಮಾರಸ್ವಾಮಿ ಅವಕಾಶವಾದಿ ಎಂದು ಜನರಿಗೆ ಮನವರಿಕೆ ಆಗಿದೆ. ತಾಲೂಕಿಗೆ ಬಲವಂತವಾಗಿ ಬಂದು ಜನರ ಮೇಲೆ ಸಿಡುಕುತ್ತಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನ ಮಾಡುತ್ತೆನೇ ಎಂದು ಹೇಳಿರುವುದು ದಾಖಲೆ ಇದೆ. ಆದರೆ ಸಾಲ ಮನ್ನಾ ಮಾಡುತ್ತೇನೆ ಎಂದು ಎಲ್ಲಿ ಹೇಳಿದ್ದೆ ಎನ್ನುತ್ತಾರೆ. ಕುಮಾರಸ್ವಾಮಿ ಫರ್ಮ್ ಆಗಿ ಮಾತನಾಡುವುದಿಲ್ಲ, ಕಮಿಟ್ಮೆಂಟ್ ಇಲ್ಲ. 14 ತಿಂಗಳು ಸಿಎಂ ಆದಾಗ ತಾಲೂಕಿನಲ್ಲಿ ‌ಬಸ್ ನಿಲ್ದಾಣ, ‌ಮಿನಿ ವಿಧಾನಸೌಧ, ಒಳಚರಂಡಿ ಮಾಡಲು ಸಾಧ್ಯವಾಗಿಲ್ಲ. ಬಹಳ ಕೆಲಸ ಮಾಡಬಹುದಿತ್ತು. ಚುನಾವಣೆ ಹತ್ತಿರ ಬರುತ್ತಿದೆ ಎಂದು ಯಾರೊ ಬಲವಂತಕ್ಕೆ ಬರುತ್ತಾರೆ, ಓಡಿ ಹೊಗುತ್ತಾರೆ ಎಂದು ಹೆಚ್​ಡಿಕೆ ವಿರುದ್ಧ ಗುಡುಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:36 pm, Sat, 3 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?