AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ ಮತ್ತು ಅಪಾಯಕಾರಿ, ಮಕ್ಕಳಿಗೆ ಸಂಸ್ಕಾರ ಕಲಿಸಬೇಕು :ಡಾ.ಕೆ.ಪಿ. ಪುತ್ತೂರಾಯ ಕರೆ

ಸಾಧಕರಿಗೆ ಗೌರವ ಸೇವಾ ಪ್ರಶಸ್ತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿಗಳು ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರು ಆದ ಡಾ.ಬೈರಮಂಗಲ ರಾಮೇಗೌಡ ಅವರು, ಆಧುನಿಕತೆ ಮತ್ತು ಜಾಗತೀಕರಣದ ಭರಾಟೆಯಲ್ಲಿ ಇಂದು ಮನುಷ್ಯ ಸಂಬಂಧಗಳ ಅರ್ಥವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಕೀಲ ಟಿ.ವಿ.ಗಿರೀಶ್ ಅವರು ಜನ್ಮ ಕೊಟ್ಟ, ಬದುಕನ್ನು ರೂಪಿಸಿದ ತಂದೆ ತಾಯಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ಸಮಾಜ ಸೇವೆಗೆ ಸಮರ್ಪಣೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ ಮತ್ತು ಅಪಾಯಕಾರಿ, ಮಕ್ಕಳಿಗೆ ಸಂಸ್ಕಾರ ಕಲಿಸಬೇಕು :ಡಾ.ಕೆ.ಪಿ. ಪುತ್ತೂರಾಯ ಕರೆ
ಅರ್ಥಪೂರ್ಣವಾಗಿ ಜರುಗಿದ ದಿ. ಶ್ರೀಮತಿ ಗೌರಮ್ಮ-ವೆಂಕಟಗಿರಿಗೌಡ ಸ್ಮಾರಕ ದತ್ತಿ ಸಮಾರಂಭ
ಸಾಧು ಶ್ರೀನಾಥ್​
|

Updated on:Feb 28, 2024 | 9:32 PM

Share
ರಾಮನಗರ, ಫೆಬ್ರವರಿ 28: ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣ ಮತ್ತು ಅಪಾಯಕಾರಿಯಾಗಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣದ (Education) ಜೊತೆಗೆ ಸಂಸ್ಕಾರ, ಮಾನವೀಯ ಗುಣಗಳನ್ನು ಕಲಿಸಿ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸಬೇಕು ಎಂದು ಅಂಕಣಕಾರರು ಹಾಗೂ ಭಾರತೀಯ ವೈದ್ಯಕೀಯ ಮಹಾವಿದ್ಯಾಲಯದ ವಿಶ್ರಾಂತ ನಿರ್ದೇಶಕರು ಆದ ಡಾ.ಕೆ.ಪಿ.ಪುತ್ತೂರಾಯ ಅವರು ತಿಳಿಸಿದರು. ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ಮತ್ತು ದತ್ತಿದಾನಿಗಳು ಮತ್ತು ವಕೀಲರ ಸಂಘದ ಅಧ್ಯಕ್ಷರು ಆದ ಟಿ.ವಿ.ಗಿರೀಶ್ ಹಾಗೂ ಭಾರತ್ ವಿಕಾಸ ಪರಿಷದ್ ಕಣ್ವ ಶಾಖೆ ಇವರ ಸಹಯೋಗದೊಂದಿಗೆ ನಗರದ ಶತಮಾನೋತ್ಸವ ಭವನದಲ್ಲಿ ಬಹಳ ಅರ್ಥಪೂರ್ಣವಾಗಿ ಆಯೋಜಿಸಿದ್ದ ತಿಟ್ಟಮಾರನಹಳ್ಳಿ ದಿವಂಗತ ಶ್ರೀಮತಿ ಗೌರಮ್ಮ ಮತ್ತು ಶ್ರೀ ವೆಂಕಟಗಿರಿಗೌಡ ಸ್ಮಾರಕ ದತ್ತಿ ಸಮಾರಂಭವನ್ನು (Thittamaranahalli Late Srimati Gouramma and Sri Venkatagiri Gowda Memorial Endowment Ceremony)  ಉದ್ಘಾಟಿಸಿ ಅವರು ಮಾತನಾಡಿ ಬದುಕಿನ ಗಂಭೀರತೆಗಳನ್ನು ತಿಳಿಹಾಸ್ಯದ ಮೂಲಕ ಹೇಳಿ ಪ್ರೇಕರಲ್ಲಿ ಜಾಗೃತಿ ಮೂಡಿಸಿದರು  (Ramanagara News).

ಜೀವಂತವಾಗಿರುವಾಗ  ತಂದೆ ತಾಯಿಗಳಿಂದ ಸೇವೆಯನ್ನು ಮಾಡಿಸಿಕೊಂಡು ವಯಸ್ಸಾದಾಗ ಅವರ ಸೇವೆಯನ್ನು ಮಾಡದೇ ಅವರನ್ನು ಮನೆಯಿಂದ ಹೊರ ಹಾಕುವ, ವೃದ್ದಾಶ್ರಮಗಳಿಗೆ ಸೇರಿಸುವ ಮಕ್ಕಳೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಹೆತ್ತ ತಂದೆ ತಾಯಿಗಳನ್ನು ಸ್ಮರಿಸಿಕೊಂಡು ಅವರ ಹೆಸರಿನಲ್ಲಿ ದತ್ತಿ ಇಟ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಿರುವ ವಕೀಲ ಟಿ.ವಿ.ಗಿರೀಶ್ ಅವರ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ. ಸಮಾಜದಲ್ಲಿ ಇಂತಹವರ ಸಂತತಿ ಹೆಚ್ಚಾಗಲಿ ಎಂದು ಡಾ.ಕೆ.ಪಿ.ಪುತ್ತೂರಾಯ ಅವರು ಆಶಿಸಿದರು.

ಮನುಷ್ಯನಿಗೆ ನೈತಿಕ ಬೆಳವಣಿಗೆ ಮುಖ್ಯ. ಏನೇ ಅದರೂ ಮೊದಲು ಮಾನವರಾಗಬೇಕು.ಒಳ್ಳೆಯ ಸುಸಂಸ್ಕೃತ ವ್ಯಕ್ತಿಗಳಾಗಬೇಕು. ಆರ್ಥಿಕ ಶ್ರೀಮಂತಿಕೆ ಇಲ್ಲದಿದ್ದರೂ ಹೃದಯ ಶ್ರೀಮಂತಿಕೆ ಇರಬೇಕು. ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಲಿಸಿದ ಗುರು, ಅನ್ನ ನೀಡುವ ರೈತ, ರಕ್ಷಣೆ ಮಾಡುವ ಸೈನಿಕ ಮತ್ತು ಸಮಾಜವನ್ನು ನಾವೂ ಎಂದೂ ಮರೆಯಬಾರದು. ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ನಮ್ಮ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಡಾ.ಕೆ.ಪಿ.ಪುತ್ತೂರಾಯ ಅವರು ಸಲಹೆ ಮಾಡಿದರು.
ಸಾಧಕರಿಗೆ ಗೌರವ ಸೇವಾ ಪ್ರಶಸ್ತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಿ ಮಾತನಾಡಿದ ಹಿರಿಯ ಸಾಹಿತಿಗಳು ಹಾಗೂ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರು ಆದ ಡಾ.ಬೈರಮಂಗಲ ರಾಮೇಗೌಡ ಅವರು, ಆಧುನಿಕತೆ ಮತ್ತು ಜಾಗತೀಕರಣದ ಭರಾಟೆಯಲ್ಲಿ ಇಂದು ಮನುಷ್ಯ ಸಂಬಂಧಗಳ ಅರ್ಥವನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಕೀಲ ಟಿ.ವಿ.ಗಿರೀಶ್ ಅವರು ಜನ್ಮ ಕೊಟ್ಟ, ಬದುಕನ್ನು ರೂಪಿಸಿದ ತಂದೆ ತಾಯಿಗಳ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ಸಮಾಜ ಸೇವೆಗೆ ಸಮರ್ಪಣೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಟಿ.ವಿ.ಗಿರೀಶ್ ಅವರು ರಾಜ್ಯೋತ್ಸವ ಪ್ರಶಸ್ತಿಗಳಿಗೆ ಅರ್ಹರಾದ, ಉತ್ತಮ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸರ್ಕಾರಕ್ಕೆ ಇಂತಹ ಸಾಧಕರನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಸಂದೇಶ ರವಾನಿಸುತ್ತಿರುವುದು ಮತ್ತು ಪ್ರತಿಭಾವಂತ ಮಕ್ಕಳನ್ನು  ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ವ್ಯಕ್ತಿತ್ವದ ಸಮರ್ಪಕ ಬೆಳವಣಿಗೆಗೆ ಹಾಗೂ ಉತ್ತಮ ಸಾಧನೆಗೆ ಸಂಸ್ಕೃತಿ, ಸಂಸ್ಕಾರ, ಕಲೆ ಸಾಹಿತ್ಯದ ಕಡೆ ಹೆಚ್ಚಿನ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಡಾ.ಬೈರಮಂಗಲ ರಾಮೇಗೌಡ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಗೌಡಗೆರೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ಶ್ರೀ ಮಲ್ಲೇಶ್ ಗುರೂಜಿ ಅವರು ಆಶೀರ್ವಚನ ನೀಡಿ, ವಕೀಲ ಟಿ.ವಿ ಗಿರೀಶ್ ಅವರು ಸಮಾಜಮುಖಿ ಕಾರ್ಯಗಳ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಜೀವನ ಹಂಗು ತೊರೆದು ಬಡವರು, ನಿರ್ಗತಿಕರು, ಮಂಗಳಮುಖಿಗಳಿಗೆ ಬಟ್ಟೆ, ಊಟ, ಆಹಾರ ಪದಾರ್ಥಗಳ ವಿತರಣೆ ಮಾಡಿದ್ದು ಅವಿಸ್ಮರಣೀಯ. ಇದರ ಜೊತೆಗೆ ತಮ್ಮ ತಂದೆ ತಾಯಿ ಹೆಸರಿನಲ್ಲಿ ನಮ್ಮ ಶ್ರೀಕ್ಷೇತ್ರದಲ್ಲಿ ದಿನನಿತ್ಯ ನಡೆಯುವ ಅನ್ನ ದಾಸೋಹಕ್ಕೆ ೧ ಲಕ್ಷ ರೂ. ದೇಣಿಗೆ ನೀಡಿ ಕಣ್ಣಿಗೆ ಕಾಣದ ರೀತಿಯಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿ ಅವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸೇವೆ ಮಾಡುವ ಶಕ್ತಿ ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರು, ದತ್ತಿ ದಾನಿಗಳು,ಸಮಾಜ ಸೇವಕರು ಆದ ಟಿ.ವಿ.ಗಿರೀಶ್ ಅವರು ಭಾವುಕತೆಯಿಂದ ಮಾತನಾಡಿ ನನ್ನ ತಂದೆ ತಾಯಿ ಅವಿದ್ಯಾವಂತರಾದರೂ, ನನ್ನನ್ನು ವಿದ್ಯಾವಂತ, ಸುಸಂಸ್ಕೃತನನ್ನಾಗಿ ಸೇವಾ ಮಾಡುವ ಶಕ್ತಿ ಎರೆದಿದ್ದಾರೆ. ಸರ್ಕಾರಿ ಶಾಲೆಯ ವಿಧ್ಯಾಭ್ಯಾಸ, ಬಡತನ,ಹಸಿವು ಏನು ಎನ್ನುವುದು ನನಗೆ ಅರಿವಿದ್ದು ನನ್ನ ವಕೀಲ ವೃತ್ತಿಯಲ್ಲಿ ಗಳಿಸಿದ ಆದಾಯದ ಶೇ.೫೦ ರಷ್ಟು ಹಣವನ್ನು ಸಮಾಜಮುಖಿ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದೇನೆ. ಯಾವುದೇ ಹೊಗಳಿಕೆ, ತೆಗಳಿಗೆ ಕಿವಿಗೊಡದೇ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡಿಕೊಂಡು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಲು ಶ್ರಮಿಸುತ್ತಿದ್ದೇನೆ. ಎಲ್ಲರ ಸಲಹೆ ಸಹಕಾರ ಪ್ರೋತ್ಸಾಹ ಮುಂದೆಯೂ ಹೀಗೆ ಇರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಕೆ.ಯೋಗೇಶ್, ಕಾರ್ಯದಶಿ ಚನ್ನಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಆರ್.ಸತೀಶ್,ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಂ.ವಿ.ಶಿವಕುಮಾರ್, ಹೈಕೋರ್ಟ್ ವಕೀಲ ಉದಯಸಿಂಗ್, ನಗರಸಭಾ ಪೌರಾಯುಕ್ತ ಪುಟ್ಟಸ್ವಾಮಿ, ಕುಕ್ಕಟ ಮಹಾ ಮಂಡಳಿ ಮಾಜಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಚನ್ನಪಟ್ಟಣ ಯೋ.ಪ್ರಾ.ಮಾಜಿ ಅಧ್ಯಕ್ಷರಾದ ಎ.ಸಿ.ವೀರೇಗೌಡ, ಆರ್.ಎಂ.ಮಲವೇಗೌಡ, ಮಕ್ಕಳ ತಜ್ಞೆ ಡಾ.ರಾಜಶ್ರೀ, ಬಿಇಒ ಮರೀಗೌಡ, ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ವೆಂಕಟೇಶ್, ರಾಷ್ಟçಪತಿ ಭವನದ ಹಿರಿಯ ಅಧಿಕಾರಿ ವಿ.ಸಿ.ಶ್ರೀನಿವಾಸ್, ಪತ್ರಕರ್ತ-ಹೋರಾಟಗಾರ ರಮೇಶ್‌ಗೌಡ, ವಿಶ್ರಾಂತ ಅಧ್ಯಾಪಕ ದಯಾನಂದ್, ಟಿ.ಪಿ.ಹನುಮಂತಯ್ಯ, ಡಾ.ಮಲವೇಗೌಡ, ಭಾ.ವಿ.ಪ. ಪದಾಧಿಕಾರಿಗಳಾದ ಬೆಸ್ಕಾಂ ಶಿವಲಿಂಗಯ್ಯ, ವಿ.ಟಿ.ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬುದ್ಧ ಬಸವ ಗಾಂಧಿ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ್(ಸಿಸಿರಾ) ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾ.ವಿ.ಪ. ಅಧ್ಯಕ್ಷ ಪಿ.ಗುರುಮಾದಯ್ಯ ಸ್ವಾಗತಿಸಿದರು. ವಸಂತಕುಮಾರ್ ನಿರೂಪಣೆ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಂಘ ಸಂಸ್ಥೆಗಳು ಕಾರ್ಯಕ್ರಮದ ರೂವಾರಿ ಟಿ.ವಿ.ಗಿರೀಶ್ ಅವರ ಸೇವಾ ಕಾರ್ಯವನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:26 pm, Wed, 28 February 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!