ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಹಿಳೆ ಮೈಕೈ ಮುಟ್ಟಿ ಅನುಚಿತ ವರ್ತನೆ: ಬಿಜೆಪಿ ಮಂಡಲ ಅಧ್ಯಕ್ಷನ ವಿರುದ್ಧ ಎಫ್​ಐಆರ್

ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರಿದ್ದು, ಮತ್ತೊಮ್ಮೆ ಕ್ಷೇತ್ರವನ್ನ ವಶಕ್ಕೆ ಪಡೆಯಲು ಜೆಡಿಎಸ್​​ ಕಸರತ್ತು ನಡೆಸಿದೆ. ಆದ್ರೆ, ಜೆಡಿಎಸ್​ ಮತ್ತು ಬಿಜೆಪಿ ನಡುವೆ ಟಿಕೆಟ್​ಗಾಗಿ ಭಾರೀ ಪೈಪೋಟಿ ನಡೆದಿದೆ. ಮತ್ತೊಂದೆಡೆ ಈ ಬಾರಿ ಚನ್ನಪಟ್ಟಣದಲ್ಲಿ ದೋಸ್ತಿಗೆ ಶಾಕ್ ಕೊಡಲು ಕಾಂಗ್ರೆಸ್​ ಭರ್ಜರಿ ತಯಾರಿ ನಡೆಸಿದೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯ ಚನ್ನಪಟ್ಟಣ ಗ್ರಾಮಾಂತರ‌ ಬಿಜೆಪಿ ಮಂಡಲ ಅಧ್ಯಕ್ಷನ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಹಿಳೆ ಮೈಕೈ ಮುಟ್ಟಿ ಅನುಚಿತ ವರ್ತನೆ: ಬಿಜೆಪಿ ಮಂಡಲ ಅಧ್ಯಕ್ಷನ ವಿರುದ್ಧ ಎಫ್​ಐಆರ್
ಚನ್ನಪಟ್ಟಣ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ಟಿ.ಎಸ್.ರಾಜು
Follow us
| Updated By: ರಮೇಶ್ ಬಿ. ಜವಳಗೇರಾ

Updated on:Sep 09, 2024 | 6:15 PM

ರಾಮನಗರ, (ಸೆಪ್ಟೆಂಬರ್ 09): ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದ್ದು, ಇದೀಗ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದೆ. ಆದ್ರೆ, ಮೆರವಣಿಗೆ ವೇಳೆ ಅಲ್ಲಲ್ಲಿ ಗಲಾಟೆ, ಗದ್ದಲ ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತ ರಾಮನಗರ ಜಿಲ್ಲೆಯಲ್ಲಿ ಗಣೇಶ ಮೂರ್ತಿ ಮೆರವಣಿ ಬಿಜೆಪಿ ಮುಖಂಡ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚನ್ನಪಟ್ಟಣ ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ಟಿ.ಎಸ್.ರಾಜು ಎನ್ನುವರು ಗಣೇಶನ ಮೆರವಣಿಗೆ ವೇಳೆ ಮಹಿಳೆಯೊಬ್ಬರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದು, ಈ ಬಗ್ಗೆ ಸಂತ್ರಸ್ತ ಮಹಿಳೆ ರಾಜು ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ‌ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಸಿದ್ದಾರೆ. ಅತ್ತ ದೂರು ದಾಖಲಾಗುತ್ತಿದ್ದಂತೆಯೇ ಇತ್ತ ಬಿಜೆಪಿಯಿಂದ ಟಿ.ಎಸ್.ರಾಜುರನ್ನ ಅಮಾನತು ಮಾಡಲಾಗಿದೆ.

ಸೆಪ್ಟೆಂಬರ್ 7ರ ರಾತ್ರಿ‌ 11:45 ಸುಮಾರಿಗೆ ಗಣೇಶ ಮೆರವಣಿಗೆ ನೋಡಲು ಮನೆ ಹೊರಗಡೆ ನಿಂತಿದ್ದ ವೇಳೆ ರಾಜು, ಮಹಿಳೆಯನ್ನು ಹಿಂದಿನಿಂದ ಬಂದು ಯಾವಾಗ ಬಂದೆ ಬೇಬಿ ಹೆಗಲ ಮೇಲೆ ಕೈ ಹಾಕಿ, ಬಳಿಕ ಎದೆಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.  ಅಲ್ಲದೇ ಫೋಟೋ ತೆಗೆದು ಇತರರಿಗೆ ಕಳಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ಟಿ.ಎಸ್.ರಾಜು ಮೊಬೈಲ್ ಕಸಿದುಕೊಂಡಿರುವ ಮಹಿಳೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನನ್ನೂ ಓದಿ: ಬೆಳಗಾವಿ: ಓಡಿ ಹೋದ ಮಗಳು ಗರ್ಭಿಣಿ ಅಂತ ಅಪಪ್ರಚಾರ, ತಮ್ಮನನ್ನು ಕೊಂದ ಅಣ್ಣ

ತೂಬಿನಕೆರೆ ಗ್ರಾಮದ ಪೂರ್ಣಾ(ಹೆಸರು ಬದಲಾಯಿಸಲಾಗಿದೆ) ಎನ್ನುವವರು ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, 2 ದಿನದ ಹಿಂದೆ ಗಣೇಶ ವಿಸರ್ಜನೆ ವೇಳೆ ರಾಜು ನನ್ನ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ನನ್ನ ಮನೆ ಮುಂದೆಯೇ ನನ್ನ ಫೋಟೋ (Photo) ತೆಗೆದು ರೇಗಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿ ಎನ್ ಎಸ್ ಆಕ್ಟ್ ಪ್ರಕಾರ (u/s-74,75)‌ಕಲಂ‌ ಅಡಿ ಎಫ್ಐಆರ್ ದಾಖಲಾಗಿದೆ. ಇನ್ನು ಎಫ್​ಐಆರ್ ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜು ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಸದ್ಯ ಪೊಲೀಸರು ತನಿಖೆ ನಡೆಸಿದ್ದಾರೆ.

ಬಿಜೆಪಿಯಿಂದ ರಾಜು ಅಮಾನತು

ಚನ್ನಪಟ್ಟಣ ಗ್ರಾಮಾಂತರ ಮಂಡಲ ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಾಗುತ್ತಿದ್ದಂತೆಯೇ ರಾಜುನನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ. ಟಿ.ಎಸ್.ರಾಜು ಅಮಾನತು ಮಾಡಿ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Mon, 9 September 24