KSRTC ಬಸ್‌ನಲ್ಲಿ ಟಿಕೆಟ್ ಮಷಿನ್ ಖಾಸಗಿ ವ್ಯಕ್ತಿಗೆ ಕೊಟ್ಟು ಕೆಲಸ ಕಳೆದುಕೊಂಡ ಕಂಡಕ್ಟರ್

| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2025 | 9:24 PM

KSRTC ಬಸ್‌ ಕಂಡಕ್ಟರ್​ ಖಾಸಗಿ ವ್ಯಕ್ತಿಯೋರ್ವನಿಗೆ ಮಷಿನ್ ನೀಡಿ ಟಿಕೆಟ್​ ನೀಡುವಂತೆ ಹೇಳಿ ಕೆಲಸ ಕಳೆದುಕೊಂಡಿದ್ದಾನೆ. ಇನ್ನು ಖಾಸಗಿ ವ್ಯಕ್ತಿ ತಾನು ಟಿಕೆಟ್​ ಕೊಡುವ ಅನುಭವ ಪಡೆಯುತ್ತಿದ್ದೇನೆಂದು ರಾಜಾರೋಷವಾಗಿ ಪ್ರಯಾಣಿಕರಿಂದ ಹಣ ಸ್ವೀಕರಿಸಿದ್ದ. ಅಲ್ಲದೇ ಹಣ ಪಡೆದುಕೊಂಡು ಟಿಕೆಟ್​ ನೀಡುತ್ತಿರಲಿಲ್ಲ. ಟಿಕೆಟ್​ ಅಂತ ಪ್ರಯಾಣಿಕರು ಕೇಳಿದ್ರೆ ನಾನು ನೋಡಿಕೊಳ್ಳುತ್ತೇನೆ, ನಮ್ಮನ್ನು ಚೆಕ್​ ಮಾಡಲು ಯಾರು ಬರಲ್ಲ ಎಂದು ಹೇಳಿಕೊಂಡಿದ್ದಾನೆ. ಇದೀಗ ಕಂಡಕ್ಟರ್​ ಕೆಲಸ ಕಳೆದುಕೊಳ್ಳುವಂತಾಗಿದೆ.

KSRTC ಬಸ್‌ನಲ್ಲಿ ಟಿಕೆಟ್ ಮಷಿನ್ ಖಾಸಗಿ ವ್ಯಕ್ತಿಗೆ ಕೊಟ್ಟು ಕೆಲಸ ಕಳೆದುಕೊಂಡ ಕಂಡಕ್ಟರ್
Kanakapura Bus Conductor
Follow us on

ರಾಮನಗರ, (ಜನವರಿ 15): ಕೆಎಸ್ಆರ್‌ಟಿಸಿ ಬಸ್‌ ನಲ್ಲಿ (KSRTC Bus) ಖಾಸಗಿ ವ್ಯಕ್ತಿಯೋರ್ವ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ‌ಮಾಡ್ತಿದ್ದ ಪ್ರಕರಣ ಸಂಬಂಧ ಬಸ್ ನಿರ್ವಾಹಕನನ್ನ (Bus Conductor) ಅಮಾನತು ಮಾಡಲಾಗಿದೆ. ಕನಕಪುರ ಡಿಪೋಗೆ ಸೇರಿದ KA42-F0746 ಕೆಎಸ್ಆರ್‌ಟಿಸಿ ಬಸ್‌ನಲ್ಲಿ ನಿರ್ವಾಹಕ, ಟಿಕೆಟ್​ ಮಷಿನ್​ ಖಾಸಗಿ ವ್ಯಕ್ತಿಗೆ ಕೊಟ್ಟು ಇದೀಗ ಕೆಲಸ ಕಳೆದುಕೊಂಡಿದ್ದಾರೆ. ಚಾಲಕ ಕಂ ನಿರ್ವಾಹಕ ನವೀನ್​ ಟಿ.ಎನ್​ ಎನ್ನುವರನ್ನು ಅಮಾನತು ಮಾಡಿ ಶಿಸ್ತುಪಾಲನಾ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಟಿಕೆಟ್​ ನೀಡಿದ್ದ ಖಾಸಗಿ ವ್ಯಕ್ತಿ ವಿರುದ್ಧ ಕನಕಪುರ ಡಿಪೋ ಮ್ಯಾನೇಜರ್ ಕೋಡಿಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಕಂಡಕ್ಟರ್ ನವೀನ್​ ಖಾಸಗಿ ವ್ಯಕ್ತಿಗೆ ಟಿಕೆಟ್ ಮಷಿನ್ ನೀಡಿದ್ದರು. ಇನ್ನು ಆ ವ್ಯಕ್ತಿ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡುತ್ತಿದ್ದ. ಜೊತೆಗೆ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿ, ಪುರುಷರು ಹಣ ಕೊಟ್ಟರೂ ಟಿಕೆಟ್ ನೀಡದೇ ರಾಜರೋಷವಾಗಿ ಅಧಿಕಾರಿಗಳಿಗೆ ಮಾಮೂಲಿ ಕೊಡುತ್ತೇವೆ ನಮ್ಮ ಬಸ್ ಚೆಕ್ಕಿಂಗ್ ಮಾಡಲು ಯಾರೂ ಬರಲ್ಲ ಎಂದಿದ್ದ. ಇದನ್ನ ಪ್ರಯಾಣಿಕನೋರ್ವ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಫುಲ್ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಕಂಡಕ್ಟರ್​ ವಿರುದ್ಧ ಕ್ರಮಕೈಗೊಂಡಿದ್ದಾರೆ.

ರಾಜಾರೋಷವಾಗಿ ಪುರುಷರ ಬಳಿ ದುಡ್ಡು ಸ್ವೀಕರಿಸಿ ಟಿಕೆಟ್ ನೀಡುತ್ತಿರಲಿಲ್ಲ. ಇದಕ್ಕೆ ಪ್ರಯಾಣಿಕರು ಸಹ ಚೆಕ್ಕಿಂಗ್ ಅಧಿಕಾರಿಗಳು ಬಂದ್ರೆ ಏನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಯುವಕ, ಅದೆಲ್ಲಾ ನಾನು ನೋಡಿಕೊಳ್ಳುತ್ತೇನೆ. ಅಧಿಕಾರಿಗಳಿಗೆ ತಿಂಗಳು ಮಾಮೂಲಿ ಕೊಡುತ್ತೇವೆ. ಅವರೆಲ್ಲಾ ನಮ್ಮ ಬಸ್ ಚೆಕ್ ಮಾಡುವುದಿಲ್ಲ ಎಂದಿದ್ದಾನೆ. ಇದನ್ನ ಪ್ರಯಾಣಿಕನೋರ್ವ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.ಇದರಿಂದ ಎಚ್ಚೆತ್ತ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕನನ್ನ ಅಮಾನತು ಮಾಡಿದ್ದಾರೆ.

Published On - 9:22 pm, Wed, 15 January 25