ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್​ಗೆ ಕನ್ಫರ್ಮ್ ಆಗಿದೆ: ಶಾಸಕ ಜಿಟಿ ದೇವೇಗೌಡ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 25, 2024 | 8:31 PM

ರಾಮನಗರ ತಾಲೂಕಿನ ಕೇತಗಾನಹಳ್ಳಿ ಬಳಿಯಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಫಾರ್ಮ್​ಹೌಸ್​ನಲ್ಲಿ ಸ್ಥಳೀಯ ನಾಯಕರ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್​ಗೆ ಕನ್ಫರ್ಮ್ ಆಗಿದೆ ಎಂದಿದ್ದಾರೆ. ಸುಮಲತಾರವರು ಅಧಿಕೃತ ಬಿಜೆಪಿ ಮೆಂಬರ್​ ಅಲ್ಲ. ಆದರೂ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್​ಗೆ ಕನ್ಫರ್ಮ್ ಆಗಿದೆ: ಶಾಸಕ ಜಿಟಿ ದೇವೇಗೌಡ
ಶಾಸಕ ಜಿ.ಟಿ.ದೇವೇಗೌಡ
Follow us on

ರಾಮನಗರ, ಫೆಬ್ರವರಿ 25: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್​ಗೆ ಕನ್ಫರ್ಮ್ ಆಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ (GT Devegowda) ಹೇಳಿದ್ದಾರೆ. ರಾಮನಗರ ತಾಲೂಕಿನ ಕೇತಗಾನಹಳ್ಳಿ ಬಳಿಯಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಫಾರ್ಮ್​ಹೌಸ್​ನಲ್ಲಿ ಸ್ಥಳೀಯ ನಾಯಕರ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಸ್ಥಳೀಯ ನಾಯಕರ ಸಭೆ ನಡೆಸಿ ಚುನಾವಣೆ ಸಿದ್ಧತೆ ಮಾಡುತ್ತಿದ್ದೇವೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಅಭ್ಯರ್ಥಿ ಯಾರೆಂದು ಇನ್ನೂ ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ.

ಸುಮಲತಾರವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ

ಟಿಕೆಟ್​ಗಾಗಿ ಸಂಸದೆ ಸುಮಲತಾ ಸಭೆ ವಿಚಾರವಾಗಿ ಮಾತನಾಡಿದ ಅವರು, ಸುಮಲತಾರವರು ಅಧಿಕೃತ ಬಿಜೆಪಿ ಮೆಂಬರ್​ ಅಲ್ಲ. ಆದರೂ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಮಂಡ್ಯ ಕೇಳಿದರೆ ಬೆಂಗಳೂರು ನಾರ್ತ್ ಕೊಡಬಹುದು ಎಂಬ ಲೆಕ್ಕಾಚಾರ ಇರಬಹುದು. ನನಗೆ ಕೆಲವರು ಈ ಬಗ್ಗೆ ಹೇಳುತ್ತಿದ್ದಾರೆ ಎಂದರು.

5.5 ಲಕ್ಷ ಮತಗಳು ಜೆಡಿಎಸ್ ಪರ ಇವೆ: ನಿಖಿಲ್ ಕುಮಾರಸ್ವಾಮಿ

ಜೆಡಿಎಸ್​ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ 5.5 ಲಕ್ಷ ಮತಗಳು ಜೆಡಿಎಸ್ ಪರ ಇವೆ. ಹಾಗಾಗಿ ಮಂಡ್ಯ ಉಳಿಸಿಕೊಳ್ಳಬೇಕೆಂಬುದು ಮುಖಂಡರ ಒತ್ತಾಯ. ನಮ್ಮ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಬಲಿಗರ ಸಭೆ ಅಂತ್ಯ: ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು

ಬಿಜೆಪಿ ವರಿಷ್ಠರು ಯಾವ ಸೂಚನೆ ನೀಡಿದರೂ ಗೌರವ ಕೊಡುತ್ತೇವೆ. ಬೆಂಗಳೂರಿನಲ್ಲಿ ಬೆಂಬಲಿಗರ ಜೊತೆ ಸುಮಲತಾ ಸಭೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಆರೋಗ್ಯಕರವಾದ ಬೆಳವಣಿಗೆಗಳು ಆಗುತ್ತಿವೆ. ಹಾಗಾಗಿ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದಿದ್ದಾರೆ.

ನಾನು ಮಂಡ್ಯ ಟಿಕೆಟ್ ಆಕಾಂಕ್ಷಿ ಅಲ್ಲ: ಪುಟ್ಟರಾಜು 

ಮಂಡ್ಯ ಕ್ಷೇತ್ರದ ಬೆಂಬಲಿಗರ ಜತೆ ಸಂಸದೆ ಸುಮಲತಾ ಸಭೆ ವಿಚಾರವಾಗಿ ಮಾಜಿ ಶಾಸಕ ಪುಟ್ಟರಾಜು ಹೇಳಿಕೆ ನೀಡಿದ್ದು, ಸಭೆ ಮಾಡಲಿ ಪಾಪ, ಅದು ಅವರ ಅಭಿಪ್ರಾಯ. ಸಭೆ ಮಾಡುವುದನ್ನು ತಪ್ಪು ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಅಂತಿಮವಾಗಿ ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ತಲೆಬಾಗುತ್ತೇವೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಮೊದಲೇ ಆತಂಕದಲ್ಲಿರುವ ಕಾಂಗ್ರೆಸ್​​ಗೆ ಮತ್ತೊಂದು ಆಘಾತ!

ನಾನು ಮಂಡ್ಯ ಟಿಕೆಟ್ ಆಕಾಂಕ್ಷಿ ಅಲ್ಲ, ಪಕ್ಷದ ತೀರ್ಮಾನಕ್ಕೆ ಬದ್ಧ. ನಾವು ಮಂಡ್ಯಕ್ಕೆ ನಿಖಿಲ್​ ಕರೆತರುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಇಂದಿನ ಸಭೆಯಲ್ಲಿ ನಿಖಿಲ್​ ಮನವೊಲಿಸಲು ಪ್ರಯತ್ನ ಮಾಡುತ್ತೇವೆ. ಮತಗಳ ಆಧಾರದ ಮೇಲೆ ಮಂಡ್ಯ ಮತ್ತು ಹಾಸನ ಜೆಡಿಎಸ್ ಸಿಗಲಿದೆ ಎಂದು ತಿಳಿಸಿದರು.

ಮುಂದಿನ ಲೋಕಸಭೆ ಚುನಾವಣೆ ಸಂಬಂಧ ಸಭೆ ಮಾಡುತ್ತಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಚುನಾವಣೆ ಬಗ್ಗೆ ಸಭೆ ಇದಾಗಿದೆ. ನೂರಕ್ಕೆ ಸಾವಿರ ಭಾಗ ಹಾಸನ ಮತ್ತು ಮಂಡ್ಯ ಮೊದಲ ಹಂತದಲ್ಲೇ ಇತ್ಯರ್ಥವಾಗಲಿದೆ. ನಮ್ಮಲ್ಲಿಯೂ ಪ್ರಭಲ ಆಕಾಂಕ್ಷಿಗಳಿದ್ದಾರೆ ಹಾಗಾಗಿ ಸಭೆ ಕರೆದಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.