ಅಕಾಲಿಕ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಹೂ ಕಟ್ಟಿ ಪೀಚಾಗಬೇಕಾದ ಮಾವಿನ ಮರಗಳು ಖಾಲಿ ಖಾಲಿ

ಕೆಲ ತಿಂಗಳುಗಳ ಕೆಳಗೆ ಸುರಿದ ಅಕಾಲಿಕ ಮಳೆ ಹಾಗೂ ಹವಮಾನದ ವೈಪರಿತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾವು ಸಮೃದ್ದಿಯಾಗಿ ಹೂ ಕಟ್ಟಿಲ್ಲ. ಅಷ್ಟೇ ಅಲ್ಲದೇ ಪೀಚು ಆಗದೇ, ಮರಗಳು ಹಾಗೆಯೇ ಇವೆ.

ಅಕಾಲಿಕ ಮಳೆ ಹಾಗೂ ಹವಾಮಾನ ವೈಪರಿತ್ಯದಿಂದ ಹೂ ಕಟ್ಟಿ ಪೀಚಾಗಬೇಕಾದ ಮಾವಿನ ಮರಗಳು ಖಾಲಿ ಖಾಲಿ
ಮಾವಿನ ಮರ
Follow us
TV9 Web
| Updated By: ganapathi bhat

Updated on: Jan 25, 2022 | 3:55 PM

ರಾಮನಗರ: ಜಿಲ್ಲೆಯ ಮಾವು ಬೆಳೆಗಾರರೆಲ್ಲ ಈ ಬಾರಿ ಒಳ್ಳೆಯ ಬೆಳೆ ಕೈ ಸೇರುತ್ತೆ ಅನ್ನುವ ನೀರಿಕ್ಷೆಯಲ್ಲಿ ಇದ್ದರು. ಆದರೆ ಆ ರೈತರ ನಿರೀಕ್ಷೆಯೆಲ್ಲ ಹುಸಿಯಾಗಿದ್ದು, ಕೆಲ ತಿಂಗಳುಗಳ ಕೆಳಗೆ ಸುರಿದ ಅಕಾಲಿಕ ಮಳೆ ಹಾಗೂ ಹವಾಮಾನ ವೈಪರಿತ್ಯರಿಂದಾಗಿ ಈ ಬಾರಿ ಮಾವು ಕೈಕೊಟ್ಟಿದೆ. ಸಮೃದ್ದಿಯಾಗಿ ಮರದ ತುಂಬೆಲ್ಲ ಹೂ ಕಟ್ಟಿ, ಪೀಚಾಗಬೇಕಾದ ಮರಗಳು ಇದೀಗ ಖಾಲಿ ಖಾಲಿಯಾಗಿವೆ. ಇದು ಮಾವು ಬೆಳೆಗಾರರನ್ನ ಆತಂಕಕ್ಕೆ ಸಿಲುಕಿಸುವಂತೆ ಮಾಡಿದೆ.

ಕೆಲ ತಿಂಗಳುಗಳ ಕೆಳಗೆ ಸುರಿದ ಅಕಾಲಿಕ ಮಳೆ ಹಾಗೂ ಹವಾಮಾನದ ವೈಪರಿತ್ಯದ ಹಿನ್ನೆಲೆಯಲ್ಲಿ ಈ ಬಾರಿ ಮಾವು ಸಮೃದ್ದಿಯಾಗಿ ಹೂ ಕಟ್ಟಿಲ್ಲ. ಅಷ್ಟೇ ಅಲ್ಲದೇ ಪೀಚು ಆಗದೇ, ಮರಗಳು ಹಾಗೆಯೇ ಇವೆ. ಹೀಗಾಗಿ ರಾಮನಗರ ಜಿಲ್ಲೆಯ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಅಂದಹಾಗೆ ಮಾವು ಬೆಳೆ ಬಗ್ಗೆ ರಾಮನಗರ ಜಿಲ್ಲೆಯ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಸಮಯಕ್ಕೆ ಆಗಲೇ, ಅದರಲ್ಲೂ ಸಂಕ್ರಾಂತಿ ಸಮಯಕ್ಕೆ ಜಿಲ್ಲೆಯ ಬಹುತೇಕ ಕಡೆ ಮಾವಿನ ಮರಗಳಲ್ಲಿ ಹೂ ಕಟ್ಟಿ, ಕೆಲವು ಕಡೆ ಮಾವಿನ ಪೀಚು ಸಹ ಆಗಬೇಕಿತ್ತು. ಆದ್ರೆ ಇದುವರೆಗೂ ಬಹುತೇಕ ಮಾವಿನ ತೋಟಗಳಲ್ಲಿ ಮಾವು ಹೂ ಕಟ್ಟಿಲ್ಲ. ಕೆಲವು ಮರಗಳಲ್ಲಿ ಮಾವಿನ ಪೀಚು ಸಹಾ ಆಗಿಲ್ಲ. ಅಲ್ಲದೆ ಸರಿಯಾಗಿ ಚಳಿ ಸಹಾ ಈ ಬಾರಿ ಬೀಳದೇ ಇರುವುದರಿಂದ ಹೂವು ಕಟ್ಟಿಲ್ಲ. ಹೀಗಾಗಿ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ರಾಮನಗರ ಜಿಲ್ಲೆ, ಮಾವು ಬೆಳೆಯುವಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿ ಇದೆ. ಜಿಲ್ಲೆಯಲ್ಲಿ ರೇಷ್ಮೆಬೆಳೆ ನಂತರ ಅತೀ ಹೆಚ್ಚು ಮಾವು ಬೆಳೆಯನ್ನ ಜಿಲ್ಲೆಯ ರೈತರು ಬೆಳೆಯುತ್ತಾರೆ. ಸುಮಾರು 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ರಾಜ್ಯದ ಮಾರುಕಟ್ಟೆಗೆ ಮೊದಲು ರಾಮನಗರ ಜಿಲ್ಲೆಯ ಮಾವು ಲಗ್ಗೆ ಇಡುವುದು. ಅಲ್ಲದೇ ಬೇರೆ ಬೇರೆ ರಾಷ್ಟ್ರಗಳಿಗೂ ಕೂಡ ಇಲ್ಲಿನ ಮಾವು ರಫ್ತು ಆಗುತ್ತದೆ. ಆದ್ರೆ ಈ ಬಾರಿ ಸರಿಯಾದ ಸಮಯಕ್ಕೆ ಹೂವು ಕಟ್ಟಿಲ್ಲ.

Mango Tree Ramanagara

ಮರದಲ್ಲಿ ಮಾವು ಪೀಚು ಆಗದ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗಿಂತ ಮಾವು ಮಾರುಕಟ್ಟೆಗೆ ಲಗ್ಗೆ ಇಡುವುದು ಈ ಬಾರಿ ಅನುಮಾನವಾಗಿದೆ. ಅಲ್ಲದೆ ತೋಟಗಾರಿಕೆ ನಿರೀಕ್ಷೆಯಂತೆ ಈ ಬಾರಿ ಮಾವು ಬರುವುದು ಅನುಮಾನವಾಗಿದೆ. ಒಟ್ಟಾರೆ ಅಕಾಲಿಕ ಮಳೆ, ಹವಾಮಾನದ ವೈಪರಿತ್ಯದಿಂದ ಈ ಬಾರಿ ರಾಮನಗರ ಜಿಲ್ಲೆಯಲ್ಲಿ ಮಾವು ಸಮೃದ್ದಿಯಾಗಿ ಬಂದಿಲ್ಲ. ಇದು ಮಾವು ಬೆಳೆಗಾರರನ್ನ ಬೀದಿಗೆ ಬೀಳುವಂತೆ ಮಾಡಿದೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ಇದನ್ನೂ ಓದಿ: ರಾಮನಗರದಲ್ಲಿ ಪಾದಯಾತ್ರೆಯ ಜನಜಂಗುಳಿ ನಿಯಂತ್ರಿಸುವುದು ತಪ್ಪಿದರೂ ಟ್ರಾಫಿಕ್ ನಿಯಂತ್ರಣಕ್ಕೆ ತರುವುದು ಮಾತ್ರ ಪೊಲೀಸರಿಗೆ ತಪ್ಪಲಿಲ್ಲ

ಇದನ್ನೂ ಓದಿ: ರಾಮನಗರ: ಒಕ್ಕಣೆ ಮಾಡಲೆಂದು ಹಾಕಲಾಗಿದ್ದ ರಾಗಿ ಮೆದೆಗೆ ಕಿಡಿಗೇಡಿಗಳಿಂದ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ