ರಾಮನಗರ: ಶಾಸಕ ಮಾಡಾಳ್ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ವಿಪಕ್ಷನಾಯಕ ಸಿದ್ದಾರಾಮಯ್ಯ (Siddaramaiah) ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಚಾರದ 70 ಪ್ರಕರಣ ಮುಚ್ಚಿ ಹಾಕಿದ್ದಾರೆ. ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ಅಣ್ಣ ತಮ್ಮಂದಿರು. ರಾಜ್ಯದಲ್ಲಿ JDS ಸರ್ಕಾರ ಇದ್ದಿದ್ದರೆ ಎಲ್ಲವನ್ನೂ ಮುಚ್ಚಿ ಹಾಕುತ್ತಿದ್ದರು. ಕಿಚಡಿ ಸರ್ಕಾರ ಬೇಡ, ಸ್ಥಿರ ಸರ್ಕಾರ ಬೇಕಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ವಾಗ್ದಾಳಿ ಮಾಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲೋಕಯುಕ್ತ ರದ್ದು ಮಾಡಿ ಎಸಿಬಿ ತಂದರು. ನಾವು ಪಾರದರ್ಶಕವಾಗಿ ಇದ್ದೇವೆ. ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ನಮ್ಮ ಬಗ್ಗೆ ಮಾತನಾಡಲು ಜೆಡಿಎಸ್, ಕಾಂಗ್ರೆಸ್ನವರಿಗೆ ನೈತಿಕತೆ ಇಲ್ಲ. ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಹೋಟೆಲ್ನಲ್ಲಿ ಆಡಳಿತ ಮಾಡಿದ್ದಾರೆ. ಕುಮಾರಸ್ವಾಮಿಯಿಂದ ನಾವು ಪಾಠ ಕಲಿಯಬೇಕಿಲ್ಲ. ಕುಮಾರಸ್ವಾಮಿ ಅವರಿಗೆ ಅವರಿಗೆ ಚಾಲೆಂಜ್ ಮಾಡುತ್ತೇನೆ. ಎಲ್ಲವನ್ನು ಮುಚ್ಚಿ ಹಾಕಿದ್ದೀರಿ ಎಂದು ಆರೋಪ ಮಾಡಿದರು.
ವಿಜಯ ಸಂಕಲ್ಪ ರಥಯಾತ್ರೆಗೆ ಅಮಿತ್ ಶಾ ಅವರು ದೇವನಹಳ್ಳಿಯಲ್ಲಿ ಉದ್ಘಾಟನೆ ಮಾಡಿದ್ದಾರೆ. ಮತ್ತೊಮ್ಮೆ ಅಧಿಕಾರಕ್ಕೆ ತರಲು ಈ ರಥಯಾತ್ರೆ ಪ್ರಮುಖವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ನ ರಥಯಾತ್ರೆಗಳು ಅಂತ್ಯವಾಗಿದೆ. ನಾಲ್ಕು ತಂಡಗಳು ಇದೆ. ಒಟ್ಟು 15 ದಿನ 224 ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಎ ಟೀಂ ಬಿ ಟೀಂ ಅಂತ್ಯ ಹಾಡಬೇಕಿದೆ ಎಂದರು.
ಕೇಂದ್ರದಿಂದ ಕರ್ನಾಟಕಕ್ಕೆ ಅತೀ ಹೆಚ್ಚು ಹಣ ಬಂದಿದೆ. ಕೇಂದ್ರದ ಬಜೆಟ್ನಲ್ಲಿ ಹೆಚ್ಚು ಹಣ ಘೋಷಣೆ ಆಗಿದೆ ರಾಜ್ಯಕ್ಕೆ. ದೇಶದ ಈಶಾನ್ಯ ಭಾಗದಲ್ಲಿ ಬಿಜೆಪಿ ಬಾವುಟ ಹಾರುತ್ತಿದೆ. ಯಾವ ಕ್ಷೇತ್ರಗಳಲ್ಲಿ ಹಿಂದೆ ಹಿಂದೆವು ಅಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚಿನ 20 ಸೀಟ್ ಗೆಲ್ಲಬೇಕು ಎಂಬ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಸುಮಲತಾ ಪಕ್ಷ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು ಬಹಳ ಸಲ ಮಾತನಾಡಿದ್ದೇವೆ ಹೈಕಮಾಂಡ್ ಯಾವಾಗ ಹೇಳುತ್ತಾರೆ ಅವಾಗ ಮಾತನಾಡುತ್ತೇವೆ. 4-5 ಬಾರಿ ಸುಮಲತಾ ಜೊತೆ ಮಾತನಾಡಿದ್ದೇನೆ. ಅವರ ಭಾವನೆಗಳ ಹಂಚುಕೊಂಡಿದ್ದಾರೆ ಎಂದು ಹೇಳಿದರು.
ನಾಳೆ ಕನಕಪುರದಲ್ಲಿ ನಾವೇ ರಥಯಾತ್ರೆ ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನ ಕಟ್ಟಿಹಾಕುತ್ತೇವೆ. ಒಳ್ಳೆಯ ಅಭ್ಯರ್ಥಿಯನ್ನು ಹಾಕುತ್ತೇವೆ. ಕನಕಪುರದದಲ್ಲಿ ಚರ್ಚ್ ವಿಚಾರವಾಗಿ ದೊಡ್ಡ ಹೋರಾಟ ಮಾಡಿದ್ದೇವೆ. ಚರ್ಚ್ ಕಟ್ಟಲು ಬಿಟ್ಟಿಲ್ಲ ಎಂದು ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ