ರಾಮನಗರ: ಚುನಾವಣಾಧಿಕಾರಿ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿದ ದುಷ್ಕರ್ಮಿಗಳು
ದುಷ್ಕರ್ಮಿಗಳು ಚುನಾವಣಾಧಿಕಾರಿ ಕಾರನ್ನು ಅಡ್ಡಿಗಟ್ಟಿ ಬ್ಯಾಲೆಟ್ ಪೇಪರ್ ಹಾಗೂ ಲ್ಯಾಪ್‌ಟಾಪ್ ದೋಚಿಕೊಂಡು ಪರಾರಿಯಾಗಿದ್ದಾರೆ. ರಾಮನಗರ ಜಿಲ್ಲೆಯ ಗ್ರಾಮವೊಂದಕ್ಕೆ ಹಾಲು ಉತ್ಪಾದಕ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಮನಗರ, (ಸೆಪ್ಟೆಂಬರ್ 27): ಚುನಾವಣಾಧಿಕಾರಿ (Election Officer) ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿ ಪರಾರಿಯಾಗಿರುವ ಘಟನೆ ರಾಮನಗರ(Ramanagara) ಜಿಲ್ಲೆಯ ಮಾಗಡಿ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ. ಹುಳ್ಳೇನಹಳ್ಳಿ ಹಾಲು ಉತ್ಪಾದಕ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಉಮೇಶ್ ಅವರು ಇಂದು (ಸೆ.27) ಗ್ರಾಮಕ್ಕೆ ತೆರಳುವಾಗ ರಸ್ತೆ ಮಧ್ಯೆ ನಾಲ್ಕು ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ. ಚುನಾವಣಾಧಿಕಾರಿ ಉಮೇಶ್ ಹಾಗೂ ಉಷಾಗೆ ಮಾರಕಾಸ್ತ್ರ ತೋರಿಸಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದರೋಡೆ ಮಾಡಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀನಲೆ ಮಾಡಿದರು. ಇನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಲರಾಮ್ ಹಾಗೂ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ದೆಹಲಿಯ ಉಮ್ರಾವ್ ಜ್ಯುವೆಲ್ಲರಿಯಲ್ಲಿ 20-25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು
ರಾಮನಗರ ಎಸ್ಪಿ ಪ್ತತಿಕ್ರಿಯೆ
ಚುನಾವಣಾ ಅಧಿಕಾರಿ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹುಲ್ಲೇನಹಳ್ಳಿ ಕೋ ಆಪರೇಟ್ ಸೊಸೈಟಿ ಎಲೆಕ್ಷನ್ ಇತ್ತು. ಅಧಿಕಾರಿಗಳು ಚುನಾವಣೆ ನಡೆಸಲು ಬರುತ್ತಿದ್ದರು. ಈ ವೇಳೆ ಅಧಿಕಾರಿಗಳ ಮೇಲೆ ನಾಲ್ಕು ಜನ ಅಪರಿಚಿತರು ಹಲ್ಲೆ ಮಾಡಿದ್ದಾರೆ. 250 ಬ್ಯಾಲೆಟ್ ಪೇಪರ್, 2 ಲ್ಯಾಪಟ್ಯಾಪ್ ದರೋಡೆ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾದ 4ರ ಜನ ಪತ್ತೆ ಹಚ್ಚಲಾಗಿದ್ದು, ಸರಕಾರಿ ಕೆಲಸಕ್ಕೆ ಅಡಚಣೆ, ಕೊಲೆ ಯತ್ನ, ಕೇಸ್ ಹಾಕಿದ್ದೇವೆ ಎಂದು ಮಾಹಿತಿ ನೀಡಿದರು.
ಮಗಳ ಮದ್ವೆಗೆಂದು ಮಾಡಿಸಿಟ್ಟಿದ್ದ ಚಿನ್ನ, ನಗದು ಕಳ್ಳತನ
ಬೆಂಗಳೂರಿನ(Bengaluru) ತಿಲಕ್ ನಗರದ ಎಸ್ಆರ್ಕೆ ಗಾರ್ಡನ್ನಲ್ಲಿ ಮನೆ ಲಾಕ್ ಮುರಿದು 3.5 ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ. ಹೌದು, ಮನೆಯವರೆಲ್ಲ ರಾಮನಗರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಖತರ್ನಾಕ್ ಕಳ್ಳ ಮನೆಯಲ್ಲಿಯೇ ಯಾರು ಇಲ್ಲದಿರುವುದು ಗಮನಿಸಿಯೇ ಈ ಕೃತ್ಯ ಎಸಗಿದ್ದಾನೆ.
ಮಗಳ ಮದುವೆ ಕೂಡ ಫಿಕ್ಸ್ ಅಗಿತ್ತು. ಹಾಗಾಗಿ ಆಭರಣ ಎಲ್ಲವನ್ನು ಮಾಡಿಸಿ, ಮನೆಯಲ್ಲಿಟ್ಟಿದ್ದರು. ಇನ್ನು ವಿಷಯ ತಿಳಿಯುತ್ತಿದ್ದಂತೆ ತಿಲಕ್ ನಗರ ಪೊಲೀಸರು ಮನೆಗೆ ಭೇಟಿ ನೀಡಿ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದ್ದಾರೆ. ಮನೆಯವರು ಯಾರು ಇಲ್ಲದಿರವುದನ್ನ ಗಮನಿಸಿಯೇ ಕಳ್ಳ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನು ಸಿಸಿಟಿವಿ ಪರಿಶೀಲನೆ ನಡೆಸಿರುವ ತಿಲಕ್ ನಗರ ಪೊಲೀಸರಿಗೆ, ಮನೆಗೆ ಓರ್ವ ಬಂದಿರುವುದು ಗೊತ್ತಾಗಿದೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ.
ರಾಮನಗರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:00 pm, Wed, 27 September 23