ಕನಕಪುರದ ಕಬ್ಬಾಳು ಬೆಟ್ಟದಲ್ಲಿ ಪ್ರೇಮಿಗಳಿಂದ ಆತ್ಮಹತ್ಯೆ
ಸತೀಶ್ ಮತ್ತು ಚಂದನಾ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ರಾಮನಗರ: ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ಸೊಂಟಕ್ಕೆ ವೇಲ್ ಕಟ್ಟಿಕೊಂಡು ಬೆಟ್ಟದಿಂದ ಜಿಗಿದು ಸತೀಶ್ (21) ಮತ್ತು ಚಂದನಾ (21) ಎಂಬ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಪ್ರೇಮಿಗಳಾಗಿದ್ದರು ಎಂದು ತಿಳಿದುಬಂದಿದೆ. ಇಬ್ಬರೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉರುಗಮ್ ನಿವಾಸಿಗಳು. ಸತೀಶ್ ತಮಿಳುನಾಡಿನ ಹೊಸೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿದ್ದ. ಸತೀಶ್ ಮತ್ತು ಚಂದನಾ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
1 ವರ್ಷದ ಹಿಂದೆ ಚಂದನಾ ಅವರನ್ನು ಕನಕಪುರದ ಸಮೀಪ ಮದುವೆ ಮಾಡಿಕೊಡಲಾಗಿತ್ತು. ಆದರೆ ಸೆಪ್ಟೆಂಬರ್ 22ರಂದು ಪತಿಯ ಮನೆಯಿಂದ ಚಂದನಾ ನಾಪತ್ತೆಯಾಗಿದ್ದರು. ಈಕುರಿತು ಕನಕಪುರ ಟೌನ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಯುಟರ್ನ್ ತೆಗೆದುಕೊಳ್ಳುವಾಗ ಬೈಕ್ಗೆ ಬಿಎಂಟಿಸಿ ಬಸ್ ಡಿಕ್ಕಿ; ಯುವಕ ಯುವತಿ ಸಾವು ಆನೇಕಲ್: ಬೈಕ್ಗೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ಯುವಕ, ಯುವತಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆದಿದೆ. ದಾವಣಗೆರೆ ಮೂಲದ ಪ್ರಭಾಕರ್(25), ಸಹನಾ(24) ಸಾವನ್ನಪ್ಪಿದ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಯುಟರ್ನ್ ತೆಗೆದುಕೊಳ್ಳುವಾಗ ಬಸ್ ಡಿಕ್ಕಿಯಾಗಿ ದುರ್ಘಟನೆ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಘಟಿಸಿದೆ.
ಧಾರವಾಡದಲ್ಲೂ ಅಪಘಾತ ಕಾರು ಮತ್ತು ಓಮಿನಿ ಮಧ್ಯೆ ರಸ್ತೆ ಅಪಘಾತವಾಗಿ ಗಾಯಾಳು ರಸ್ತೆ ಮಧ್ಯೆ ನೋವಿನಿಂದ ನರಳಾಡಿದ ದುರ್ಘಟನೆ ಧಾರವಾಡ-ಸವದತ್ತಿ ರಸ್ತೆಯಲ್ಲಿ ಘಟಿಸಿದೆ. ಧಾರವಾಡ ತಾಲೂಕಿನ ಅಮ್ಮಿನಬಾವಿ ಬಳಿ ಈ ದುರ್ಘಟನೆ ಸಂಭವಿಸಿದ್ದು ಕಾರು ಧಾರವಾಡದಿಂದ ಸವದತ್ತಿಗೆ ಪ್ರಯಾಣ ಬೆಳೆಸಿತ್ತು ಎಂದು ತಿಳಿದುಬಂದಿದೆ. ಕಾರು ಮತ್ತು ಓಮಿನಿ ನಡುವೆ ಓವರ್ ಟೇಕ್ ಮಾಡುವ ವೇಳೆ ಘಟನೆ ಸಂಭವಿಸಿದೆ. ಗಾಯಾಳುವನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:
ಅಮೆರಿಕದ ಗುಪ್ತಚರ ಇಲಾಖೆ ಅಧಿಕಾರಿಯಲ್ಲಿ ಕಾಣಿಸಿಕೊಂಡಿರುವ ಹವಾನಾ ಸಿಂಡ್ರೋಮ್ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ
(Ramanagar lovers suicide by Kanakapura Kabbalu hill)
Published On - 3:07 pm, Sun, 26 September 21