AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೈವೇಯಲ್ಲಿ ಹೊತ್ತಿ ಉರಿದ ಹೂ ಗಿಡಗಳು

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೈವೇಯ ಮಾಯಗಾನಹಳ್ಳಿ ಸಮೀಪ ಸುಂದರವಾಗಿ ಕಾಣಿಸಲು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್​​ನಲ್ಲಿ ನೆಡಲಾಗಿದ್ದ ಹೂ, ಗಿಡಗಳಿಗೆ ಬೆಂಕಿ ತಗುಲಿಕೊಂಡಿದ್ದು, ನೂರಾರು ಹೂ ಗಿಡಗಳು ಸುಟ್ಟು ಕರಕಲಾಗಿವೆ. ನೀರಿನ ವಾಹನ ಬರಲು ತಡವಾದ ಹಿನ್ನೆಲೆ ಸಾರ್ವಜನಿಕರ ವಾಹನ ತಡೆದು ಪೊಲೀಸರು ನೀರು ಹಾಕುತ್ತಿದ್ದಾರೆ.

Ramanagara: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೈವೇಯಲ್ಲಿ ಹೊತ್ತಿ ಉರಿದ ಹೂ ಗಿಡಗಳು
ಬೆಂಕಿ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 02, 2024 | 3:34 PM

ರಾಮನಗರ, ಫೆಬ್ರುವರಿ 2: ಬೆಂಕಿ (FIRE) ಕಿಡಿಯಿಂದಾಗಿ ಹೂ, ಗಿಡಗಳು ಹೊತ್ತಿ ಉರಿದಿರುವಂತಹ ಘಟನೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೈವೇಯ ಮಾಯಗಾನಹಳ್ಳಿ ಸಮೀಪ ನಡೆದಿದೆ. ಸಿಗರೇಟ್ ಸೇದಿ ಬಿಸಾಕಿದ ಪರಿಣಾಮ ಕಿಡಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸುಂದರವಾಗಿ ಕಾಣಿಸಲು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್​​ನಲ್ಲಿ ನೆಡಲಾಗಿದ್ದ ಹೂ, ಗಿಡಗಳಿಗೆ ಬೆಂಕಿ ತಗುಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಗೆ ಆವರಿಸಿಕೊಂಡಿದ್ದು, ಸಾರ್ವಜನಿಕರ ವಾಹನ ತಡೆದು ಪೊಲೀಸರು ನೀರು ಹಾಕುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸುಂದರವಾಗಿ ಕಾಣಿಸಲು ಕೋಟ್ಯಾಂತರ ರೂ. ವೆಚ್ಚದಲ್ಲಿ ಗಿಡಗಳನ್ನು ಬೆಳೆಸುವುದಕ್ಕೆ ಖರ್ಚು ಮಾಡಲಾಗಿದೆ.

ನೀರಿನ ವಾಹನ ಬರಲು ತಡವಾದ ಹಿನ್ನೆಲೆ ಸಾರ್ವಜನಿಕರ ವಾಹನ ತಡೆದು ಬಾಟಲ್​ ನೀರು ಹಾಕಲಾಗುತ್ತಿದೆ. ಇನ್ನಷ್ಟು ಬೆಂಕಿ ಹರಡದಂತೆ ಪೊಲೀಸರು ಬಾಟಲ್ ನೀರು ಹಾಕುತ್ತಿದ್ದಾರೆ. ಎಷ್ಟೇ ಬಾಟಲ್ ನೀರು ಹಾಕಿದರೂ ಬೆಂಕಿ ಮಾತ್ರ ಆರುತ್ತಿಲ್ಲ.

ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ 

ಮಂಡ್ಯ: ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ ಮೌಲ್ಯದ ಮೆದೆ ನಾಶವಾಗಿರುವ ಘಟನೆ ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ನೆಲಮಂಗಲ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಓರ್ವ ವ್ಯಕ್ತಿ ಸಜೀವ ದಹನ

ಗ್ರಾಮದ ರೈತರ ಮಧು ಎಂಬುವವರು ತಮ್ಮ ಜಮೀನನ ಬಳಿಯೆ ಮೆದೆ ಹಾಕಿದ್ದರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ಟ್ರಾನ್ಸಫಾರ್ಮರ್ ಸ್ಫೋಟ: ತಪ್ಪಿದ ಭಾರಿ ಅನಾಹುತ

ವಿಜಯಪುರ: ಜಿಲ್ಲೆಯ ತಿಕೋಟಾ ಪಟ್ಟಣದ ಜನವಸತಿ ಪ್ರದೇಶದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರ್ ಸ್ಫೋಟಗೊಂಡು ಹೊತ್ತಿ ಉತಿದ ಘಟನೆ ಇತ್ತೀಚೆಗೆ ಜರುಗಿದ್ದು, ಸುದೈವಶಾತ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಕಳೆದ ರಾತ್ರಿ ತಿಕೋಟಾ ಪಟ್ಟಣದ ಬನಶಂಕರಿ ನಗರದ ಮಹಾಂತೇಶ ಬಂದಿ ಎಂಬವರ ಮನೆಯ ಮುಂದಿನ ವಿದ್ಯುತ್ ಟ್ರಾನ್ಸಫಾರ್ಮರ್ ಏಕಾಏಕಿ ಸ್ಫೋಟಗೊಂಡಿದ್ದು, ಬೆಂಕಿಯಿಂದ ಹೊತ್ತಿ ಉರಿದಿತ್ತು.

ಇದನ್ನೂ ಓದಿ: ಪಬ್ ಬೆಂಕಿ ದುರಂತ, ಬೆಂಗಳೂರು; ಸುತ್ತಮುತ್ತ ಶಾಲಾ ಕಾಲೇಜುಗಳಿದ್ದರೂ ಪಬ್ ನಡೆಸಲು ಅನುಮತಿ ನೀಡಲಾಗಿದೆ: ಪ್ರತ್ಯಕ್ಷದರ್ಶಿ

ವಿದ್ಯುತ್ ಒತ್ತಡದಿಂದ ಟ್ರಾನ್ಸಫಾರ್ಮರ್ ಸ್ಫೋಟಗೊಂಡು ಬೆಂಕಿಯಿಂದ ಹೊತ್ತಿ ಉರಿದಿತ್ತು. ಸ್ಫೋಟದಿಂದ ತೀವ್ರತೆಯಿಂದಾಗಿ ಮಹಾಂತೇಶ ಅವರ ಮನೆಯ ಆವರಣದಲ್ಲಿ ಬೆಂಕಿ ಹರಡಿಕೊಂಡಿತ್ತು. ಸುದೈವಶಾತ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಸಂಭವನೀಯ ಅಪಾಯ ತಪ್ಪಿದೆ. ಸ್ಫೋಟದ ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದ್ದು, ಮನೆಗೆ ಹತ್ತಿರದಲ್ಲಿರುವ ಕಾರಣ ಟ್ರಾನ್ಸಫಾರ್ಮರ್ ಸ್ಥಳಾಂತರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ ಎಂದು ಮಹಾಂತೇಶ ಕುಟುಂಬದವರು ದೂರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:28 pm, Fri, 2 February 24

ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ರಾಕೇಶ್ ಪೂಜಾರಿ ಸಾವಿನ ಬಗ್ಗೆ ಸಾಕಷ್ಟು ವದಂತಿ; ರೂಮ್​ಮೇಟ್ ಹೇಳಿದ್ದೇನು?
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಸ್ಪರ್ಧೆ: ಡಿಕೆ ಸುರೇಶ್
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್