AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ವಿರುದ್ಧ ಆಯೋಗಕ್ಕೆ ದೂರು ನೀಡಿದ ಜೆಡಿಎಸ್​ ವಿರುದ್ಧ ಗುಡುಗಿದ ಶಾಸಕ ಬಾಲಕೃಷ್ಣ

ರಾಮನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಶಾಸಕ ಹೆಚ್.ಸಿ.ಬಾಲಕೃಷ್ಣ, ಶಾಸಕ, ನಿಗಮ ಮಂಡಳಿ ಅಧ್ಯಕ್ಷನಾಗಿದ್ದಕ್ಕೆ ತಡೆದುಕೊಳ್ಳಲು ಆಗುತ್ತಿಲ್ಲ. ದೂರಿನ ಬಗ್ಗೆ ಕಾನೂನು ರೀತಿಯಲ್ಲಿ ತನಿಖೆಯಾಗಿ ಸತ್ಯ ಹೊರಬರಲಿ‌ ಎಂದು ಹೇಳಿದ್ದಾರೆ. ನಾವು ಅಧಿಕಾರದಲ್ಲಿದ್ದನ್ನು ತಡೆದುಕೊಳ್ಳಲು ಹೆಚ್​ಡಿ ಕುಮಾರಸ್ವಾಮಿ ಕುಟುಂಬಕ್ಕೆ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. 

ತಮ್ಮ ವಿರುದ್ಧ ಆಯೋಗಕ್ಕೆ ದೂರು ನೀಡಿದ ಜೆಡಿಎಸ್​ ವಿರುದ್ಧ ಗುಡುಗಿದ ಶಾಸಕ ಬಾಲಕೃಷ್ಣ
ಶಾಸಕ ಹೆಚ್​.ಸಿ.ಬಾಲಕೃಷ್ಣ
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 02, 2024 | 8:37 PM

Share

ರಾಮನಗರ, ಫೆಬ್ರುವರಿ 2: ಶಾಸಕ, ನಿಗಮ ಮಂಡಳಿ ಅಧ್ಯಕ್ಷನಾಗಿದ್ದಕ್ಕೆ ತಡೆದುಕೊಳ್ಳಲು ಆಗುತ್ತಿಲ್ಲ. ದೂರಿನ ಬಗ್ಗೆ ಕಾನೂನು ರೀತಿಯಲ್ಲಿ ತನಿಖೆಯಾಗಿ ಸತ್ಯ ಹೊರಬರಲಿ‌ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ (MLA Balakrishna) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಜನರಿಗೆ ಅಕ್ಷತೆ ಬೇಕಾ.. ಗ್ಯಾರಂಟಿ ಬೇಕಾ ಅಂತಾ ನಾನು ಕೇಳಿದ್ದು. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕುಟುಂಬಕ್ಕೆ ನಾವು ಅಧಿಕಾರದಲ್ಲಿದ್ದನ್ನು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಯಾರಿಗೆ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದೇವೆ? ಯಾರಾದರೂ ಓಡಿಸಿಕೊಂಡು ಹೋಗುತ್ತಿದ್ದೇವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಶಾಸಕ ಹೆಚ್​ಸಿ ಬಾಲಕೃಷ್ಣ ತಿರುಗೇಟು

ಸರ್ಕಾರ ಒತ್ತಡ ಹಾಕಿ ಹೇಳಿಕೆ ಬಗ್ಗೆ ಬಾಲಕೃಷ್ಣ ಯೂಟರ್ನ್ ಹೇಳಿಕೆ ಕೊಟ್ಟಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡುವುದರಲ್ಲಿ ಅರ್ಥ ಇಲ್ಲ. ಒಂದೊಂದು ದಿನ ಒಂದೊಂದು ಹೇಳಿಕೆ ನೀಡುತ್ತಾರೆ. ಹಿಂದೆ ಬಿಜೆಪಿಗೆ ವೋಟ್​ ಹಾಕಿದರೆ ದೇಶ ದಿವಾಳಿ ಆಗುತ್ತೆ ಎಂದಿದ್ದರು. ನಾಳೆ ದಿನ ಶ್ರೀಲಂಕಾ ರೀತಿಯಲ್ಲಿ ದೇಶ ದಿವಾಳಿಯಾಗುತ್ತೆ ಎಂದಿದ್ದರು. ಅವರ ಹೇಳಿಕೆಗಳಿಗೆ ಮಹತ್ವ ಕೊಡುವುದು ಬೇಡ ಎಂದು ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹೆಚ್​ಸಿ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು, ಏನಿದು ಪ್ರಕರಣ?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ರೆ ಗ್ಯಾರಂಟಿಗಳು ಇರುತ್ತೆ. ಇಲ್ಲದಿದ್ದರೆ ಇಲ್ಲ ಎನ್ನುವ ಅರ್ಥದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದರು. ಸದ್ಯ ಈ ವಿಚಾರವಾಗಿಯೇ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಸರ್ಮರ್ಥಿಸಿಕೊಂಡಿದ್ದ ಬಾಲಕೃಷ್ಣ

ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಿಗೆ ಮತ ನೀಡಬೇಕೇ ಹೊರತು ಬಿಜೆಪಿಯವರ ಅಕ್ಷತೆಗಲ್ಲ ಎಂಬುದಷ್ಟೇ ನಮ್ಮ ಉದ್ದೇಶ. ಮತ ಹಾಕಲೇಬೇಕು, ಗ್ಯಾರಂಟಿ ಯೋಜನೆ ರದ್ದುಮಾಡಿಯೇ ಬಿಡುತ್ತೇವೆ ಎಂದು ಹೇಳಿಲ್ಲ. ನಮ್ಮದು ಬ್ಲ್ಯಾಕ್​​ಮೇಲ್ ಸಂಸ್ಕೃತಿ ಅಲ್ಲ. ನಾವು ಕೆಲಸ ಮಾಡಿದ್ದೇವೆ, ನಮಗೆ ಮತ ನೀಡಿ ಎಂದು ಕೇಳುತ್ತಿದ್ದೇವಷ್ಟೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಕಾಂಗ್ರೆಸ್​ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ದೂರು ಬಳಿಕ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಗ್ಯಾರಂಟಿ ಮುಂದಿಟ್ಟುಕೊಂಡು ಬ್ಲ್ಯಾಕ್​ಮೇಲ್ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿತ್ತು.

ಇದನ್ನೂ ಓದಿ: 2023ರ ವಿಧಾನಸಭಾ ಚುನಾವಣೆ ವೇಳೆ‌ ಮತದಾರರಿಗೆ ಆಮಿಷ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ನಿಖಿಲ್ ಕುಮಾರಸ್ವಾಮಿ

ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದರು. ಗ್ಯಾರಂಟಿ ಸಂಬಂಧ ಕಾಂಗ್ರೆಸ್ಸಿಗರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಮತ ಹಾಕದಿದ್ದರೆ ಗ್ಯಾರಂಟಿ ನಿಲ್ಲಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಈಬಗ್ಗೆ ಕ್ರಮಕೈಗೊಳ್ಳಲು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ