Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಹಾರೋಬೆಲೆ ಗ್ರಾಮದಲ್ಲಿ ಕಚ್ಚಾ ಬಾಂಬ್ ಸ್ಫೋಟ, ವ್ಯಕ್ತಿಗೆ ಗಾಯ

ಸ್ಫೋಟದ ನಂತರ ಸಚಿನ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿನ್ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ 1959ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ: ಹಾರೋಬೆಲೆ ಗ್ರಾಮದಲ್ಲಿ ಕಚ್ಚಾ ಬಾಂಬ್ ಸ್ಫೋಟ, ವ್ಯಕ್ತಿಗೆ ಗಾಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Aug 04, 2023 | 7:30 PM

ರಾಮನಗರ: ರಾಮನಗರ (Ramanagara) ಜಿಲ್ಲೆಯ ಹೊರವಲಯದಲ್ಲಿ ಮನೆಯೊಂದರಲ್ಲಿ ಕಚ್ಚಾ ಬಾಂಬ್ (Crude Bomb) ಸ್ಫೋಟಗೊಂಡು 27 ವರ್ಷದ ವ್ಯಕ್ತಿಯೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ. ರಾಮನಗರ ಜಿಲ್ಲೆಯ ಹಾರೋಬೆಲೆ ಗ್ರಾಮದ ಸಚಿನ್ ಕುಮಾರ್ ಎಂಬಾತ ತನ್ನ ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸಿ ಸಂಗ್ರಹಿಸುತ್ತಿದ್ದರು. ಕಚ್ಚಾ ಬಾಂಬ್‌ಗಳನ್ನು ಕಾಡು ಹಂದಿಗಳನ್ನು ಬೇಟೆಯಾಡಲು ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ. ಆಗಸ್ಟ್ 3 ರಂದು ಬಾಂಬ್ ಸ್ಫೋಟಗೊಂಡಾಗ ಸಚಿನ್ ಅವರ ಮುಖ ಮತ್ತು ಕೈಗಳಿಗೆ ತೀವ್ರ ಗಾಯಗಳಾಗಿವೆ.

ಸ್ಫೋಟದ ನಂತರ ಸಚಿನ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿನ್ ವಿರುದ್ಧ ಸಾತನೂರು ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ 1959ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಚಿನ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೈಪುರ ಮುಂಬೈ ಎಕ್ಸ್‌ಪ್ರೆಸ್‌ ಗುಂಡಿನ ದಾಳಿ ಪ್ರಕರಣ; ಎಸ್​​​ಡಿಪಿಐ ಪ್ರತಿಭಟನೆ

ಈ ಮಧ್ಯೆ, ಜೈಪುರ ಮುಂಬೈ ಎಕ್ಸ್‌ಪ್ರೆಸ್​​​ನಲ್ಲಿ ನಡೆದಿರುವ ಗುಂಡಿನ ದಾಳಿ ವಿಚಾರವಾಗಿ ರಾಮನಗರದಲ್ಲಿ ಎಸ್​​​ಡಿಪಿಐ ಪ್ರತಿಭಟನೆ ನಡೆಸಿದೆ. ಹಿಂದೂ ಸಂಘಟೆನೆಗಳ ಕಾರಣವೇ ಕೊಲೆಯಾಗಿದೆ ಎಂದು ಆರೋಪಿಸಿದ ಎಸ್​​​ಡಿಪಿಐ ಕಾರ್ಯಕರ್ತರು ಹಿಂದೂ ಸಂಘಟನೆಗಳ ವಿರುದ್ಧ ಘೋಷಣೆ ಕೂಗಿದ್ದಾರೆ.

ಇದನ್ನೂ ಓದಿ: ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಕಾನ್​​ಸ್ಟೆಬಲ್; ಹತ್ಯೆ ಹಿಂದೆ ಕೋಮು ದ್ವೇಷವಿಲ್ಲ: ಸರ್ಕಾರಿ ಮೂಲಗಳು

ಘಟನೆ ಹಿಂದೆ ಯಾವುದೇ ಕೋಮು ದ್ವೇಷ ಇಲ್ಲ ಎಂದು ಸರ್ಕಾರಿ ಮೂಲಗಳು ಈಗಾಗಲೇ ಸ್ಪಷ್ಟಪಡಿಸಿವೆ. ಆದಾಗ್ಯೂ, ಘಟನೆ ಸಂಬಂಧ ಆರೋಪ, ಪ್ರತಿಭಟನೆಗಳು ಮುಂದುವರಿದಿವೆ. ಗುಂಡಿಕ್ಕಿ ಹತ್ಯೆ ಮಾಡಿದ ರೈಲ್ವೇ ರಕ್ಷಣಾ ಪಡೆ ಕಾನ್​​ಸ್ಟೆಬಲ್ ಅ​​​ನ್ನು ಮಾನಸಿಕ ಆರೋಗ್ಯ ತಪಾಸಣೆಗಾಗಿ ಕಳುಹಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಮಂಗಳವಾರ ತಿಳಿಸಿದ್ದವು.

ಕೃತ್ಯದ ಹಿಂದೆ ಕೋಮು ದ್ವೇಷವಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊಗಳು ಮತ್ತು ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ