AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಆಧಾರ್ ಮಾಡುತ್ತಾನೆಂದು ಸುಳ್ಳು ಆರೋಪ ಮಾಡಿ ಹಣ ಪೀಕಿದ ಪೊಲೀಸಪ್ಪ; ಪಿಎಸ್ಐ ವಿರುದ್ಧ IGP ಗೆ ದೂರು

ಬೆಂಗಳೂರಿನ ಕನಕಪುರದಲ್ಲಿ ಬೇಲಿಯೆ ಎದ್ದು ಹೊಲ ಮೇಯ್ದಂತ ಘಟನೆ ನಡೆದಿದೆ. ಅಂಗಡಿಯ ಮಾಲೀಕನೋರ್ವನ ಮೇಲೆ ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದನೆಂದು ಸುಳ್ಳು ಆರೋಪ ಹೊರಿಸಿದ ಚೆನ್ನಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ, ಬರೋಬ್ಬರಿ 1.6 ಲಕ್ಷ ರೂ. ದೋಚಿದ್ದಾರೆ. ಇದರಿಂದ ನೊಂದ ಮಾಲೀಕ ಪೊಲೀಸರ ಮೊರೆ ಹೋಗಿದ್ದು, ತನಿಖೆ ನಡೆಸಲಾಗುತ್ತಿದೆ.

ನಕಲಿ ಆಧಾರ್ ಮಾಡುತ್ತಾನೆಂದು ಸುಳ್ಳು ಆರೋಪ ಮಾಡಿ ಹಣ ಪೀಕಿದ ಪೊಲೀಸಪ್ಪ; ಪಿಎಸ್ಐ ವಿರುದ್ಧ IGP ಗೆ ದೂರು
ನಕಲಿ ಆಧಾರ್ ಕಾರ್ಡ್​ ಮಾಡುತ್ತಾನೆಂದು ಹಣ ಪೀಕಿದ ಪೊಲೀಸಪ್ಪ; ಪಿಎಸ್ಐ ವಿರುದ್ಧ IGP ಗೆ ದೂರು
ಪ್ರಶಾಂತ್​ ಬಿ.
| Updated By: ಭಾವನಾ ಹೆಗಡೆ|

Updated on:Dec 13, 2025 | 3:16 PM

Share

ರಾಮನಗರ, ಡಿಸೆಂಬರ್ 13: ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಅಂಗಡಿಯ ಮಾಲೀಕನ್ನು ಬೆದರಿಸಿ ನಕಲಿ ಆಧಾರ್‌ ಕಾರ್ಡ್ ತಯಾರಿಸುತ್ತಿದ್ದಂತೆ ಬಿಂಬಿಸಿ 1.6 ಲಕ್ಷರೂ. ದೋಚಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರ (Ramnagar PSI Extortion Case) ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಅಂಗಡಿ ಮಾಲೀಕನನ್ನು ಬೆದರಿಸಿದ ಪಿಎಸ್ಐ ಮತ್ತು ಪೊಲೀಸ್ ಪೇದೆಗಳ ಮೇಲೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಮಾಲೀಕನನ್ನು ಬೆದರಿಸಿ 1.6 ಲಕ್ಷ  ವಸೂಲಿ

ಜ್ಯೂಸ್ ಮತ್ತು ಜೆರಾಕ್ಸ್ ಅಂಗಡಿ ಮಾಲೀಕ ರಾಜೇಶ್​ರನ್ನು ಕನಕಪುರದಿಂದ ಚನ್ನಪಟ್ಟಣ ಪೊಲೀಸ್ ಠಾಣೆಗೆ ಕರೆಸಿಕೊಂಡ ಪಿಎಸ್ಐ ಹರೀಶ್, ಆತನನ್ನು ಬೆದರಿಸಿದ್ದಲ್ಲದೆ ನಕಲಿ ಆಧಾರ್‌ ಕಾರ್ಡ್ ತಯಾರಿಸುತ್ತಿದ್ದಂತೆ ಬಿಂಬಿಸಿ 1.6 ಲಕ್ಷರೂ.ಗಳನ್ನು ವಸೂಲಿ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 29ರಂದು ಈ ಘಟನೆ ನಡೆದಿದ್ದು, ಹರೀಶ್​ನೊಂದಿಗೆ ಪೊಲೀಸ್ ಪೇದೆಗಳಾದ ವರದರಾಜು, ಸುಭಾಶ್ ಹಾಗೂ ಮತ್ತಿಬ್ಬರು ಸಿಬ್ಬಂದಿಯೂ ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆಂದು ಆರೊಪಿಸಲಾಗಿದೆ.

ಪಿಎಸ್ಐ ವಿರುದ್ಧ ಐಜಿಪಿಗೆ ದೂರು

ಚನ್ನಪಟ್ಟಣದ ಎರಡು ಪೆಟ್ರೋಲ್ ಬಂಕ್‌ಗಳಲ್ಲಿ ಸ್ಕ್ಯಾನ್ ಮಾಡಿ 60,000 ರೂ. ಮತ್ತು ಒಂದು ಲಕ್ಷ ರೂ ನಗದು ವಸೂಲಿ ಮಾಡಿದ್ದ ಹರೀಶ್ ಮತ್ತು ಆತನ ಸಂಗಡಿಗರು, FIR ದಾಖಲಿಸದೇ ರಾಜೇಶ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಈ ಘಟನೆಯ ಹಿನ್ನೆಲೆ, ರಾಜೇಶ್ ಕೇಂದ್ರ ವಲಯ IGP ಗೆ ದೂರು ಸಲ್ಲಿಸಿದ್ದರು. ಸಧ್ಯ PSI ಹರೀಶ್ ಮತ್ತು ನಾಲ್ಕೂ ಸಿಬ್ಬಂದಿ ವರ್ಗಾವಣೆಗೊಂಡು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೆನ್ ಠಾಣೆಯ DYSP ಕೆಂಚೇಗೌಡ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:14 pm, Sat, 13 December 25