ಭಜರಂಗಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಸಚಿವ ಎಸ್​ಟಿ ಸೋಮಶೇಖರ್; ವಿಡಿಯೋ ನೋಡಿ

ST Somashekhar: ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಹಾಡಿಗೆ ನೃತ್ಯ ಮಾಡಿದ್ದಾರೆ. ನೃತ್ಯಗಾರರ ಮಧ್ಯೆ ಸ್ಟೆಪ್ ಹಾಕಿದ ಸಚಿವರನ್ನು ನೋಡಿ ಜನರು ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ.

ಭಜರಂಗಿ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಸಚಿವ ಎಸ್​ಟಿ ಸೋಮಶೇಖರ್; ವಿಡಿಯೋ ನೋಡಿ
ಎಸ್​ಟಿ ಸೋಮಶೇಖರ್ ಭರ್ಜರಿ ನೃತ್ಯ
Follow us
TV9 Web
| Updated By: ganapathi bhat

Updated on: Aug 14, 2021 | 6:44 PM

ರಾಮನಗರ: ರಾಜಕಾರಣಿಗಳು ಸಾಮಾನ್ಯವಾಗಿ ಅಚ್ಚುಕಟ್ಟಾಗಿ ಉಡುಗೆ ತೊಡುಗೆ ಧರಿಸಿಕೊಂಡು, ಭಾಷಣ ಮಾಡುತ್ತಾರೆ. ಗಂಭೀರವಾಗೇ ನಡೆದುಕೊಳ್ಳುತ್ತಾರೆ ಎಂಬ ಕಲ್ಪನೆ ಇದೆ. ಅದರ ಹೊರತಾಗಿ ರಾಜಕಾರಣಿಗಳು ಮನುಷ್ಯ ಸಹಜವಾಗಿಯೂ ತಮಾಷೆ ಮಾಡಿದಾಗ, ನಕ್ಕಾಗ, ಅತ್ತಾಗ ಅಥವಾ ಸಂಭ್ರಮಿಸಿದಾಗ ಅಂತಹ ಸನ್ನಿವೇಶಗಳು ಜನರ ಗಮನ ಸೆಳೆಯುತ್ತದೆ. ರಾಜಕಾರಣಿಗಳು ನೃತ್ಯ ಮಾಡಿದರಂತೂ ಕೇಳೋದು ಬೇಡ. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಡುತ್ತವೆ. ಇಂದೀಗ (ಆಗಸ್ಟ್ 14) ಅಂತಹದೊಂದು ಘಟನೆ ನಡೆದಿದೆ. ಕರ್ನಾಟಕದ ನೂತನ ಸಚಿವರಾಗಿ ಆಯ್ಕೆ ಆಗಿರುವ ಎಸ್​.ಟಿ. ಸೋಮಶೇಖರ್ ಸಖತ್ ನೃತ್ಯ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

ನೂತನ ಸಚಿವರಾಗಿ ಎಸ್​.ಟಿ ಸೋಮಶೇಖರ್ ಆಯ್ಕೆ ಆಗಿರುವ ಕಾರಣ ಅವರಿಗೆ ಅಭಿನಂದನಾ ಸಮಾರಂಭವನ್ನು ಇಂದು ಬೆಂಗಳೂರಿನ ಹೇರೊಹಳ್ಳಿ ವಾರ್ಡ್​ನಲ್ಲಿ ಆಯೋಜಿಸಲಾಗಿತ್ತು. ನೂತನ ಸಚಿವರಾದ ಹಿನ್ನೆಲೆ ಅಭಿನಂದನಾ ಕಾರ್ಯಕ್ರಮ‌ ಆಯೋಜನೆ ಮಾಡಲಾಗಿತ್ತು. ಈ ವೇಳೆ, ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಹಾಡಿಗೆ ನೃತ್ಯ ಮಾಡಿದ್ದಾರೆ. ನೃತ್ಯಗಾರರ ಮಧ್ಯೆ ಸ್ಟೆಪ್ ಹಾಕಿದ ಸಚಿವರನ್ನು ನೋಡಿ ಜನರು ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದಾರೆ.

ಚಿಕ್ಕಮಗಳೂರು: ಗದ್ದೆ ನಾಟಿಯಲ್ಲಿ ಭಾಗಿಯಾದ ಮೂಡಿಗೆರೆ ಶಾಸಕ ಇತ್ತ ಚಿಕ್ಕಮಗಳೂರು, ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ರೈತ ಮಹಿಳೆಯರ ಜೊತೆ ಸೇರಿ ನಾಟಿ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಟಿ ಕಾರ್ಯದಲ್ಲಿ ಅವರು ಭಾಗಿಯಾಗಿದ್ದಾರೆ. ಸೋಬಾನ ಪದ ಹಾಡಿ, ಟಿಲ್ಲರ್​ನಲ್ಲಿ ಗದ್ದೆ ಹೂಡಿದ ಶಾಸಕ ಕುಮಾರಸ್ವಾಮಿ, ಬೆಳಗ್ಗೆಯಿಂದಲೂ ಗದ್ದೆ ನಾಟಿ ಕೆಲಸದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: MP Kumaraswamy: ವಿಧಾನಸೌಧ ಎದುರು ಧರಣಿ ಕುಳಿತ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ! ಡಿಮ್ಯಾಂಡ್​​ ಏನು?

Dance Benefits: ಪ್ರತಿನಿತ್ಯ ನೃತ್ಯ ಮಾಡುವುದರಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?