Vande Bharat Express: ರಾಮನಗರದಲ್ಲಿ ಮತ್ತೆ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆತ! ಗಾಜು ಪುಡಿ ಪುಡಿ

ರಾಮನಗರ ಪಟ್ಟಣದ ಹೊರವಲಯದಲ್ಲಿ ವಂದೇ ಭಾರತ್ ಮೇಲೆ ಮತ್ತೆ ಕೀಡಿಗೇಡಿಗಳು ಕಲ್ಲೆಸೆದಿದ್ದಾರೆ. ಈ ಹಿಂದೆ ಕೂಡ ಇಂತಹುದೇ ಘಟನೆ ನಡೆದಿತ್ತು. ಮತ್ತೆ ಇದೀಗ ಇಂತಹ ಘಟನೆ ಬೆಳಕಿಗೆ ಬಂದಿದ್ದು, ಕಲ್ಲು ಹೊಡೆದ ಕಿಡಗೇಡಿಗಳ ಪತ್ತೆ ಕಾರ್ಯ ಶುರುವಾಗಿದೆ.

Vande Bharat Express: ರಾಮನಗರದಲ್ಲಿ ಮತ್ತೆ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆತ! ಗಾಜು ಪುಡಿ ಪುಡಿ
ವಂದೇ ಭಾರತ್​ ರೈಲು
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 28, 2023 | 12:36 PM

ರಾಮನಗರ, ಜು.28: ಪಟ್ಟಣದ ಹೊರವಲಯದಲ್ಲಿ ವಂದೇ ಭಾರತ್ ರೈಲಿನ(Vande Bharat Train) ಮೇಲೆ ಮತ್ತೆ ಕೀಡಿಗೇಡಿಗಳು ಕಲ್ಲೆಸೆದಿದ್ದಾರೆ. ಈ ಹಿಂದೆ ಕೂಡ ಇಂತಹುದೇ ಘಟನೆ ನಡೆದಿತ್ತು. ಮತ್ತೆ ಇದೀಗ ಇಂತಹ ಘಟನೆ ಬೆಳಕಿಗೆ ಬಂದಿದೆ. ಈ ರೈಲು ಮೈಸೂರಿನಿಂದ ಚೆನೈಗೆ ತೆರಳುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಿಟಕಿ ಗಾಜು ಪುಡಿಯಾಗಿ ಸೀಟಿನ ಮೇಲೆ ಬಿದ್ದಿದ್ದು, ಆತಂಕದಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವಂತಾಗಿದೆ. ಇದೀಗ ಕಲ್ಲು ಹೊಡೆದ ಕಿಡಗೇಡಿಗಳ ಪತ್ತೆ ಕಾರ್ಯ ಶುರುವಾಗಿದೆ.

ಧಾರವಾಡ-ಬೆಂಗಳೂರು ವಂದೇ ಭಾರತ್​ ಆರಂಭವಾದ ನಾಲ್ಕೇ ದಿನಕ್ಕೆ ಕಲ್ಲೆಸೆತ

ಕೇಂದ್ರದ ಮಹತ್ತರ ಸೇವೆಗಳಲ್ಲಿ ಒಂದಾಗ ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳ ಮೇಲೆ ಕಲ್ಲೆಸೆತ ನಡೆಯುತ್ತಲೇ ಇದೆ. ಹೌದು ಇದೆ ಮೊದಲಲ್ಲ ಧಾರವಾಡ ಬೆಂಗಳೂರು ವಂದೇ ಭಾರತ್​ ರೈಲು ಆರಂಭವಾದ ನಾಲ್ಕೇ ದಿನಕ್ಕೆ ದಾವಣಗೆರೆಯ ಹೊರವಲಯದಲ್ಲಿ ಕಲ್ಲೆಸೆತವಾಗಿತ್ತು. ಧಾರವಾಡದಿಂದ ಜುಲೈ 1 ರಂದು ಬೆಂಗಳೂರಿಗೆ ತೆರೆಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಅದೃಷ್ಟವಶಾತ್ ​ಯಾವುದೇ ಪ್ರಯಾಣಿಕರಿಗೆ ಹಾನಿಯಾಗಿಲ್ಲವಾಗಿತ್ತು.

ಇದನ್ನೂ ಓದಿ:ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆ, ಕ್ಷಮೆಯಾಚಿಸಿದ ಐಆರ್​ಸಿಟಿಸಿ

ರಾಜ್ಯದ ಮೊದಲ ಮೈಸೂರು-ಚನ್ನೈ  ವಂದೇ ಭಾರತ್​ ಎಕ್ಸಪ್ರೆಸ್​ ರೈಲಿಗೂ ಕಲ್ಲೆಸೆತ

ಕರ್ನಾಟಕದ ಮೊದಲ ಮೈಸೂರು-ಚನ್ನೈ  ವಂದೇ ಭಾರತ್​ ಎಕ್ಸಪ್ರೆಸ್​ ರೈಲಿಗೂ ಕೆ ಆರ್​ ಪುರಂ ಮತ್ತು ಬೆಂಗಳೂರು ಕಂಟೋನ್​​ಮೆಂಟ್​​ ರೇಲ್ವೆ ನಿಲ್ದಾಣದ ಮಧ್ಯೆ ಕೀಡಿಗೇಡಿಗಳು ಕಲ್ಲೆಸೆತ ಮಾಡಿದ ಘಟನೆ ನಡೆದಿತ್ತು. ಈ ವೇಳೆ ಕಿಟಕಿಯ ಗಾಜು ತಾಕಿ ಪ್ರಯಾಣಿಕರಿಗೆ ಗಾಯಗಳಾಗಿತ್ತು ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಈ ಘಟನೆ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ರಾಮನಗರದಲ್ಲಿ ಮತ್ತೆ ಇಂತಹ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Fri, 28 July 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್