ಹಾಸನ ದುರ್ಘಟನೆ ಮಾಸುವ ಮುನ್ನವೇ ರಾಮನಗರದಲ್ಲೂ ಮೂವರು ಬಾಲಕರು ಜಲಸಮಾಧಿ

ಹಾಸನ ಜಿಲ್ಲೆ ಆಲೂರು ಬಳಿ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ರಾಮನಗರ ಜಿಲ್ಲೆಯಲ್ಲೂ ಸಹ ಇಂಹದ್ದೇ ದುರ್ಘಟನೆ ನಡೆದಿದೆ. ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿದ್ದಾರೆ.

ಹಾಸನ ದುರ್ಘಟನೆ ಮಾಸುವ ಮುನ್ನವೇ ರಾಮನಗರದಲ್ಲೂ ಮೂವರು ಬಾಲಕರು ಜಲಸಮಾಧಿ
Edited By:

Updated on: May 17, 2024 | 4:09 PM

ರಾಮನಗರ, (ಮೇ 17): ಈಜಲು ತೆರಳಿದ್ದ ಮೂವರು ಬಾಲಕರು(children) ನೀರುಪಾಲಾಗಿರುವ ಘಟನೆ ರಾಮನಗರ(Ramanagar)  ತಾಲೂಕಿನ ಅಚ್ಚಲು ಗ್ರಾಮದ ಬಳಿ ನಡೆದಿದೆ. ಅಚ್ಚಲು ಗ್ರಾಮದ ಬಳಿ ಇರುವ ಬೆಟ್ಟದ ಮೇಲಿರುವ ತಗ್ಗು ಪ್ರದೇಶಕ್ಕೆ ಈಜಲು ತೆರಳಿದ್ದ ಮಕ್ಕಳು ಜಲಸಮಾಧಿಯಾಗಿದ್ದಾರೆ. ಶಾಬಾಜ್(14), ಸುಲ್ತಾನ್(13), ರಿಹಾನ್ ಖಾನ್(16) ಮೃತರು ದುರ್ವೈವಿಗಳು. ಇನ್ನು ವಿಷಯ ತಿಳಿದು ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ, ಮಕ್ಕಳ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.

ಮೃತರೆಲ್ಲರೂ ರಾಮನಗರ ಟೌನ್​ನ ಸುಲ್ತಾನ್ ನಗರದ ನಿವಾಸಿಗಳಾಗಿದ್ದು, ಇಂದು ಶುಕ್ರವಾರವಾಗಿದ್ದರಿಂದ ಮಸೀದಿಯಲ್ಲಿ ನಮಾಜ್ ಮುಗಿಸಿಕೊಂಡು ಬಳಿಕ 8 ಬಾಲಕರು ಈಜಾಡಲು ಹೋಗಿದ್ದಾರೆ. ಈ ಪೈಕಿ ಮೂವರು ಬಾಲಕರು ದುರಂತ ಅಂತ್ಯಕಂಡಿದ್ದಾರೆ. ಮೂವರಲ್ಲಿ ಶಾಬಾಜ್ ಹಾಗೂ ರಿಯಾನ್ ಖಾನ್ ಸಹೋದರರು.

ಇದನ್ನೂ ಓದಿ: ಸ್ಥಳೀಯರು ವಾಪಸ್ ಕಳುಹಿಸಿದ್ರೂ ಮತ್ತೆ ಬಂದು ದುರಂತ ಅಂತ್ಯ ಕಂಡ ನಾಲ್ಕು ಮಕ್ಕಳು

ನಿನ್ನೆ(ಮೇ 16) ಹಾಸನ ಜಿಲ್ಲೆಯ ಆಲೂರು(Alur) ತಾಲೂಕಿನ ಕದಾಳು ಸಮೀಪದ ಮುತ್ತಿಗೆ ಗ್ರಾಮದಲ್ಲಿ ಇಂದು(ಮೇ.16) ಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಈಜಲು ತೆರಳಿದ್ದ ನಾಲ್ವರು ಮಕ್ಕಳು(Four Childrens) ವಿಶ್ಚಾಸ್, ಪೃಥ್ಚಿ, ಜೀವನ್ ಹಾಗೂ ಬೇಲೂರು ತಾಲ್ಲೂಕು ಮೂಲದ ಸಾತ್ವಿಕ್ ನೀರುಪಾಲಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ