ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಕಾಟ: ಗೇರಹಳ್ಳಿಯಲ್ಲಿ ಆನೆ ದಾಳಿಗೆ ರೈತ ಬಲಿ

ಕಳೆದ ಹಲವು ದಿನಗಳಿಂದ ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ತಮಿಳುನಾಡು ಕಡೆಯಿಂದ ಬಂದು ಕನಕಪುರ ಸುತ್ತಮುತ್ತಲಿನ ಗ್ರಾಮಗಳ ಸಮೀಪ ಬೀಡು ಬಿಟ್ಟಿವೆ. ಸಂಜೆಯಾದ್ರೆ ಸಾಕು ಜನ ಹೊರಬರಲಾರದಂಥ ಭಯದ ವಾತಾವರಣ ಶುರುವಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ನಿಲ್ಲದ ಕಾಡಾನೆ ಕಾಟ: ಗೇರಹಳ್ಳಿಯಲ್ಲಿ ಆನೆ ದಾಳಿಗೆ ರೈತ ಬಲಿ
ಗೇರೆಹಳ್ಳಿಯ ಪುಟ್ನಂಜ‌ ಅವರ ಕುಟುಂಬದವರು ದುಃಖತಪ್ತರಾಗಿರುವುದು
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ Edited By:

Updated on: Jan 25, 2024 | 2:49 PM

ರಾಮನಗರ, ಜನವರಿ 25: ರಾಮನಗರ (Ramanagara) ಹೊರವಲಯ ಹಾಗೂ ಕನಕಪುರ ತಾಲೂಕು ಈಗ ರೈತರಿಗೆ ಡೇಂಜರ್ ಸ್ಪಾಟ್ ಆಗಿ ಪರಿಣಮಿಸಿದೆ. ಕೇವಲ ಮೂರು ತಿಂಗಳ ಅಂತರದಲ್ಲಿ ಎಂಟಕ್ಕೂ ಹೆಚ್ಚು ಬಾರಿ ರೈತರ ಮೇಲೆ ಕಾಡಾನೆ ದಾಳಿ (Wild Elephant) ಮಾಡಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂರು ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬ ಕಾರ್ಮಿಕ ಜೀವನ್ಮರಣ ಸ್ಥಿತಿಯಲ್ಲಿ ಬದುಕು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಈ ಮಧ್ಯೆ, ಬೆಳೆದ ರಾಗಿ ಬೆಳೆ ಕಣವನ್ನು ಉಳಿಸಿಕೊಳ್ಳಲು ರಾತ್ರಿ ಕಣದ ಬಳಿ ಮಲಗಿದ್ದ ಗೇರೆಹಳ್ಳಿಯ ಪುಟ್ನಂಜ‌ ಎಂಬವರು ಕಾಡಾನೆ ದಾಳಿಗೆ ತುತ್ತಾಗಿ ಗುರುವಾರ ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗೇರಹಳ್ಳಿಯ ರೈತ ಪುಟ್ನಂಜ (65) ಹೊಲದಲ್ಲಿ ರಾಗಿ ಬೆಳೆದಿದ್ದರು. ಬರಗಾಲ ನಡುವೆಯೂ ಅಷ್ಟೋ ಇಷ್ಟೋ ಆದರೂ ಬೆಳೆ ಬರಲಿ ಎಂದು ಕಷ್ಟಪಟ್ಟು ಒಂಚೂರು ಇಳುವರಿ ತೆಗೆದಿದ್ದರು. ರಾಗಿ ಕಣವನ್ನು ಗುಂಪು ಮಾಡಿ ಕಾವಲು ಕಾಯಲು ಹೊಲಕ್ಕೆ ತೆರಳಿದ್ದರು. ರಾತ್ರಿ ಚಳಿ ಇರುವ ಹಿನ್ನೆಲೆ ಪ್ಲಾಸ್ಟಿಕ್​ ಹೊದ್ದುಕೊಂಡು ಮಲಗಿದ್ದರು. ಬೆಳಗಿನ‌ ಜಾವ ಆಹಾರ ಹುಡುಕಿಕೊಂಡು ಬಂದ ಕಾಡಾನೆ ಕಣದ ಬಳಿ ಮಲಗಿದ್ದ ಪುಟ್ನಂಜನನ್ನು ಹೊಸಕಿ ಹಾಕಿದೆ.

ಕಳೆದ ಹಲವು ದಿನಗಳಿಂದ ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ತಮಿಳುನಾಡು ಕಡೆಯಿಂದ ಬಂದು ಕನಕಪುರ ಸುತ್ತಮುತ್ತಲಿನ ಗ್ರಾಮಗಳ ಸಮೀಪ ಬೀಡು ಬಿಟ್ಟಿವೆ. ಸಂಜೆಯಾದ್ರೆ ಸಾಕು ಜನ ಹೊರಬರಲಾರದಂಥ ಭಯದ ವಾತಾವರಣ ಶುರುವಾಗಿದೆ. ಕಳೆದ ಮೂರು ತಿಂಗಳಿನಲ್ಲಿ‌ ಮೂರು ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆನೆಗಳ ದಾಳಿ ನಿಗ್ರಹಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಮಾಡಿದರೂ ಕೂಡ, ಆನೆಗಳ ದಾಳಿ ದಿನಗಳೆದಂತೆ ಹೆಚ್ಚಾಗ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಮಾಡಿಕೊಡಲು ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹ ಮಾಡಿದ್ದಾರೆ. ಅದ್ರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಹೆಚ್ಚು ಆಸಕ್ತಿ ವಹಿಸಿ ರೈತರ ಪ್ರಾಣ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹಾಸನ: ಕಾಡಾನೆ ಸೆರೆ ಕಾರ್ಯಾಚರಣೆ ದಿಢೀರ್ ಸ್ಥಗಿತ, ಸದ್ದಿಲ್ಲದೆ ಸಾಕಾನೆಗಳ ವಾಪಸ್ ಕಳುಹಿಸಿರುವ ಅರಣ್ಯಾಧಿಕಾರಿಗಳು

ಇತ್ತೀಚೆಗೆ ರಾಜ್ಯದ ಹಲವಡೆ ಮಾನವ – ಕಾಡು ಪ್ರಾಣಿ ಸಂಘರ್ಷ ತಾರಕಕ್ಕೇರಿದೆ. ರಾಮನಗರ, ಕನಕಪುರ ಮಾತ್ರವಲ್ಲದೆ ಹಾಸನ ಜಿಲ್ಲೆಯಲ್ಲಿಯೂ ಕಾಡಾನೆ ಹಾವಳಿ ಮಿತಿ ಮೀರಿದೆ. ಇತ್ತೀಚೆಗಷ್ಟೇ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಾರ್ಮಿಕರೊಬ್ಬರನ್ನು ಕಾಡಾನೆ ಬಲಿ ಪಡೆದಿತ್ತು. ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸದರಾ ಆನೆ ಅರ್ಜುನ ಮೃತಪಟ್ಟಿತ್ತು. ನಂತರ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಕೆಲವು ದಿನಗಳ ಹಿಂದೆ ಪುನರಾರಂಭಗೊಂಡಿತ್ತಾದರೂ ಮತ್ತೆ ಸ್ಥಗಿತಗೊಂಡಿದೆ. ರೈತರು ಆತಂಕದಲ್ಲೇ ದಿನಕಳೆಯುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Thu, 25 January 24

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Loading...
Unable to load recommendations.
Follow Us