ಸೆಕ್ಸ್ ಸಿಡಿ ಪ್ರಕರಣ: ಬ್ಲಾಕ್​ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ

| Updated By: ganapathi bhat

Updated on: Apr 06, 2022 | 7:11 PM

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಹೊಸ ಮಾಹಿತಿ ಬಹಿರಂಗವಾಗಿದೆ. ಸಂತ್ರಸ್ತ ಯುವತಿಯೂ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಸಂತ್ರಸ್ತ ಯುವತಿ, ಪ್ರಕರಣದ ಕಿಂಗ್‌ಪಿನ್, ಹ್ಯಾಕರ್ ಹಾಗು ವಿಜಯನಗರದ ಯುವಕ ರಹಸ್ಯ ಸಭೆ ನಡೆಸಿರುವ ಬಗ್ಗೆ ಎಸ್​ಐಟಿ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದೆ.

ಸೆಕ್ಸ್ ಸಿಡಿ ಪ್ರಕರಣ: ಬ್ಲಾಕ್​ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ತನ್ನ ಮೇಲೆ ಬ್ಲ್ಯಾಕ್​ಮೇಲ್ ಮಾಡಿದ್ಧಾರೆ ಎಂದು ಆರೋಪಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ್ದಾರೆ. ಆಪ್ತ ಎಂ.ವಿ. ನಾಗರಾಜು ಮೂಲಕ ಸದಾಶಿವನಗರ ಪೊಲೀಸ್​ ಠಾಣೆಗೆ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ಆದರೆ ವಕೀಲರ ಸಲಹೆಯ ಮೇರೆಗೆ ಬ್ಲಾಕ್​ಮೇಲ್​ ಮಾಡಿರುವವರ ಹೆಸರುಗಳನ್ನು ತಮ್ಮ ದೂರಿನಲ್ಲಿ ಅವರು ದಾಖಲು ಮಾಡಿಲ್ಲ.

ಇದರೊಂದಿಗೆ, ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಇದೀಗತಾನೇ ತಾಜಾ ಸುದ್ದಿ ಹೊರಬಿದ್ದಿದೆ. ಸಂತ್ರಸ್ತ ಯುವತಿಯೂ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಸಂತ್ರಸ್ತ ಯುವತಿ, ಪ್ರಕರಣದ ಕಿಂಗ್‌ಪಿನ್, ಹ್ಯಾಕರ್ ಹಾಗು ವಿಜಯನಗರದ ಯುವಕ ರಹಸ್ಯ ಸಭೆ ನಡೆಸಿರುವ ಬಗ್ಗೆ ಎಸ್​ಐಟಿ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿತ್ತು. ಮಾರ್ಚ್ 1ನೇ ತಾರೀಖು ಸಂಚುಕೋರರ ಷಡ್ಯಂತ್ರ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮಾರ್ಚ್ 1ನೇ ತಾರೀಖಿನ ರಾತ್ರಿ ಆರ್‌ಟಿ ನಗರದ ಪಿಜಿ ಬಳಿ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ಸಭೆಯ ನಂತರ ದಿನೇಶ್ ಕಲ್ಲಹಳ್ಳಿ ಮೂಲಕ ದೂರು ನೀಡಲು ತೀರ್ಮಾನ ಮಾಡಲಾಗಿತ್ತು. ಷಡ್ಯಂತ್ರದ ಕುರಿತಾದ ತಾಂತ್ರಿಕ ವಿವರಗಳು ಪೊಲೀಸರಿಗೆ ಲಭ್ಯವಾದ ನಂತರ, ಈ ಸಂಬಂಧ ವಿಜಯನಗರದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇದೇ ವಿಚಾರವಾಗಿ ಸಂತ್ರಸ್ತೆಯ ಗೆಳೆಯನನ್ನೂ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸದ್ಯ ವಿಜಯಪುರ ಮೂಲದ ಹ್ಯಾಕರ್, ತುಮಕೂರು ಮೂಲದ ಕಿಂಗ್‌ಪಿನ್ ವಿಚಾರಣೆ ಪ್ರಮುಖ ಘಟ್ಟವಾಗಲಿದೆ. ಕೇರಳ, ತಮಿಳುನಾಡು ಹಾಗೂ ಆಂಧ್ರದಲ್ಲಿ ಕಿಂಗ್​ಪಿನ್​ಗಳು ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Ramesh Jarkiholi | ರಮೇಶ್​ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಎಫ್‌ಐಆರ್ ಅನಿವಾರ್ಯ- ಏಕೆ?

ನಾವು ಗಾಳಿಯಲ್ಲಿ ಗುಂಡು ಹೊಡಿಯಲ್ಲ, ಪಕ್ಕಾ ಸಾಕ್ಷ್ಯ ಇಟ್ಟುಕೊಂಡು ದೂರು ನೀಡ್ತೀವಿ: ಬಾಲಚಂದ್ರ ಜಾರಕಿಹೊಳಿ

Published On - 4:09 pm, Sat, 13 March 21