AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವುದೇ ಕಾರಣಕ್ಕೂ ಕೆಆರ್​ಎಸ್​ನಲ್ಲಿ ಡಿಸ್ನಿಲ್ಯಾಂಡ್ ಬೇಡ: ಇಂಜಿನಿಯರ್ ಎಂ.ಲಕ್ಷ್ಮಣ ಭಾರಿ ವಿರೋಧ

ಡಿಸ್ನಿಲ್ಯಾಂಡ್ ಸುಮಾರು 2,000 ಕೋಟಿ ರೂ. ಪ್ರಾಜೆಕ್ಟ್. ಇದಕ್ಕಾಗಿ 5 ಕಂಪನಿಗಳನ್ನು ಗುರುತಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಮಾಜಿ ಅಧ್ಯಕ್ಷರು ಎಂ.ಲಕ್ಷ್ಮಣ ಡಿಸ್ನಿಲ್ಯಾಂಡ್​ಗಾಗಿ ಸರ್ಕಾರದ 331 ಎಕರೆ 23 ಗುಂಟೆ, ರೈತರಿಂದ 400 ಎಕರೆ ಸ್ವಾಧೀನ ಮಾಡಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಕೆಆರ್​ಎಸ್​ನಲ್ಲಿ ಡಿಸ್ನಿಲ್ಯಾಂಡ್ ಬೇಡ: ಇಂಜಿನಿಯರ್ ಎಂ.ಲಕ್ಷ್ಮಣ ಭಾರಿ ವಿರೋಧ
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್​ ಮಾಜಿ ಅಧ್ಯಕ್ಷ ಎಂ.ಲಕ್ಷ್ಮಣ
sandhya thejappa
|

Updated on:Mar 13, 2021 | 4:30 PM

Share

ಮೈಸೂರು: ಡಿಸ್ನಿಲ್ಯಾಂಡ್ ಕೆಆರ್​ಎಸ್​ನಲ್ಲಿ (KRS) ನಿರ್ಮಾಣವಾಗಬೇಕಿರುವ ದೇಶದ ಅತಿ ದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್. ಇದರ ಆರಂಭಕ್ಕೆ ಸರ್ಕಾರ ಕೈ ಹಾಕಿದಾಗಲೆಲ್ಲಾ ಒಂದಲ್ಲ ಒಂದು ವಿರೋಧ ವ್ಯಕ್ತವಾಗುತ್ತಿದೆ. ಈ ಬಾರಿಯೂ ಅದು ಪುನರಾವರ್ತನೆ ಆಗಿದ್ದು, ಈ ಬಗ್ಗೆ ಇಂಜಿನಿಯರ್ ಎಂ.ಲಕ್ಷ್ಮಣ ವಿರೋಧ ವ್ಯಕ್ತಪಡಿಸಿದ್ದಾರೆ.

ಡಿಸ್ನಿಲ್ಯಾಂಡ್ ಸುಮಾರು 2,000 ಕೋಟಿ ರೂ. ಪ್ರಾಜೆಕ್ಟ್. ಇದಕ್ಕಾಗಿ 5 ಕಂಪನಿಗಳನ್ನು ಗುರುತಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಮಾಜಿ ಅಧ್ಯಕ್ಷರು ಎಂ.ಲಕ್ಷ್ಮಣ ಡಿಸ್ನಿಲ್ಯಾಂಡ್​ಗಾಗಿ ಸರ್ಕಾರದ 331 ಎಕರೆ 23 ಗುಂಟೆ, ರೈತರಿಂದ 400 ಎಕರೆ ಸ್ವಾಧೀನ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಕಾರಣವನ್ನು ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಡಿಸ್ನಿಲ್ಯಾಂಡ್ ಬೇಡ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ.

ಕೃಷ್ಣರಾಜ ಸಾಗರ ಜಲಾಶಯ ಕಟ್ಟಿ 90 ವರ್ಷ ಆಗಿದೆ. ಎಷ್ಟು ವರ್ಷ ಗಟ್ಟಿಯಾಗಿರುತ್ತೆಂದು ಹೇಳಲು ಸಾಧ್ಯವಿಲ್ಲ. ಕೆಆರ್​ಎಸ್ 3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. 3.75 ಕೋಟಿ ವೆಚ್ಚದಲ್ಲಿ ಕೆಆರ್​ಎಸ್​ ನಿರ್ಮಿಸಲಾಗಿದೆ. ಅರ್ಧ ಸುಣ್ಣ, ಅರ್ಧ ಮಣ್ಣಿನಿಂದ ನಿರ್ಮಿಸಲಾಗಿದೆ. ಕಟ್ಟಬಾರದ ಜಾಗದಲ್ಲಿ ಜಲಾಶಯವನ್ನು ಕಟ್ಟಲಾಗಿದೆ. ಸಣ್ಣ ಪ್ರಮಾಣದಲ್ಲಿ ಅಲುಗಾಡಿದರೂ ಡ್ಯಾಂಗೆ ಅಪಾಯ. ಕೆಆರ್​ಎಸ್​ಗೆ ಜನರು ಬರುತ್ತಿರುವುದೇ ಅಪಾಯವಾಗಿದೆ. ಈ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಾಗಿದೆ. ಬರುತ್ತಿರುವ ಜನರನ್ನು ಕಡಿಮೆ ಮಾಡಲು ತಿಳಿಸಲಾಗಿದೆ ಎಂದು ಎಂ.ಲಕ್ಷ್ಮಣ ಹೇಳಿದರು.

ಕೋರ್ಟ್ ಮೊರೆ ಹೋಗಲೂ ಸಿದ್ಧ ಡಿಸ್ನಿಯಿಂದ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಇದರ ಪ್ರವೇಶ ಶುಲ್ಕ ಕೂಡಾ ದುಬಾರಿಯಾಗಲಿದೆ. ಒಬ್ಬರಿಗೆ ಪ್ರವೇಶ ದರ ಕನಿಷ್ಠ 5 ಸಾವಿರ ರೂ. ಆಗಲಿದೆ. ಸಾಮಾನ್ಯ ಜನರು ಡಿಸ್ನಿಲ್ಯಾಂಡ್​ಗೆ ಹೋಗಲು ಸಾಧ್ಯವಿಲ್ಲ. ಡಿಸ್ನಿಲ್ಯಾಂಡ್ ಒಳಗಡೆಯೇ ಹೋಟೆಲ್​ಗಳಿರುವ ಹಿನ್ನೆಲೆ ಈ ಡಿಸ್ನಿಲ್ಯಾಂಡ್​ನಿಂದ ಸ್ಥಳೀಯರಿಗೆ ಲಾಭ ಇರುವುದಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಅಭ್ಯಂತರ ಇಲ್ಲ ಆದರೆ ಕೆಆರ್​ಎಸ್​ನಲ್ಲಿ ಡಿಸ್ನಿಲ್ಯಾಂಡ್​ಗೆ ನಮ್ಮ ವಿರೋಧ ಇದೆ. ಈ ಬಗ್ಗೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಲೂ ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಒದಿ

ಕೆಆರ್​ಎಸ್ ಬಳಿ ಓಡಾಡುತ್ತಿದ್ದ ಒಂದು ಚಿರತೆ ಬೋನಿಗೆ, ಇನ್ನೊಂದು ಚಿರತೆಗಾಗಿ ಮುಂದುವರಿದ ಹುಡುಕಾಟ

KRS Dam ಮೇಲೆ ಯುವಕನ ಖಾಸಗಿ ದರ್ಬಾರ್​ಗೆ ಸಹಾಯ ಮಾಡಿದ್ದಕ್ಕೆ ಕೆಎಸ್ಐಎಸ್‌ಎಫ್ ಇನ್ಸ್‌ಪೆಕ್ಟರ್ ಸಸ್ಪೆಂಡ್

Published On - 4:30 pm, Sat, 13 March 21

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ