AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್: ಕಾನೂನು ವಿದ್ಯಾರ್ಥಿ ಅಪಹರಣ.. ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಲಿಂಕ್?

ಯುವಕನನ್ನ ಕರೆದುಕೊಂಡು ಹೋದವರು ಪೊಲೀಸರೆಂದು ಯುವಕನ ಪಾಲಕರು ತಕ್ಷಣಕ್ಕೆ ಸುಮ್ಮನಿದ್ದರು. ಆದರೆ ಈಗ 24 ಗಂಟೆ ಕಳೆದರೂ ಯುವಕ ಬಾರದಿರುವ ಹಿನ್ನೆಲೆ ದೂರು ದಾಖಲಿಸಿದ್ದಾರೆ.  ಮಗ ಕಿಡ್ನಾಪ್ ಆಗಿದ್ದಾನೆಂದು ಯುವಕನ ಕುಟುಂಬಸ್ಥರು ದೂರು ನೀಡಿದ್ದಾರೆ. ಭಾಲ್ಕಿ ನಗರ‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ಪೊಲೀಸರಿಂದ‌ ಶೋಧ ಕಾರ್ಯ ನಡೆದಿದೆ. 

ಬೀದರ್: ಕಾನೂನು ವಿದ್ಯಾರ್ಥಿ ಅಪಹರಣ.. ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಲಿಂಕ್?
ಅಪಹರಣಕ್ಕೀಡಾಗಿರುವ ಕಾನೂನು ವಿದ್ಯಾರ್ಥಿ  ಅಭಿಷೇಕ್ 
ಸಾಧು ಶ್ರೀನಾಥ್​
|

Updated on: Mar 13, 2021 | 4:16 PM

Share

ಬೀದರ್:  ಮೂರು ದಿನಗಳ ಹಿಂದೆ ಭಾಲ್ಕಿ ಪಟ್ಟಣಕ್ಕೆ ಮೂರು ಜನರ ತಂಡವೊಂದು ಬಂದು ಯುವಕನೊಬ್ಬನನ್ನು  ಕರೆದುಕೊಂಡು ಹೋಗಿತ್ತು. ಆ ಯುವಕ 26 ವರ್ಷದ ಅಭಿಷೇಕ್​ ಎಂಬುವವನಾಗಿದ್ದು, ಈತ ಕಾನೂನು ಪದವಿ ಓದುತ್ತಿದ್ದಾನೆ. ಆರಂಭದಲ್ಲಿ ರಮೇಶ್​ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಅಭಿಷೇಕನನ್ನು ಪೊಲೀಸರು  ಕರೆದುಕೊಂಡು ಹೋಗಿದ್ದಾರೆ ಎಂದು ನಂಬಲಾಗಿತ್ತು. ಯುವಕನನ್ನ ಕರೆದುಕೊಂಡು ಹೋದವರು ಪೊಲೀಸರೆಂದು ಯುವಕನ ಪಾಲಕರು ತಕ್ಷಣಕ್ಕೆ ಸುಮ್ಮನಿದ್ದರು.

ಆದರೆ ಈಗ 24 ಗಂಟೆ ಕಳೆದರೂ ಯುವಕ ಬಾರದಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ.  ಮಗ ಕಿಡ್ನಾಪ್ ಆಗಿದ್ದಾನೆಂದು ಯುವಕನ ಕುಟುಂಬಸ್ಥರು ದೂರು ನೀಡಿದ್ದಾರೆ. ಭಾಲ್ಕಿ ನಗರ‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ಪೊಲೀಸರಿಂದ‌ ಶೋಧ ಕಾರ್ಯ ನಡೆದಿದೆ.

Law student in bhalki kidnapped alleged to ramesh jarkiholi sex cd episode 1