ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿ, ಸಿಡಿಯಲ್ಲಿರುವ ಯುವತಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಸಿಡಿ ಯುವತಿಗೆ ಮನೋವೈದ್ಯರಿಂದ ಕೌನ್ಸೆಲಿಂಗ್ ಕೂಡ ಮಾಡಲಾಗಿದೆ. ಮನೋ ವೈದ್ಯರು, ಸಮಾಜದಲ್ಲಿನ ಮುಂದಿನ ಆಗುಹೋಗುಗಳ ಬಗ್ಗೆ ತಿಳಿವಳಿಕೆ ನೀಡಿ, ಕಾನೂನು ಹೋರಾಟ, ಪೊಲೀಸರ ವಿಚಾರಣೆ ಬಗ್ಗೆ ಧೈರ್ಯತುಂಬಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಯುವತಿಗೆ ಒಆರ್ಎಸ್ ಹಾಗೂ ಚಿತ್ರಾನ್ನ ನೀಡಲಾಗಿದೆ. ಸಿಡಿಯಲ್ಲಿರುವ ಯುವತಿ ಒಆರ್ಎಸ್ ಕುಡಿದು, ಚಿತ್ರಾನ್ನ ಸೇವಿಸಿದ್ದಾರೆ.
ಯುವತಿಗೆ ಮೆಡಿಕಲ್ ಟೆಸ್ಟ್ ಮುಕ್ತಾಯವಾಗುತ್ತಿದ್ದಂತೆ, ಬೌರಿಂಗ್ ಆಸ್ಪತ್ರೆಗೆ ವಕೀಲ ಜಗದೀಶ್ ಆಗಮಿಸಿದ್ದಾರೆ. ಸ್ಥಳದಲ್ಲಿರುವ ಅಧಿಕಾರಿಗಳ ಜೊತೆ ಜಗದೀಶ್ ಮಾತುಕತೆ ನಡೆಸಿದ್ದಾರೆ. ಸಂತ್ರಸ್ತೆ ಇರುವ ಎಮರ್ಜೆನ್ಸಿ ಕಟ್ಟಡದ ಪ್ರವೇಶ ದ್ವಾರದ ಬಳಿ ನಿಂತಿರುವ ವಕೀಲ ಜಗದೀಶ್, ಸ್ಥಳದಲ್ಲಿರುವ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಎಸ್ಐಟಿ ಸೂಚಿಸಿರುವ ಐದು ಪರೀಕ್ಷೆಗಳು ಮುಕ್ತಾಯ
ಸಂತ್ರಸ್ತ ಯುವತಿ ಇನ್ನು ಅರ್ಧಗಂಟೆ ಆಸ್ಪತ್ರೆಯಲ್ಲೇ ಇರಲಿದ್ದಾರೆ ಎಂದು ತಿಳಿದುಬಂದಿದೆ. ಅರ್ಧಗಂಟೆಯ ನಂತರ ಯುವತಿಯನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ. ಎಸ್ಐಟಿ ಸೂಚಿಸಿರುವ ಐದು ಮುಖ್ಯ ಪರೀಕ್ಷೆಗಳನ್ನು ಆಸ್ಪತ್ರೆಯಲ್ಲಿ ಮಾಡಲಾಗಿದೆ. ಉಗುರು, ಚರ್ಮ, ಕೂದಲು, ರಕ್ತದ ಮಾದರಿ ಸಂಗ್ರಹಿಸಿ ಮುಂದಿನ ಹಂತದ ತಯಾರಿ ಮಾಡಿಕೊಳ್ಳಲಾಗಿದೆ. ಈ ಮಾದರಿಗಳನ್ನು ಸೀಲ್ ಮಾಡಿ, ನೇರವಾಗಿ ಎಫ್ಎಸ್ಎಲ್ಗೆ ರವಾನೆ ಮಾಡಲಾಗುತ್ತದೆ. ಈ ಮಧ್ಯೆ ಯುವತಿಗೆ ವಿಶ್ರಾಂತಿ ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಯುವತಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಿಡಿ ಯುವತಿಗೆ ವಿಶ್ರಾಂತಿ ಇಲ್ಲ; ತಲೆ ನೋವು, ಕೈಕಾಲು ನಡುಗುತ್ತಿದೆ: ಬೌರಿಂಗ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್
ಇದನ್ನೂ ಓದಿ: ಸಿಡಿ ಲೇಡಿ ಮೆಡಿಕಲ್ ಟೆಸ್ಟ್ ಬಳಿಕ.. ರಮೇಶ್ ಜಾರಕಿಹೊಳಿಗೂ ಮೆಡಿಕಲ್ ಟೆಸ್ಟ್? ರಮೇಶ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ
Published On - 3:47 pm, Wed, 31 March 21