ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ

| Updated By: ganapathi bhat

Updated on: Jun 16, 2021 | 5:36 PM

Ramesh Jarkiholi CD Case: ಸಿಡಿ ದಿನೇಶ್ ಕಲ್ಲಹಳ್ಳಿಗೆ ಕೊಟ್ಟು ಬಿಡುಗಡೆ ಮಾಡಿಸಿದ್ದು. ಸಿಡಿ ಬಿಡುಗಡೆಗು ಮೊದಲು ಸಭೆ ಸೇರಿದ್ದು ಹೀಗೆ ಹಲವು ವಿಚಾರಗಳನ್ನು ತನಿಖಾ ತಂಡ ಪ್ರಶ್ನೆ ಮಾಡಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್​ಐಟಿ) ಇಂದು (ಜೂನ್ 16) ಆರೋಪಿ ನರೇಶ್​ರನ್ನು ವಿಚಾರಣೆಗೆ ಕರೆಸಿಕೊಂಡಿದೆ. ನರೇಶ್, ಸಂಬಳ, ಬ್ಯಾಂಕ್ ಖಾತೆ, ಎಷ್ಟು ಆದಾಯ ಇತ್ತು, ಬೇರೆ ಯಾವುದಾದ್ರು ಆದಾಯದ ಮೂಲ ಇತ್ತಾ ಎಂಬುದರ ಬಗ್ಗೆ ಎಸ್​ಐಟಿ ಮಾಹಿತಿ ಪಡೆದಿದೆ.

ರಮೇಶ್ ಜಾರಕಿಹೊಳಿ ಸಿಡಿ ಮೇಕಿಂಗ್ ಮತ್ತು ಡಿಸ್ಟ್ರಿಬ್ಯೂಶನ್ ಬಗ್ಗೆ ಇಂದಿನ ವಿಚಾರಣೆ ನಡೆಯಲಿದೆ. ಸಿಡಿ ಯಾವಾಗ ಹೇಗೆ ಮಾಡಿದ್ದೀರಾ? ಸಿಡಿ ಮಾಡಲು ಕ್ಯಾಮರಾ ಖರೀದಿ ಹೇಗೆ, ಎಲ್ಲಿ? ಸಿಡಿ ಎಡಿಟ್ ಮಾಡಿಸಿದ್ದು ಯಾರು? ಸಿಡಿ ಎಡಿಟ್ ಬಳಿಕ ಬ್ಲಾಕ್ ಮೇಲ್ ಮಾಡಿ ಹಣ ಪಡೆದಿದ್ದು. ಈ ಹಿಂದೆ ಇದೇ ರೀತಿ ಎಷ್ಟು ಕೃತ್ಯ ಎಸಗಿದ್ದೀರಿ ಎಂದು ಪ್ರಶ್ನೆ ಕೇಳಲಿದ್ದಾರೆ.

ಸಿಡಿ ದಿನೇಶ್ ಕಲ್ಲಹಳ್ಳಿಗೆ ಕೊಟ್ಟು ಬಿಡುಗಡೆ ಮಾಡಿಸಿದ್ದು. ಸಿಡಿ ಬಿಡುಗಡೆಗು ಮೊದಲು ಸಭೆ ಸೇರಿದ್ದು ಹೀಗೆ ಹಲವು ವಿಚಾರಗಳನ್ನು ತನಿಖಾ ತಂಡ ಪ್ರಶ್ನೆ ಮಾಡಿದೆ. ಅದಕ್ಕೆ ಪ್ರತಿಯಾಗಿ ತಾನು ಮುಗ್ಧ, ನನಗೆ ಇವೆಲ್ಲದ್ರ ಬಗ್ಗೆ ಗೊತ್ತಿಲ್ಲ ಎಂದು ನರೇಶ್ ಪ್ರತಿಕ್ರಿಯಿಸಿದ್ದಾರೆ.

ಸಿಡಿ ಬಗ್ಗೆ ಯುವತಿ ಹೇಳಿದಾಗಲೆ ಇದು ಗೊತ್ತಾಗಿದ್ದು. ಯುವತಿಗೆ ನ್ಯಾಯಾ ಕೊಡಿಸಲು ಅಷ್ಟೆ ನಾನು ಮುಂದಾಗಿದ್ದೆ. ಕಾಮನ್ ಫ್ರೆಂಡ್ ಓರ್ವರ ಮೂಲಕ ಪರಿಚಯ ಅಗಿದ್ದ ಯುವತಿ. ತನಗೆ ರಮೇಶ್ ಜಾರಕಿಹೊಳಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಹೇಳಿದ್ದರು ಎಂದು ನರೇಶ್ ಹೇಳಿದ್ದಾರೆ.

ತಾನೊಬ್ಬ ಪತ್ರಕರ್ತ ನಾಗಿ ಸಹಾಯ ಮಾಡಲು ಮುಂದಾಗಿದ್ದೆ. ಅದ್ರೆ ಆ ನಡುವೆ ದೊಡ್ಡವರ ಇನ್ವಾಲ್ಮಮಟ್ ಅಗಿರೊದು ಗೊತ್ತಾಯಿತು. ದಿನೇಶ್ ಕಲ್ಲಹಳ್ಳಿಗೆ ಸಿಡಿ ನಾನು ಕೊಟ್ಟಿಲ್ಲ. ಯಾರು ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ನಮ್ಮ ಮೇಲೆ ಸುಮ್ಮನೆ ಅರೋಪ ಮಾಡಲಾಗಿತ್ತು ಅದಕ್ಕೆ ನಾವು ಊರು ಬಿಟ್ಟಿದ್ದೆವೆ ಎಂದು ನರೇಶ್ ತಿಳಿಸಿದ್ದಾರೆ.

ಇದೀಗ ನರೇಶ್ ವಿಚಾರಣೆ ಮುಂದುವರೆದಿದೆ. ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾದ ನರೇಶ್, ಆಡುಗೋಡಿಯ ಟೆಕ್ನಿಕಲ್ ಸೆಲ್ ನಲ್ಲಿ ಇಂಟ್ರಾಗೇಷನ್​ನಲ್ಲಿ ಭಾಗಿಯಾಗಿದ್ದಾರೆ. ಸಿಡಿ ತಯಾರಿ ಮತ್ತು ಲೀಕ್ ಆದ ವಿಚಾರವಾಗಿ ಪ್ರಶ್ನೆ ಕೇಳಲಾಗುತ್ತಿದೆ ಎಂದು ತಿಳಿದುಬಂದಿದೆ. ತನಿಕಾಧಿಕಾರಿ ಎಸಿಪಿ ಧರ್ಮೇಂದ್ರರಿಂದ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸತತ ಐದು ಗಂಟೆಗಳ ಕಾಲ ಆರೋಪಿ ನರೇಶ್ ವಿಚಾರಣೆ ನಡೆಸಿದ ಎಸ್​ಐಟಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾಧಿಕಾರಿಗಳ ಮುಂದೆ ಹಾಜರಾದ ನರೇಶ್ – ಶ್ರವಣ್! ಮುಂದೇನು?