ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸತತ ಐದು ಗಂಟೆಗಳ ಕಾಲ ಆರೋಪಿ ನರೇಶ್ ವಿಚಾರಣೆ ನಡೆಸಿದ ಎಸ್​ಐಟಿ

ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆಗೆ ಹಾಜರಾಗಲು ಪ್ರಕರಣದ ಆರೋಪಿ ಶ್ರವಣ್​ಗೆ ನಾಳೆ, ನರೇಶ್ ಗೌಡಗೆ ಬುಧವಾರ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸತತ ಐದು ಗಂಟೆಗಳ ಕಾಲ ಆರೋಪಿ ನರೇಶ್ ವಿಚಾರಣೆ ನಡೆಸಿದ ಎಸ್​ಐಟಿ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಎಸ್​ಐಟಿ ಐದು ಗಂಟೆ ಕಾಲ ಪ್ರಕರಣದ ಆರೋಪಿ ನರೇಶ್‌ ಗೌಡ ವಿಚಾರಣೆ ನಡೆಸಿತು. ಸಾಮಾಜಿಕ ಜಾಲತಾಣದ ಖಾತೆಗಳ ವಿವರ ಪಡೆದು ಯಾವ ಮೊಬೈಲ್ ಬಳಸುತ್ತಿದ್ದೀರಿ?, ಯಾರ ಹೆಸರಿನಲ್ಲಿದೆ? ನೀವು ಎಲ್ಲೆಲ್ಲಿ ಕೆಲಸ ಮಾಡಿದ್ರಿ?, ತಿಂಗಳ ಆದಾಯ ಎಷ್ಟು? ನಿಮ್ಮ ಖರ್ಚು ಎಷ್ಟು?, ನಿಮಗೆ ಬೇರೆ ಉದ್ಯಮವಿದೆಯಾ? ಎಷ್ಟು ಬ್ಯಾಂಕ್ ಖಾತೆಗಳಿವೆ, ಯಾವ್ಯಾವ ಬ್ಯಾಂಕ್‌ನಲ್ಲಿವೆ? ಬೆಂಗಳೂರಲ್ಲಿ ಎಲ್ಲಿ ವಾಸವಿದ್ದಿರಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಎಸ್​​ಐಟಿ ಉತ್ತರ ಪಡೆದಿದೆ.

ಎಸ್ಐಟಿ ಇಂದು ಒಟ್ಟು ಐದು ಗಂಟೆಗಳ ಕಾಲ ಪ್ರಕರಣದ ಆರೋಪಿ ನರೇಶ್ ಗೌಡ ವಿಚಾರಣೆ ನಡೆಸಿದೆ. ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆಗೆ ಹಾಜರಾಗಲು ಪ್ರಕರಣದ ಆರೋಪಿ ಶ್ರವಣ್​ಗೆ ನಾಳೆ, ನರೇಶ್ ಗೌಡಗೆ ಬುಧವಾರ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ.

ಈ ಮುನ್ನ ವಿಚಾರಣೆಯ ನೀಡಿದ್ದ ಹೇಳಿಕೆಯೇನು?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಸಂಬಂಧ ನರೇಶ್ ಗೌಡ ಹಾಗೂ ಶ್ರವಣ್ ಇಂದು ಮಧ್ಯಾಹ್ನ ಆಡುಗೋಡಿಯಲ್ಲಿ ಎಸ್​ಐಟಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಸತತ ಮೂರು ಗಂಟೆಗೂ ಹೆಚ್ಚು ಸಮಯದಿಂದ ವಿಚಾರಣೆ ನಡೆಯುತ್ತಿದ್ದಾರೆ. ನರೇಶ್ ಹಾಗೂ ಶ್ರವಣ್ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ. ವಿಚಾರಣೆ ವೇಳೆ ಇಬ್ಬರು ಬಹಳಷ್ಟು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಂತ್ರಸ್ತ ಯುವತಿ ಬಗೆಗೆ ಕೆಲ ಮಹತ್ವದ ಮಾಹಿತಿ ಹೇಳಿದ್ದಾರೆ.

ನರೇಶ್​ ಗೌಡ ಮತ್ತು ಶ್ರವಣ್ ಅವರಿಬ್ಬರೂ ಎಸ್​​ಐಟಿ ವಿಚಾರಣೆ ಮುಗಿಸಿ, ಆಡುಗೋಡಿ ಟೆಕ್ನಿಕಲ್ ಸೆಲ್​ನಿಂದ ತೆರಳಿದ್ದಾರೆ. ಎಸ್ಐಟಿ ವಿಚಾರಣೆಗೆ ಹಾಜರಾದ ನರೇಶ್ ಗೌಡ, ಶ್ರವಣ್ ಅವರಿಬ್ಬರನ್ನೂ SIT ಅಧಿಕಾರಿಗಳು ಈವರೆಗೂ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಶ್ರವಣ್ ಮತ್ತು ನರೇಶ್ ತಮ್ಮ ಪರಿಚಯ ಮಾಡಿಕೊಂಡು ಸಿಡಿ ಕೇಸ್​​ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇಬ್ಬರ ಹೇಳಿಕೆಗಳನ್ನೂ ಎಸ್‌ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ದಾಖಲಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರಿಬ್ಬರ ಮೊಬೈಲ್‌ಗಳನ್ನ ವಶಕ್ಕೆ ಪಡೆದು, ಪರಿಶೀಲಿಸಿದ್ದಾರೆ.

ಎಸ್​​ಐಟಿ ಅಧಿಕಾರಿಗಳ ಮುಂದೆ ಆರೋಪಿ ಶ್ರವಣ್​ ಹೇಳಿಕೆ

ಸಂತ್ರಸ್ತ ಯುವತಿ ನನಗೆ ಕಾಲೇಜ್‌ನಲ್ಲಿ ಪರಿಚಯವಾಗಿದ್ರು. ಕಾಲೇಜಿನ ಪ್ರತಿಭಟನೆಯೊಂದರಲ್ಲಿ ಯುವತಿಯ ಪರಿಚಯವಾಯ್ತು. ನಾವು ಯಾರ ಬಳಿಯೂ ಹಣಕ್ಕೆ ಡಿಮ್ಯಾಂಡ್‌ ಮಾಡಿಲ್ಲ. ಸಚಿವರಿಂದ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನ್ಯಾಯ ಕೊಡಿಸಲು ಮುಂದಾಗಿದ್ವಿ ಎಂದು ಎಸ್​​ಐಟಿ ಅಧಿಕಾರಿಗಳ ಮುಂದೆ ಆರೋಪಿ ಶ್ರವಣ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜುಲೈ 3ನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ, ಪರೀಕ್ಷೆಯಲ್ಲಿ ಭಾಗಿಯಾಗುವ ಎಲ್ಲ ಶಿಕ್ಷಕರು, ಸಿಬ್ಬಂದಿಗೆ ಕೊವಿಡ್ ಲಸಿಕೆ: ಸಚಿವ ಸುರೇಶ್ ಕುಮಾರ್ ಘೋಷಣೆ

ಕೊವಿಡ್ ಲಸಿಕೆ ಪಡೆದ ನಂತರ ದೇಹದಲ್ಲಿ ಅಯಸ್ಕಾಂತ ಶಕ್ತಿ ಉಂಟಾಗಿದೆ ಎಂದ ಉಲ್ಲಾಸನಗರ ವ್ಯಕ್ತಿಯ ವಾದ; ವಿಡಿಯೊ ವೈರಲ್

(Ramesh Jarkiholi cd case SIT enquiry accused Naresh Gowda in Bengaluru)