ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಇಂದು ಸಂಜೆ (ಜೂನ್ 28) ಮತ್ತೆ ಮುಂಬೈಗೆ ತೆರಳಲಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸಂಜೆ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಿಂದ ಮುಂಬೈಗೆ ಕೆಲ ಆಪ್ತರ ಜೊತೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಬೆಳಗ್ಗೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿ, ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ದೇವೇಂದ್ರ ಫಡ್ನವಿಸ್, ರಮೇಶ್ ಜಾರಕಿಹೊಳಿಗೆ ಬಿಜೆಪಿ ಸೇರ್ಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇವೇಂದ್ರ ಫಡ್ನವಿಸ್ರನ್ನು ರಾಜಕೀಯ ಗಾಡ್ಫಾದರ್ ಎಂದು ರಮೇಶ್ ಜಾರಕಿಹೊಳಿ ನಂಬಿದ್ದಾರೆ.
ತಮ್ಮ ಏಳಿಗೆ ಸಹಿಸದೇ ಷಡ್ಯಂತ್ರ ಮಾಡಿದ್ದಾರೆಂದು ಬಿಜೆಪಿಯ ಕೆಲ ಪ್ರಮುಖ ನಾಯಕರ ವಿರುದ್ಧ ರಮೇಶ್ ಮಾಡಿದ್ದ ಗಂಭೀರ ಆರೋಪವನ್ನು ದೇವೇಂದ್ರ ಫಡ್ನವಿಸ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಈ ವಿಚಾರದ ಬಗ್ಗೆ ಹೈಕಮಾಂಡ್ ಸಂದೇಶವನ್ನು ದೇವೇಂದ್ರ ಫಡ್ನವಿಸ್ ರಮೇಶ್ ಜಾರಕಿಹೊಳಿಗೆ ತಿಳಿಸುತ್ತಾರಾ? ಎಂದು ನೋಡಬೇಕಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಹೇಳಿರುವ ರಮೇಶ್ ಜಾರಕಿಹೊಳಿಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಲಹೆ ನೀಡಿದ್ದಾರೆ. ನಾಳೆ ದೇವೇಂದ್ರ ಫಡ್ನವಿಸ್ ಭೇಟಿ ಬಳಿಕ ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆಯಿದೆ.
ಸಹೋದರರ ಸಲಹೆ
ನಿನ್ನೆ ತಡರಾತ್ರಿ ನಡೆದ ಜಾರಕಿಹೊಳಿ ಬ್ರದರ್ಸ್ ಮೀಟಿಂಗ್ನಲ್ಲಿ ಸಹೋದರರು ರಮೇಶ್ ಜಾರಕಿಹೊಳಿಗೆ ಹಲವು ಸಲಹೆಗಳನ್ನ ನೀಡಿದ್ದಾರೆ. ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ಬೇಡ ಅಂತಾ ಸಲಹೆ ನೀಡಿದ್ದಾರೆ. ಮತ್ತೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುಂದೆ ಹಲವು ಅಡ್ಡಿಗಳು ಎದುರಾಗಬಹುದು ಅಂತಾ ಹೇಳಿದ್ದಾರೆ.
ಇದನ್ನೂ ಓದಿ
ರಹಸ್ಯ ಸ್ಥಳದಲ್ಲಿ ಜಾರಕಿಹೊಳಿ ಸಹೋದರರ ಸಭೆ.. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ‘ಸಾಹುಕಾರ್’ಗೆ ಸಲಹೆ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಎಲ್ಲರಿಗೂ ಕೊವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ..
(Ramesh Jarkiholi is heading to Mumbai again today)
Published On - 10:29 am, Mon, 28 June 21