ಸಿಡಿ ಪ್ರಕರಣದ ಯಾವುದೇ ವಿಚಾರ ಬಿತ್ತರವಾಗದಂತೆ ನಿರ್ಬಂಧ ಕೋರಿ ಕೋರ್ಟ್ ಮೊರೆ ಹೋಗಲಿದ್ದಾರಂತೆ ಸಂತ್ರಸ್ತ ಯುವತಿ!
ಮಾಧ್ಯಮಗಳಿಗೆ ಈ ಪ್ರಕರಣ ಸಂಬಂಧ ಸಂಪೂರ್ಣ ನಿರ್ಬಂಧ ಹೇರುವಂತೆ ಕೋರ್ಟ್ ಮೊರೆ ಹೋಗಲಿರುವ ಯುವತಿ, ಸಿಡಿ ಪ್ರಕರಣಕ್ಕೆ ಸೇರಿದ ಯಾವುದೇ ವಿಚಾರ ಪ್ರಸಾರ ಮಾಡಬಾರದು ಎಂದು ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಕಿಂಗ್ಪಿನ್ಗಳು ನನ್ನನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾರೆಂದು ಸುದ್ದಿ ಹರಿದಾಡಿದ ಬೆನ್ನಲ್ಲೇ ಸಿಡಿ ಸಂತ್ರಸ್ತೆ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಿನ್ನೆ ಬಿತ್ತರವಾದ ಸುದ್ದಿಗಳು ವಾಸ್ತವಕ್ಕೆ ದೂರವಾಗಿವೆ. ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ಈಗಲೂ ನಾನು ನನ್ನ ಮಾತಿಗೆ ಬದ್ದಳಾಗಿದ್ದೇನೆ. ಒತ್ತಡಕ್ಕೆ ಒಳಗಾಗಿ ಹೇಳಿಕೆ ಬದಲಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಯುವತಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರಕ್ಕೆ ಸಂಪೂರ್ಣ ತಡೆಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಒಂದೂವರೆ ತಿಂಗಳಿನಿಂದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳು ಹೊರಬಿದ್ದಿವೆ. ಸಂತ್ರಸ್ತ ಯುವತಿಯೂ ಮೇಲಿಂದ ಮೇಲೆ ವಿಡಿಯೋ ಬಿಡುಗಡೆ ಮಾಡಿದ್ದರು. ಅಷ್ಟಾದರೂ ಮಾಧ್ಯಮಗಳಲ್ಲಿ ಆಕೆಯ ಯಾವುದೇ ವೈಯಕ್ತಿಕ ವಿಚಾರ ಬಹಿರಂಗವಾಗಿಲ್ಲ. ಆಕೆಯ ಹೆಸರನ್ನೂ ಹೇಳದೇ ಗೌಪತ್ಯೆಯನ್ನು ಕಾಪಾಡಿಕೊಂಡು ಬರಲಾಗಿದೆ. ಆದರೆ, ಇಷ್ಟೆಲ್ಲಾ ಆದ ಬಳಿಕ ಈಗ ಪ್ರಕರಣದಲ್ಲಿ ಟ್ವಿಸ್ಟ್ ಸಿಗುತ್ತಿದ್ದಂತೆಯೇ ಯುವತಿ ನ್ಯಾಯಾಲಯದ ಮೊರೆ ಹೋಗಲು ಸಜ್ಜಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಮಾಧ್ಯಮಗಳಿಗೆ ಈ ಪ್ರಕರಣ ಸಂಬಂಧ ಸಂಪೂರ್ಣ ನಿರ್ಬಂಧ ಹೇರುವಂತೆ ಕೋರ್ಟ್ ಮೊರೆ ಹೋಗಲಿರುವ ಯುವತಿ, ಸಿಡಿ ಪ್ರಕರಣಕ್ಕೆ ಸೇರಿದ ಯಾವುದೇ ವಿಚಾರ ಪ್ರಸಾರ ಮಾಡಬಾರದು ಎಂದು ಬೇಡಿಕೆ ಇಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದುವೇಳೆ ಮುಂದಿನ ದಿನಗಳಲ್ಲಿ ಆಕೆ ಉಲ್ಟಾ ಹೊಡೆದರೂ ಅದು ಬಿತ್ತರವಾಗಬಾರದೆಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆ ಎಂಬ ಸಂಶಯವೂ ವ್ಯಕ್ತವಾಗಿದೆ.
ಎರಡು-ಮೂರು ದಿನಗಳಲ್ಲಿ ಮತ್ತೊಂದು ಹೇಳಿಕೆ? ಈ ಸಂದೇಹಕ್ಕೆ ಪೂರಕ ಎಂಬಂತೆ ಇನ್ನು ಎರಡು ಮೂರು ದಿನಗಳಲ್ಲಿ ಯುವತಿಯ ಮತ್ತೊಂದು ಹೇಳಿಕೆ ಹೊರಬರಲಿದೆ ಎನ್ನಲಾಗುತ್ತಿದ್ದು, ಸಿಡಿ ಪ್ರಕರಣದ ಬಹುಮುಖ್ಯ ವಿಚಾರ ಬಹಿರಂಗಪಡಿಸಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಅದರಲ್ಲಿ ನರೇಶ್ ಹಾಗೂ ಶ್ರವಣ್ ವಿರುದ್ಧ ಹೇಳಿಕೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅದಕ್ಕೂ ಮೊದಲು ಸುದ್ದಿ ಪ್ರಸಾರಕ್ಕೆ ನಿರ್ಬಂಧ ಹೇರಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದರೆ ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಸಿಡಿ ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ ಅಸ್ತ್ರ: ಕ್ವಾರಂಟೈನ್ ಆಗಿರುವ ರಮೇಶ್ ಜಾರಕಿಹೊಳಿಗೆ ಶುರುವಾಯ್ತಾ ಅಸಲಿ ಪರೀಕ್ಷೆ?
(Ramesh Jarkiholi obscene CD Case victim seeking Court to announce stay for telecasting any news related to the case)