‘ಈ ಸಲ ಕಪ್ ನಮ್ದೆ’ ರಥದ ಮೇಲೆ ಬಾಳೆಹಣ್ಣು ತೂರಿ ಅಭಿಮಾನಿ ಪ್ರಾರ್ಥನೆ

|

Updated on: Feb 28, 2021 | 2:44 PM

ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ತೇರುಮಲ್ಲೇಶ್ವರ ರಥೋತ್ಸವದಲ್ಲಿ RCB ಫ್ಯಾನ್ಸ್ RCB ಗೆಲುವಿಗಾಗಿ ರಥದ ಮೇಲೆ ಬಾಳೆಹಣ್ಣು ತೂರಿದ್ದಾರೆ. ಆದ್ರೆ ವಿಶೇಷ ಅಂದ್ರೆ ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ, ಜೈ RCB’ ಎಂದು ಬರೆಯಲಾಗಿದೆ.

‘ಈ ಸಲ ಕಪ್ ನಮ್ದೆ’ ರಥದ ಮೇಲೆ ಬಾಳೆಹಣ್ಣು ತೂರಿ ಅಭಿಮಾನಿ ಪ್ರಾರ್ಥನೆ
ಬಾಳೆಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ರಥದ ಮೇಲೆ ತೂರಿದ ಅಭಿಮಾನಿ
Follow us on

ಚಿತ್ರದುರ್ಗ: ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ RCB ಗೆಲ್ಲುತ್ತೆ. ‘ಈ ಸಲ ಕಪ್ ನಮ್ದೆ’ ಎಂದು RCB ಫ್ಯಾನ್ಸ್ ಎಲ್ಲಾ ಕಡೆ ಹೇಳಿಕೊಂಡು ಸುತ್ತಾಡ್ತಿದ್ರು. ಹಾಡಿ ಕುಣಿತಿದ್ರು ಆದ್ರೆ ಕಳೆದ 14 ವರ್ಷಗಳಿಂದ RCB ತಂಡ ಗೆಲುವಿನ ಕೊನೆ ಹಂತಕ್ಕೆ ತಲುಪಿ ಸೋಲನ್ನು ಅನುಭವಿಸುತ್ತಿದೆ. ಹೀಗಾಗಿ ಅಭಿಮಾನಿಯೊಬ್ಬ RCB ಗೆಲ್ಲುವಂತೆ ವಿಭಿನ್ನವಾಗಿ ಪ್ರಾರ್ಥನೆ ಸಲ್ಲಿಸಿದ್ದಾನೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ತೇರುಮಲ್ಲೇಶ್ವರ ರಥೋತ್ಸವದಲ್ಲಿ RCB ಫ್ಯಾನ್ಸ್ RCB ಗೆಲುವಿಗಾಗಿ ರಥದ ಮೇಲೆ ಬಾಳೆಹಣ್ಣು ತೂರಿದ್ದಾರೆ. ಆದ್ರೆ ವಿಶೇಷ ಅಂದ್ರೆ ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ, ಜೈ RCB’ ಎಂದು ಬರೆಯಲಾಗಿದೆ. ಈ ರೀತಿ ಬರೆದ ಬಾಳೆಹಣ್ಣಿನ ಜೊತೆಗೆ ಹತ್ತು ರೂಪಾಯಿ ಹಣ ಇಟ್ಟು ಎರಡೂ ಕೈಗಳಿಂದ ತೇರಿಗೆ ನಮಿಸಿ, RCB ಗೆಲುವಿಗೆ ಪ್ರಾರ್ಥಿಸಿ ಬಾಳೆಹಣ್ಣನ್ನು ತೇರಿನ ಮೇಲೆ ಎಸೆದಿದ್ದಾರೆ. ಇದೀಗ RCB ಫ್ಯಾನ್ಸ್ ಪ್ರಾರ್ಥನೆ ಸಲ್ಲಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಬಾಳೆಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ರಥದ ಮೇಲೆ ತೂರಿದ ಅಭಿಮಾನಿ

ಬಾಳೆಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ರಥದ ಮೇಲೆ ತೂರಿದ ಅಭಿಮಾನಿ

ಇದನ್ನೂ ಓದಿ: IPL Auction 2021: ಚೆಂಡಿರೋದೆ ಚಚ್ಚುವುದಕ್ಕೆ ಧೋರಣೆಯ ಅಜರುದ್ದೀನ್ 2021 ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿಗೆ ಆಡುತ್ತಾರೆ!

Published On - 2:40 pm, Sun, 28 February 21