ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ
ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ನಿಯಮಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಸಾಕಷ್ಟು ಸಡಿಲಿಕೆಯಾಗಿದೆ. ಆದ್ರೆ ರಾಜ್ಯದಲ್ಲಿ ಲಾಕ್‌ಡೌನ್ ನಿಯಮ ರೆಡ್ ಜೋನ್, ಕಂಟೇನ್‌ಮೆಂಟ್ ಜೋನ್, ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸಲ್ಲ. ಕೆಳಗಿನ ಕ್ಷೇತ್ರಗಳಿಗೆ ಸಡಿಲಿಕೆ ಅನ್ವಯಿಸಲಿದೆ -ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ಸ್ -ಪ್ಲಂಬರ್ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣ ಘಟಕ -ಪ್ಯಾಕೇಜಿಂಗ್ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ -ಅಗತ್ಯ ವಸ್ತುಗಳ ಆನ್ಲೈನ್ ಡೆಲಿವರಿಗೆ ವಿನಾಯ್ತಿ […]
ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ನಿಯಮಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಸಾಕಷ್ಟು ಸಡಿಲಿಕೆಯಾಗಿದೆ. ಆದ್ರೆ ರಾಜ್ಯದಲ್ಲಿ ಲಾಕ್‌ಡೌನ್ ನಿಯಮ ರೆಡ್ ಜೋನ್, ಕಂಟೇನ್‌ಮೆಂಟ್ ಜೋನ್, ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸಲ್ಲ.
ಕೆಳಗಿನ ಕ್ಷೇತ್ರಗಳಿಗೆ ಸಡಿಲಿಕೆ ಅನ್ವಯಿಸಲಿದೆ -ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ಸ್ -ಪ್ಲಂಬರ್ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣ ಘಟಕ -ಪ್ಯಾಕೇಜಿಂಗ್ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ -ಅಗತ್ಯ ವಸ್ತುಗಳ ಆನ್ಲೈನ್ ಡೆಲಿವರಿಗೆ ವಿನಾಯ್ತಿ ಲಭ್ಯವಾಗಿದೆ.
ಆಟೋ, ಕ್ಯಾಬ್, ಚಿತ್ರಮಂದಿರ, ಮಾಲ್ಗಳು ಇರುವುದಿಲ್ಲ -ಬೆಂಗಳೂರಿನಲ್ಲಿ ರಸ್ತೆಗಿಳಿಯಲ್ಲ ಬಿಎಂಟಿಸಿ ಬಸ್ -ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಸಂಚಾರ ಕೂಡ ಸ್ಥಗಿತ -ಬೆಂಗಳೂರಿನಲ್ಲಿ ಮೆಟ್ರೋ ಟ್ರೈನ್ ಸಂಚಾರ ಇರಲ್ಲ -ಬೆಂಗಳೂರಿನಲ್ಲಿ ಚಿತ್ರಮಂದಿರ, ಮಾಲ್, ಸಲೂನ್ ,ಜಿಮ್ ಬಂದ್ -ಬಸ್, ರೈಲು, ಮೆಟ್ರೋ, ವಿಮಾನ ಸಂಚಾರಕ್ಕೆ ಅವಕಾಶವಿಲ್ಲ -ಧಾರ್ಮಿಕ ಸಭೆ-ಸಮಾರಂಭಗಳು, ಜನಸೇರಲು ನಿರ್ಬಂಧ
ಎಸ್ಎಸ್ಎಲ್ಸಿ, PUC ಪರೀಕ್ಷೆ ಇನ್ನೂ ಡೋಲಾಯಮಾನ -ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ನಿಯಮ ಸಡಿಲಿಕೆ -ಹೋಟೆಲ್ಗಳಲ್ಲಿ ಕುಳಿತು ಊಟ ಮಾಡಲು ಅವಕಾಶವಿಲ್ಲ -ಹೋಟೆಲ್ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅನುಮತಿ -ಶಾಲಾ ಕಾಲೇಜುಗಳ ಮೇಲಿನ ನಿರ್ಬಂಧ ಮುಂದುವರಿಕೆ -ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ರಸ್ತೆಗಿಳಿಯುವುದಿಲ್ಲ -ಕೇಬಲ್, ಡಿಟಿಹೆಚ್ ಆಪರೇಟರ್ಗಳ ಸಂಚಾರಕ್ಕಿಲ್ಲ ಅಡೆತಡೆ -ಈಗಿನಂತೆಯೇ ತುರ್ತುಸ್ಥಿತಿಯಲ್ಲಿ ಸಂಚಾರಕ್ಕೆ ಪಾಸ್ ಅತ್ಯಗತ್ಯ -ಆರೋಗ್ಯ ಸೇವೆಗಳು, ಇತರೆ ತುರ್ತು ಸೇವೆಗಳು ಯಥಾಸ್ಥಿತಿ
Published On - 3:31 pm, Wed, 22 April 20