ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ನಿಯಮಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಸಾಕಷ್ಟು ಸಡಿಲಿಕೆಯಾಗಿದೆ. ಆದ್ರೆ ರಾಜ್ಯದಲ್ಲಿ ಲಾಕ್‌ಡೌನ್‌ ನಿಯಮ ರೆಡ್‌ ಜೋನ್, ಕಂಟೇನ್‌ಮೆಂಟ್ ಜೋನ್‌, ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸಲ್ಲ. ಕೆಳಗಿನ ಕ್ಷೇತ್ರಗಳಿಗೆ ಸಡಿಲಿಕೆ ಅನ್ವಯಿಸಲಿದೆ -ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ಸ್ -ಪ್ಲಂಬರ್​ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣ ಘಟಕ -ಪ್ಯಾಕೇಜಿಂಗ್​ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ -ಅಗತ್ಯ ವಸ್ತುಗಳ ಆನ್​ಲೈನ್​ ಡೆಲಿವರಿಗೆ ವಿನಾಯ್ತಿ […]

ಇಂದು ಮಧ್ಯರಾತ್ರಿಯಿಂದಲೇ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ
ಸಿಎಂ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: Apr 22, 2020 | 4:19 PM

ಬೆಂಗಳೂರು: ಕೊರೊನಾ ವಿರುದ್ಧದ ಯುದ್ಧದಲ್ಲಿ ಜಾರಿಗೆ ತರಲಾಗಿದ್ದ ಲಾಕ್‌ಡೌನ್ ನಿಯಮಗಳಲ್ಲಿ ಇಂದು ಮಧ್ಯರಾತ್ರಿಯಿಂದಲೇ ಕರ್ನಾಟಕದಲ್ಲಿ ಸಾಕಷ್ಟು ಸಡಿಲಿಕೆಯಾಗಿದೆ. ಆದ್ರೆ ರಾಜ್ಯದಲ್ಲಿ ಲಾಕ್‌ಡೌನ್‌ ನಿಯಮ ರೆಡ್‌ ಜೋನ್, ಕಂಟೇನ್‌ಮೆಂಟ್ ಜೋನ್‌, ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸಡಿಲಿಕೆ ಅನ್ವಯಿಸಲ್ಲ.

ಕೆಳಗಿನ ಕ್ಷೇತ್ರಗಳಿಗೆ ಸಡಿಲಿಕೆ ಅನ್ವಯಿಸಲಿದೆ
-ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ಸ್
-ಪ್ಲಂಬರ್​ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣ ಘಟಕ
-ಪ್ಯಾಕೇಜಿಂಗ್​ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ
-ಅಗತ್ಯ ವಸ್ತುಗಳ ಆನ್​ಲೈನ್​ ಡೆಲಿವರಿಗೆ ವಿನಾಯ್ತಿ ಲಭ್ಯವಾಗಿದೆ.

ಆಟೋ, ಕ್ಯಾಬ್, ಚಿತ್ರಮಂದಿರ, ಮಾಲ್​ಗಳು ಇರುವುದಿಲ್ಲ
-ಬೆಂಗಳೂರಿನಲ್ಲಿ ರಸ್ತೆಗಿಳಿಯಲ್ಲ ಬಿಎಂಟಿಸಿ ಬಸ್
-ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಸಂಚಾರ ಕೂಡ ಸ್ಥಗಿತ
-ಬೆಂಗಳೂರಿನಲ್ಲಿ ಮೆಟ್ರೋ ಟ್ರೈನ್ ಸಂಚಾರ ಇರಲ್ಲ
-ಬೆಂಗಳೂರಿನಲ್ಲಿ ಚಿತ್ರಮಂದಿರ, ಮಾಲ್​, ಸಲೂನ್ ,ಜಿಮ್ ಬಂದ್
-ಬಸ್​, ರೈಲು, ಮೆಟ್ರೋ, ವಿಮಾನ ಸಂಚಾರಕ್ಕೆ ಅವಕಾಶವಿಲ್ಲ
-ಧಾರ್ಮಿಕ ಸಭೆ-ಸಮಾರಂಭಗಳು, ಜನಸೇರಲು ನಿರ್ಬಂಧ

ಎಸ್​ಎಸ್​ಎಲ್​ಸಿ, PUC ಪರೀಕ್ಷೆ ಇನ್ನೂ ಡೋಲಾಯಮಾನ
-ಇಂದು ಮಧ್ಯರಾತ್ರಿಯಿಂದಲೇ ಲಾಕ್‌ಡೌನ್ ನಿಯಮ ಸಡಿಲಿಕೆ
-ಹೋಟೆಲ್​ಗಳಲ್ಲಿ ಕುಳಿತು ಊಟ ಮಾಡಲು ಅವಕಾಶವಿಲ್ಲ
-ಹೋಟೆಲ್​ಗಳಲ್ಲಿ ಪಾರ್ಸೆಲ್​ ಸೇವೆಗೆ ಮಾತ್ರ ಅನುಮತಿ
-ಶಾಲಾ ಕಾಲೇಜುಗಳ ಮೇಲಿನ ನಿರ್ಬಂಧ ಮುಂದುವರಿಕೆ
-ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯುವುದಿಲ್ಲ
-ಕೇಬಲ್​, ಡಿಟಿಹೆಚ್​ ಆಪರೇಟರ್​ಗಳ ಸಂಚಾರಕ್ಕಿಲ್ಲ ಅಡೆತಡೆ
-ಈಗಿನಂತೆಯೇ ತುರ್ತುಸ್ಥಿತಿಯಲ್ಲಿ ಸಂಚಾರಕ್ಕೆ ಪಾಸ್​ ಅತ್ಯಗತ್ಯ
-ಆರೋಗ್ಯ ಸೇವೆಗಳು, ಇತರೆ ತುರ್ತು ಸೇವೆಗಳು ಯಥಾಸ್ಥಿತಿ

 

Published On - 3:31 pm, Wed, 22 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us