ಇತಿಹಾಸ ಪ್ರಸಿದ್ಧ ಸ್ಮಾರಕದ ಸ್ಥಳಾಂತರ: ಪುನರುತ್ಥಾನ ಪಡೆದ ಈ ಸ್ಮಾರಕ ಈಗ ಹೇಗಿದೆ ಗೊತ್ತಾ?

ಟಿಪ್ಪುವಿನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ಈ ಮದ್ದಿನ ಮನೆಯ ನಿರ್ಮಾಣಕ್ಕೆ ಚುರಕಿ ಗಾರೆ ಬಳಸಲಾಗಿದೆ. ಚುರಕಿಗಾರೆ ಎಂದರೆ ಸುಣ್ಣದ ಕಲ್ಲು, ಇಟ್ಟಿಗೆ, ಮರಳು ಮಿಶ್ರಣದಿಂದ ಕೂಡಿದ ಗಾರೆಯನ್ನ ಬಳಕೆ ಮಾಡಿ ಷಟ್​ಕೋನಾಕೃತಾ (ಆರು ಕೋನಾ) ನಿರ್ಮಿಸುವುದಾಗಿದೆ.

ಇತಿಹಾಸ ಪ್ರಸಿದ್ಧ ಸ್ಮಾರಕದ ಸ್ಥಳಾಂತರ: ಪುನರುತ್ಥಾನ ಪಡೆದ ಈ ಸ್ಮಾರಕ ಈಗ ಹೇಗಿದೆ ಗೊತ್ತಾ?
ಸ್ಥಳಾಂತರಗೊಂಡ ಸ್ಮಾರಕ
Follow us
preethi shettigar
| Updated By: ಪೃಥ್ವಿಶಂಕರ

Updated on: Dec 30, 2020 | 7:47 AM

ಮಂಡ್ಯ: ಹದಿನೇಳನೆ ಶತಮಾನದಲ್ಲಿ ನಿರ್ಮಾಣವಾದ ಸ್ಮಾರಕವನ್ನು ಸ್ಥಳಾಂತರಿಸಲು 10 ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. 13.60 ಕೋಟಿ ರೂಪಾಯಿ ವೆಚ್ಚದಲ್ಲಿ 3 ವರ್ಷಗಳ ಹಿಂದೆ ಈ ಸ್ಮಾರಕ ಸ್ಥಳಾಂತರಗೊಂಡಿದೆ. ಇತಿಹಾಸ ಪ್ರಸಿದ್ಧ ಸ್ಮಾರಕದ ಸ್ಥಳಾಂತರಕ್ಕೆ ಅಮೇರಿಕಾ ಹಾಗೂ ಭಾರತೀಯ ಎಂಜಿನಿಯರ್​ಗಳು ಶ್ರಮವಹಿಸಿದರು. ಇಂಥ ಪ್ರಕ್ರಿಯೆ ಭಾರತದಲ್ಲಿ ಇದೇ ಮೊದಲು ಎನ್ನುವುದು ಹೆಮ್ಮೆಯ ವಿಚಾರ. ಎಲ್ಲಾ ಅಡೆತಡೆಗಳನ್ನ ನಿವಾರಿಸಿಕೊಂಡು ತಾನಿದ್ದ ಸ್ಥಳದಿಂದ 100 ಮೀಟರ್​ನಷ್ಟು ಅಂತರದಲ್ಲಿ ಸ್ಥಳಾಂತರಗೊಂಡಿರುವ ಈ ಸ್ಮಾರಕ ಈಗ ಹೇಗಿದೆ? ಅದರ ಹಿಂದಿನ ಕಥೆ ಏನು? ಎನ್ನುವ ವಿವರ ಇಲ್ಲಿದೆ.

ಮೈಸೂರು -ಬೆಂಗಳೂರು ನಡುವೆ ಸಂಚರಿಸುತ್ತಿದ್ದ ರೈಲು ಗಾಡಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ 10 ವರ್ಷಗಳ ಹಿಂದೆಯೇ ಈ ಮಾರ್ಗದಲ್ಲಿ ಜೋಡಿ ರೈಲು ಮಾರ್ಗ ನಿರ್ಮಾಣವಾಗಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಅದರಂತೆ ಈ 2 ನಗರಗಳ ನಡುವೆ ಜೋಡಿ ರೈಲು ಮಾರ್ಗ ನಿರ್ಮಿಸಲು ಮುಂದಾದ ಸರ್ಕಾರ ರೈತರಿಂದಲೂ ಇದಕ್ಕೆ ಬೇಕಾದ ಅಗತ್ಯ ಭೂಮಿಯನ್ನು ಖರೀದಿಸಿ ಯೋಜನೆಯನ್ನು ಆರಂಭಿಸಿಯೇ ಬಿಟ್ಟಿತು. ಯೋಜನೆ ಇನ್ನೇನು ಆರಂಭವಾಯಿತು ಎನ್ನುವಷ್ಟರಲ್ಲಿ ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣ ಸಮೀಪದಲ್ಲಿದ್ದ ಪುರಾತನ ಕಾಲದ ಸ್ಮಾರಕ ಅಡ್ಡಗಾಲಾಗಿತ್ತು. ಸ್ಮಾರಕವನ್ನು ಒಡೆದು ಜೋಡಿ ರೈಲು ಮಾರ್ಗ ನಿರ್ಮಿಸುವುದು ಅಥವಾ ಸ್ಮಾರಕವನ್ನ ಸ್ಥಳಾಂತರಿಸುವ ಆಯ್ಕೆಗಳು ಸರ್ಕಾರದ ಮುಂದಿತ್ತು. ಸ್ಮಾರಕವನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚಿಸಿದ ಸರ್ಕಾರ ಅದನ್ನು ಯಥಾಸ್ಥಿತಿಯಲ್ಲಿಯೇ ಬೇರೆ ಕಡೆಗೆ ಸ್ಥಳಾಂತರಿಸುವ ಯೋಜನೆಯನ್ನು ಸಿದ್ಧಪಡಿಸಿತು.

ರಾಜ್ಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿದ್ದ ಸ್ಮಾರಕವನ್ನು ಯಥಾಸ್ಥಿತಿಯಲ್ಲಿಯೇ ಸ್ಥಳಾಂತರ ಮಾಡುವ ನೀಲನಕ್ಷೆಯನ್ನು ಸಿದ್ಧಮಾಡಿಕೊಳ್ಳಲಾಗಿತ್ತು. ಅದರಂತೆ ಸ್ಕಿಪ್ಪಿಂಗ್ ಮೆಥಡ್​ನಲ್ಲಿ ಸ್ಥಳಾಂತರ ಮಾಡಲು ಮುಂದೆ ಬಂದ ಅಮೆರಿಕಾದ ಉಲ್ಫೆ, ಭಾರತರ ಪಿಎಸ್ಎಲ್ ಕಂಪನಿಗಳು 13.60 ಕೋಟಿ ರೂಪಾಯಿ ವೆಚ್ಚದ ಟೆಂಡರ್ ಒಪ್ಪಿಕೊಂಡು 3 ವರ್ಷಗಳ ಹಿಂದೆ ಸ್ಮಾರಕವನ್ನು ಸ್ಥಳಾಂತರ ಮಾಡಿಯೇಬಿಟ್ಟರು.

ಸ್ಮಾರಕ ಸ್ಥಳಾಂತರಗೊಂಡ ನಂತರ ನಿರ್ಮಾಣವಾದ ರೈಲ್ವೆ ಮಾರ್ಗ

ಈ ಸಂಸ್ಥೆಗಳ ಜೊತೆಗೆ ಬೆಂಗಳೂರಿನ ಡೈನಮಿಕ್ ಎಂಜನೀಯರ್ ಕಂಪನಿಯ ತಜ್ಞರ ತಂಡವು ಇಲ್ಲಿ ಕೆಲಸ ಮಾಡಿದ್ದು, ಬೆಂಗಳೂರು- ಮೈಸೂರು ನಡುವೆ ಜೋಡಿ ರೈಲು ಮಾರ್ಗವು ಪೂರ್ಣಗೊಂಡು ರೈಲುಗಳ ಓಡಾಟವೂ ಆರಂಭವಾಗಿದೆ. ಈ ಬಗೆಗೆ ನಮಗೆ ಹೆಮ್ಮೆ ಇದೆ ಎಂದು ಶ್ರೀರಂಗಪಟ್ಟಣದ ಜನ ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಮಾರಕದ ದೃಶ್ಯ

ಈ ಸ್ಮಾರಕವನ್ನು ಮದ್ದಿನ ಮನೆ ಎಂದು ಕರೆಯುತ್ತಿದ್ದರು. ಸ್ಥಳಾಂತರಿಸಲು ಒಪ್ಪಿಕೊಂಡ ಅಮೇರಿಕಾದ ಉಲ್ಫೆ ಹಾಗೂ ಭಾರತದ ಪಿಎಸ್ಎಲ್ ಕಂಪನಿಗಳ ಜೊತೆಗೆ ಬೆಂಗಳೂರಿನ ಡೈನಾಮಿಕ್ ಎಂಜಿನಿಯರ್ ಸಂಸ್ಥೆಯ ಸಿಬ್ಬಂದಿ ಸ್ಮಾರಕದ ಸ್ಥಳಾಂತರದ ಬಗೆಗೆ ರೂಪುರೇಷೆ ನಿರ್ಧರಿಸಿ ಹಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಶ್ರಮವನ್ನು ಹಾಕಿದ್ದು, ಸ್ಮಾರಕದ ಸುತ್ತಲೂ 12 ಅಡಿಯವರೆಗೆ ಮಣ್ಣು ತೆರವುಗೊಳಿಸಲಾಗಿದೆ. ಡೈಮಂಡ್ ವಯರ್ ಸಾಯಿಂಗ್ ಮಿಷನ್ ಬಳಸಿ 1.2 ಮಿ. ಮೀಟರ್ ದಪ್ಪದ ಗೋಡೆಯನ್ನು ಕೊರೆದು ರಂದ್ರ ಮಾಡಿದ್ದಾರೆ.

ಸ್ಥಳಾಂತರಗೊಳ್ಳುತ್ತಿರುವ ಸ್ಮಾರಕದ ಚಿತ್ರಣ

ಮದ್ದಿನ ಮನೆಯ ಸ್ಥಳಾಂತರ ಸುತ್ತಲೂ 40 ಕ್ಕೂ ಹೆಚ್ಚು ಬಾಕ್ಸ್​ಗಳನ್ನು ನಿರ್ಮಿಸಲಾಗಿತ್ತು. ಹೀಗೆ ಗೋಡೆಗಳನ್ನ ಕೊರೆದ ನಂತರ ಅದರಲ್ಲಿ ಕಬ್ಬಿಣದ ಬೀಮ್​ಗಳನ್ನು ನಿರ್ಮಾಣ ಮಾಡಿ ಅವುಗಳಲ್ಲಿ 3 ಮ್ಯೇನ್ ಬೀಮ್, 9 ಸೆಂಟರ್ ಬೀಮ್​ಗಳು, 12 ಕ್ರಾಸ್ ಬೀಮ್​ಗಳನ್ನ ಬಳಸಿಕೊಂಡು ಎಲ್ಲಾ 40 ಬಾಕ್ಸ್​ಗಳಿಗೂ ಜಾಯಿಂಟ್ ಮಾಡಲಾಗಿತ್ತು. ಇದರ ಜೊತೆಗೆ ಮದ್ದಿನ ಮನೆಯ ಕೆಳಭಾಗದಲ್ಲಿ ತಲಾ 360 ಕೆ.ಜಿಯಷ್ಟು ತೂಕದ 37 ಹೈಡ್ರಾಲಿಕ್ ಜಾಕ್​ಗಳನ್ನ ಬಳಸಿ ಮದ್ದಿನ ಮನೆಯನ್ನ ತಳಪಾಯದಿಂದ ಇರುವ ಸ್ಥಿತಿಯಲ್ಲಿಯೇ ಒಂದು ಅಡಿಯಷ್ಟು ಮೇಲಕ್ಕೆ ತಂದು ಕಬ್ಬಿಣದ ಬೀಮ್​ಗಳ ಮೇಲೆ ಕೂರಿಸಿ ನಂತರ ನಿಧಾನವಾಗಿ ಸ್ಥಳಾಂತರಗೊಳಿಸಲಾಗಿತ್ತು.

ಸ್ಮಾರಕ ಸ್ಥಳಾಂತರದ ನೀಲಿ ನಕ್ಷೆ

ಚುರಕಿ ಗಾರೆಯಿಂದ ನಿರ್ಮಾಣವಾಗಿರುವ ಸ್ಮಾರಕ: ಟಿಪ್ಪುವಿನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿರುವ ಈ ಮದ್ದಿನ ಮನೆಯ ನಿರ್ಮಾಣಕ್ಕೆ ಚುರಕಿ ಗಾರೆ ಬಳಸಲಾಗಿದೆ. ಚುರಕಿಗಾರೆ ಎಂದರೆ ಸುಣ್ಣದ ಕಲ್ಲು, ಇಟ್ಟಿಗೆ, ಮರಳು ಮಿಶ್ರಣದಿಂದ ಕೂಡಿದ ಗಾರೆಯನ್ನ ಬಳಕೆ ಮಾಡಿ ಷಟ್​ಕೋನಾಕೃತಾ (ಆರು ಕೋನಾ) ನಿರ್ಮಿಸುವುದಾಗಿದೆ. ಸುಮಾರು 1000 ಟನ್ ತೂಕವಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿದ್ದ ಈ ಮದ್ದಿನ ಮನೆಯನ್ನು ಇರುವ ಸ್ಥಿತಿಯಲ್ಲಿಯೇ 100 ಮೀಟರ್​ನಷ್ಟು ಪಕ್ಕಕ್ಕೆ ಸರಿಸಲಾಗಿದೆ. ಈಗ ಸ್ಮಾರಕ ಮೊದಿದ್ದ ಸ್ಥಿತಿಯಲ್ಲಿಯೇ ಇದ್ದು ಜೋಡಿ ರೈಲು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇದರ ಸೌಂದರ್ಯವನ್ನು ನೋಡಬಹುದಾಗಿದೆ.

ಕುಂದಾನಗರಿ ಬೆಳಗಾವಿಯಲ್ಲಿ ತಲೆ ಎತ್ತಲಿದೆ ಸೈನಿಕ ಸ್ಮಾರಕ..

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ