ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಉದಯನಿಧಿ ಸ್ಟಾಲಿನ್​​ಗೆ ಷರತ್ತುಬದ್ಧ ಜಾಮೀನು

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಉದಯನಿಧಿ ಸ್ಟಾಕಿನ್​ ಸನಾತನ ಧರ್ಮ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಪರಮೇಶ್ ಎಂಬುವರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ವಿಚಾರಣೆಯನ್ನು ಅಗಸ್ಟ್​ 8ಕ್ಕೆ ಮುಂದೂಡಿದೆ.

ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಉದಯನಿಧಿ ಸ್ಟಾಲಿನ್​​ಗೆ ಷರತ್ತುಬದ್ಧ ಜಾಮೀನು
ಸಚಿವ ಉದಯನಿಧಿ ಸ್ಟಾಲಿನ್
Follow us
| Updated By: ವಿವೇಕ ಬಿರಾದಾರ

Updated on: Jun 25, 2024 | 1:40 PM

ಬೆಂಗಳೂರು, ಜೂನ್​ 25: ಸನಾತನ ಧರ್ಮದ (Sanatan Dharma) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ (Udaynidhi Stalin) ಅವರಿಗೆ ​​​ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ​​ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ (Court) ಆದೇಶ ಹೊರಡಿಸಿದೆ.

ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್​ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪರಮೇಶ್​ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್​ ಜಾರಿ ಮಾಡಿತ್ತು. ಇಂದು (ಜೂ.25) ಉದಯನಿಧಿ ಸ್ಟಾಲಿನ್​ ನ್ಯಾಯಾಲಯಕ್ಕೆ ಜಾರಾಗಿದ್ದರು.

ಈ ವೇಳೆ ನ್ಯಾಯಾಲಯ ಪ್ರಕರಣದ ಉಳಿದ ಆರೋಪಿಗಳು ಎಲ್ಲಿ ಎಂದು ನ್ಯಾಯಾಧೀಶರ ಪ್ರಶ್ನೆ ಮಾಡಿದರು. ಇದಕ್ಕೆ ಉದಯನಿಧಿ ಸ್ಟಾಲಿನ್​ ಪರ ಹಿರಿಯ ವಕೀಲ ವಿಲ್ಸನ್ ಉತ್ತರಿಸಿ, ಉದಯನಿಧಿ ಸ್ಟಾಲಿನ್​ ಅವರಿಗೆ ಪ್ರಕರಣದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ‌ ನೀಡಬೇಕು. ದೇಶಾದ್ಯಂತ ಏಳು ಪ್ರಕರಣಗಳು ದಾಖಲಾಗಿವೆ. ಸ್ಟಾಲಿನ್​​ ಅವರು ಒಂದು ರಾಜ್ಯದ ಕ್ರೀಡಾ ಸಚಿವ. ಹೀಗಾಗಿ, ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ‌ ನೀಡಬೇಕು. ಸುಪ್ರೀಂ ಕೋರ್ಟ್​ನಿಂದ ಅವರಿಗೆ ವಿನಾಯಿತಿ ಸಿಕ್ಕಿದೆ. ಇನ್ನೂ ಅದೇಶದ ಪ್ರತಿ ಲಭ್ಯವಾಗಿಲ್ಲ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕಾದಟು: ತಮಿಳುನಾಡು ಸಿಎಂ ಸ್ಟಾಲಿನ್​ ವಿರುದ್ಧ ವಾಟಾಳ್​​ ಗರಂ

ವಕೀಲರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ವಿಚಾರಣೆಯನ್ನು ಆಗಸ್ಟ್​ 8ಕ್ಕೆ ಮುಂದೂಡಿತು. ಇದರ ಒಳಗಾಗಿ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಸಲ್ಲಿಕೆ ಮಾಡುವಂತೆ ಸೂಚಿಸಿತು. ಹಾಗೂ ಉದಯನಿಧಿ ಅವರಿಹೆ 1 ಲಕ್ಷ ಬಾಂಡ್​ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣದ ಹಿನ್ನೆಲೆ

ಕಳೆದ ವರ್ಷ ಸೆಪ್ಟೆಂಬರ್​ 4ರಂದು ಚೆನ್ನೈನ ತೇನಂಪೇಟೆಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಹಾಗೂ ಕರೋನಾ ಇದ್ದಂತೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿರುವ ಸನಾನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು, ಹಿಂದೂ ಸಂಘಟನೆಗಳು ಖಂಡಿಸಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ