ಕೈದಿಯಾಗಿ ನಟಿಸಿದ್ದ ಜೈಲಿಗೆ ಅಸಲಿ ಕೈದಿಯಾಗಿ ದರ್ಶನ್​ ಶಿಫ್ಟ್? ಕುಟುಂಬ, ಆಪ್ತರಿಂದ ದೂರ

Bellary Central Jail: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್​ ಒಟ್ಟೊಟ್ಟಿಗೆ ಕೂತು ಕಾಫೀ ಹೀರುತ್ತಾ, ಸಿಗರೇಟ್ ಶೇರ್ ಮಾಡಿರೋ ಫೋಟೋ ವೈರಲ್ ಆಗಿದೆ. ಇದು ದೊಡ್ಡ ಸಂಚಲನ ಎಬ್ಬಿಸಿದೆ. ಇದರ ಬೆನ್ನಲ್ಲೇ ಇದೀಗ ದರ್ಶನನನ್ನೇ ಬೇರೆ ಜೈಲಿಗೆ ಶಿಫ್ಟ್​ ಮಾಡಲಾಗುತ್ತಿದೆ. ಕೈದಿಯಾಗಿ ನಟಿಸಿದ್ದ ಜೈಲಿಗೆ ದರ್ಶನ ಇದೀಗ ಅಸಲಿ ಕೈದಿಯಾಗಿ ಬಳ್ಳಾರಿ ಜೈಲಿಗೆ ಹೋಗುವ ಸಾಧ್ಯತೆಗಳಿವೆ.

ಕೈದಿಯಾಗಿ ನಟಿಸಿದ್ದ ಜೈಲಿಗೆ ಅಸಲಿ ಕೈದಿಯಾಗಿ ದರ್ಶನ್​ ಶಿಫ್ಟ್? ಕುಟುಂಬ, ಆಪ್ತರಿಂದ ದೂರ
ಬಳ್ಳಾರಿ ಜೈಲು

Updated on: Aug 27, 2024 | 5:06 PM

ಬೆಂಗಳೂರು/ಬಳ್ಳಾರಿ, (ಆಗಸ್ಟ್ 27): ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್​ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡೋ ಬಗ್ಗೆ ಸಿಎಂಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ದರ್ಶನ್ ಸ್ಥಳಾಂತರ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ದರ್ಶನ್ ವಿಲ್ಸನ್ ಗಾರ್ಡ್​ ನಾಗ ಸೇರಿದಂತೆ 18 ಆರೋಪಿಗಳನ್ನು ಬಳ್ಳಾರಿ ಸೆಂಟ್ರಲ್ ಜೈಲು ಹಾಗೂ ಬೆಳಗಾವಿ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದಾರೆ. ನಿನ್ನೆ ಅಷ್ಟೇ ದರ್ಶನ್​ನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್​ ಮಾಡಲಾಗುತ್ತೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಇದೀಗ ಬಳ್ಳಾರಿ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಇನ್ನು ಅತ್ತ ಬಳ್ಳಾರಿಯಲ್ಲಿ ಜೈಲಿನಲ್ಲಿ ಅಧಿಕಾರಿಗಳು ಅಲರ್ಟ್​ ಆಗಿದ್ದಾರೆ.

ಯಾವುದೇ ಕ್ಷಣದಲ್ಲಿ ಬೇಕಾದರೂ ದರ್ಶನ್​ನನ್ನು ಕರೆತರಬಹುದು ಎಂದು ಬಳ್ಳಾರಿ ಸೆಂಟ್ರಲ್ ಜೈಲ್​ ಅಧಿಕಾರಿಗಳು ಅಲರ್ಟ್​ ಆಗಿದ್ದು, ಜೈಲ್ ನಲ್ಲಿ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ. 9 ಬ್ಯಾರಕ್ ಗಳಿರುವ ಬಳ್ಳಾರಿ ಜೈಲಿನಲ್ಲಿ ಸದ್ಯ 385 ಕೈದಿಗಳಿದ್ದಾರೆ. ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯ ಜೊತೆಗೆ ಸಿಸಿ ಕ್ಯಾಮರಾಗಳ ಕಣ್ಗಾವಲಿದೆ. ಜೈಲಿನಲ್ಲಿ ಅಟ್ಯಾಚ್ ಬಾತ್ ರೂಂ ಇರುವ ಸೆಲ್ ಗಳಿದ್ದು, ಅವೇ ಸೆಲ್ ಗಳಲ್ಲಿ ದರ್ಶನ್ ಅವರನ್ನ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Hindalga Jail: ಹಿಂಡಲಗಾ ಜೈಲ್​: ದರ್ಶನ್​ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?

ಕೈದಿಯಾಗಿ ನಟಿಸಿದ್ದ ಜೈಲಿಗೆ ಅಸಲಿ ಕೈದಿಯಾಗಿ ಶಿಫ್ಟ್?

ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಪಟಾಲಂ ಜೊತೆಗಿದ್ದ ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಆಗೋದು ಪಕ್ಕಾ ಆಗಿದೆ. ಅದರಲ್ಲೂ ತನ್ನದೇ ನಟನೆಯ ಚೌಕ ಸಿನಿಮಾ ಶೂಟಿಂಗ್ ನಡೆದ ಬಳ್ಳಾರಿ ಜೈಲಿಗೆ ದಾಸನ ಸ್ಥಳಾಂತರಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸಿನಿಮಾದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿನ ಕೈದಿಯಾಗೇ ದರ್ಶನ್ ನಟಿಸಿದ್ದ ಎನ್ನುವುದೇ ಕಾಕತಾಳಿಯ.

ಬಳ್ಳಾರಿ ಸೆಂಟ್ರಲ್ ಜೈಲ್ ಬಗ್ಗೆ

ಇನ್ನು ಬಳ್ಳಾರಿ ಸೆಂಟ್ರಲ್​ ಜೈಲ್ ಬಗ್ಗೆ ಹೇಳುವುದಾದರೆ, ​1884ರಲ್ಲಿ ಈ ಜೈಲು ನಿರ್ಮಾಣವಾಗಿದ್ದು, 9 ಬ್ಯಾರಕ್ ಗಳು ವ್ಯವಸ್ಥೆ ಇದೆ. ಪ್ರಸ್ತುತ 385 ಕೈದಿಗಳು ಈ ಜೈಲಿನಲ್ಲಿದ್ದಾರೆ. ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಇದೆ. ಅಲ್ಲದೇ ಅಟ್ಯಾಚ್ ಬಾತ್​ ರೂಂ ಇರುವ ಸೆಲ್ ಗಳಿವೆ. ಇನ್ನು ನಟೋರಿಯಸ್ ಬಚ್ಚಾ ಖಾನ್ ಇದೇ ಜೈಲಿನಲ್ಲಿದ್ದು ಸದ್ಯ ಪೆರೋಲ್ ಮೇಲಿದ್ದಾನೆ.

ಆಪ್ತರು, ಕುಟುಂಬಸ್ಥರಿಂದ ದೂರ

ಹೌದು…ಬೆಂಗಳೂರಿನ ಸೆಂಟ್ರಲ್ ಜೈಲಿರುವ ದರ್ಶನ್​ ನನ್ನು ನೋಡಲು ಹೆಂಡ್ತಿ, ಮಗ, ಸಹೋದರ ಸೇರಿದಂತೆ ಕುಟುಂಬಸ್ಥರು ಅಲ್ಲೇ ಬಂದು ನೋಡಿಕೊಂಡು ಹೋಗುತ್ತಿದ್ದರು. ಅಲ್ಲದೇ ಗೆಳೆಯರು, ಆಪ್ತರು ಸಹ ಅಲ್ಲೇ ಎರಡ್ಮೂರು ಗಂಟೆಗಳಲ್ಲಿ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್​ನನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು.  ಆದ್ರೆ, ಇದೀಗ ದರ್ಶನ್  ನನ್ನು ಬಳ್ಳಾರಿಗೆ ಶಿಫ್ಟ್ ಮಾಡಿದರೆ ಭೇಟಿಯಾಗಲು ಕುಟುಂಬಸ್ಥರಿಗೆ ತೊಂದರೆ ಆಗಲಿದೆ. ನೋಡಬೇಕೆಂದರೆ ಬೆಂಗಳೂರಿನಿಂದ ಬಳ್ಳಾರಿ ವರೆಗೆ ಜರ್ನಿ ಮಾಡಬೇಕಅಗುತ್ತದೆ. ಹಾಗೇ ಮೊದಲಿನಿಂತೆ ಸರಳವಾಗಿರುವುದಿಲ್ಲ. ಬಳ್ಳಾರಿ ಜೈಲಿನಲ್ಲಿ ಕಟ್ಟು ನಿಟ್ಟಿನ ಕ್ರಮವಹಿಸಲಾಗುತ್ತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:04 pm, Tue, 27 August 24