ಗಣರಾಜ್ಯೋತ್ಸವ 2024 ಪರೇಡ್: ಕರ್ನಾಟಕದ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪರೇಡ್ಗೆ ಪ್ರತಿ ವರ್ಷ ಎಲ್ಲಾ ರಾಜ್ಯಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಟ್ಯೋಬ್ಲೋ ಪರಿಕಲ್ಪನೆಯನ್ನು ಕಳುಹಿಸುತ್ತವೆ. ಆಯ್ಕೆ ಸಮಿತಿಯು ಟ್ಯಾಬ್ಲೋಗಳನ್ನು ಆಯ್ಕೆ ಮಾಡುತ್ತದೆ. ಕೆಲವೊಂದನ್ನು ಆಯ್ಕೆ ಮಾಡಿ ಕೆಲವನ್ನು ತಿರಸ್ಕರಿಸಲಾಗುತ್ತಿದೆ. ಈ ಬಾರಿ ಕರ್ನಾಟಕ ನಾಲ್ಕು ವಿಷಯದ ಮೇಲೆ ಪರಿಕಲ್ಪನೆ ಸಲ್ಲಿಸಲಾಗಿದ್ದು, ಎಲ್ಲವೂ ತಿರಸ್ಕೃತಗೊಂಡಿವೆ.
ಬೆಂಗಳೂರು, ಜ.9: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ (Republic Day) ಪರೇಡ್ಗೆ ಪ್ರತಿ ವರ್ಷ ಎಲ್ಲಾ ರಾಜ್ಯಗಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ಟ್ಯೋಬ್ಲೋ ಪರಿಕಲ್ಪನೆಯನ್ನು ಕಳುಹಿಸುತ್ತವೆ. ಆಯ್ಕೆ ಸಮಿತಿಯು ಟ್ಯಾಬ್ಲೋಗಳನ್ನು ಆಯ್ಕೆ ಮಾಡುತ್ತದೆ. ಕೆಲವೊಂದನ್ನು ಆಯ್ಕೆ ಮಾಡಿ ಕೆಲವನ್ನು ತಿರಸ್ಕರಿಸಲಾಗುತ್ತಿದೆ. ಈ ಬಾರಿ ಕರ್ನಾಟಕ (Karnataka Tableau) ನಾಲ್ಕು ವಿಷಯದ ಮೇಲೆ ಪರಿಕಲ್ಪನೆ ಸಲ್ಲಿಸಲಾಗಿದ್ದು, ಎಲ್ಲವೂ ತಿಸ್ಕೃತಗೊಂಡಿವೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಬಾರಿ ಬ್ರಾಂಡ್ ಬೆಂಗಳೂರು, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 ಮತ್ತು ಬೆಂಗಳೂರು ಅಣ್ಣಮ್ಮ ದೇವಿ ದೇವಸ್ಥಾನದ ಥೀಮ್ ಕಲ್ಪನೆಗಳನ್ನು ಆಯ್ಕೆ ಸಮಿತಿಗೆ ಕಳುಹಿಸಿತ್ತು. ಆದರೆ ಎಲ್ಲಾ ನಾಲ್ಕು ಪರಿಕಲ್ಪನೆಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Republic Day: ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಅಗ್ನಿವೀರ್ ವಾಯು ಸೈನಿಕರ ಶಕ್ತಿಪ್ರದರ್ಶನಕ್ಕೆ ಅವಕಾಶ
ಕರ್ನಾಟಕವು ಸತತ 14 ವರ್ಷಗಳಿಂದ ಟ್ಯಾಬ್ಲೋಗಳನ್ನು ಕಳುಹಿಸುತ್ತಿದೆ. ಸತತ 14 ವರ್ಷಗಳಿಂದ ಟ್ಯಾಬ್ಲೋ ವಿಭಾಗದಲ್ಲಿ ಭಾಗವಹಿಸಿದ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 2023 ರ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಟ್ಯಾಬ್ಲೋ ಸಾಗಿತ್ತು.
ಟ್ಯಾಬ್ಲೋಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?
ರಕ್ಷಣಾ ಸಚಿವಾಲಯವು ಕಲೆ, ಸಂಸ್ಕೃತಿ, ಸಂಗೀತ, ಶಿಲ್ಪಕಲೆ, ಚಿತ್ರಕಲೆ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ, ಇತ್ಯಾದಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪರಿಣತಿ ಹೊಂದಿರುವ ತಜ್ಞರ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಟ್ಯಾಬ್ಲೋಗಳನ್ನು ಆಯ್ಕೆ ಮಾಡುತ್ತದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ರಾಜ್ಯಗಳು ಸಲ್ಲಿಸಿದ ಟ್ಯಾಬ್ಲೋ ಪರಿಕಲ್ಪನೆಗಳನ್ನು ಈ ಸಮಿತಿ ಪರಿಶೀಲನೆ ನಡೆಸಿ ಆಯ್ಕೆ ಮಾಡುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:04 pm, Tue, 9 January 24