ಮಂತ್ರಾಲಯ ಮೂಲ ವೃಂದಾವನ ದರ್ಶನಕ್ಕೆ ನಾಳೆಯಿಂದ ಭಕ್ತರಿಗೆ ನಿರ್ಬಂಧ
ಕೊರೊನಾ ಸೋಂಕಿಗೆ ತುತ್ತಾಗಿ ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯರು ಮೃತಪಟ್ಟಿದ್ದಾರೆ. ಸುಯಮೇಂದ್ರಾಚಾರ್ಯರು 2009 ನೇ ಸಾಲಿನಲ್ಲಿ ಶ್ರಿಮಠದ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪ್ರವಾಹದಲ್ಲಿ ನಲುಗಿ ಹೋಗಿದ್ದ ಮಂತ್ರಾಲಯದಲ್ಲಿ ಅಭಿವೃದ್ದಿ ಪರ್ವನೆ ನಡೆಸಿದ್ದರು. ಅವರು ನವ ಮಂತ್ರಾಲಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ರಾಯಚೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ನಾಳೆಯಿಂದ ಮಂತ್ರಾಲಯ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಭಕ್ತಾದಿಗಳಿಗೆ ಕೇವಲ ಆನ್ಲೈನ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ. ರಾಯಚೂರು ಜಿಲ್ಲೆ ಒಂದರಲ್ಲೇ ಇಂದು ಒಂದೇ ದಿನ 733 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಕೊರೊನಾ ಸೋಂಕಿನಿಂದ ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯರು ಮೃತಪಟ್ಟಿದ್ದಾರೆ. ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದು ಟಿವಿ9ಗೆ ಮಠದ ಮ್ಯಾನೇಜರ್ ವೆಂಕಟೇಶಾಚಾರ್ಯ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸುಯಮೇಂದ್ರಾಚಾರ್ಯರು 2009 ನೇ ಸಾಲಿನಲ್ಲಿ ಶ್ರೀ ಮಠದ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪ್ರವಾಹದಲ್ಲಿ ನಲುಗಿಹೋಗಿದ್ದ ಮಂತ್ರಾಲಯದಲ್ಲಿ ಅಭಿವೃದ್ದಿ ಪರ್ವ ನಡೆಸಿದ್ದರು. ಅವರು ನವ ಮಂತ್ರಾಲಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಕರ್ನಾಟಕದಲ್ಲಿ ಇಂದು ಒಂದೇ ದಿನ 48,296 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಇಂದೊಂದೇ ಒಂದೇ ದಿನ ಕೊರೊನಾಗೆ 217 ಜನರು ಸಾವಿಗೀಡಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 26,756 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಇಂದು ಕೊರೊನಾ ಸೋಂಕಿಗೆ 93 ಜನರ ಬಲಿಯಾಗಿದ್ದಾರೆ.
ಇಂದಿನ ಸೋಂಕಿತರ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟಾರೆ ಸಂಖ್ಯೆ 15,23,142ಕ್ಕೇರಿಕೆಯಾಗಿದೆ. ಸೋಂಕಿತರ ಪೈಕಿ 11,24,909 ಜನ ಈವರೆಗೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ 217 ಜನರನ್ನೂ ಸೇರಿ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 15,523 ಜನರ ಸಾವನ್ನಪ್ಪಿದ್ದಾರೆ. ಸದ್ಯ 38,2690 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
(Restrictions on devotees in Mantralaya from tomorrow Offer only online service)
Published On - 8:27 pm, Fri, 30 April 21