ಅಧಿಕಾರಿಯ ಎಡವಟ್ಟು: ನೆರೆ ಪರಿಹಾರ ವಿತರಣೆಯಲ್ಲಿ ಅನ್ಯಾಯ?

ಮೈಸೂರು: ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ? 5 ಲಕ್ಷ ಪರಿಹಾರ ಬದಲಿಗೆ ₹2,100 ಚೆಕ್ ವಿತರಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಸರಿಯಾಗಿ ಪರಿಹಾರ ಸಿಗದೆ ಕುಟುಂಬಗಳು ಕಂಗಾಲಾಗಿವೆ. ನಂಜನಗೂಡು ತಾಲೂಕಿನ ಕಪ್ಪುಸೋಗೆ ಗ್ರಾಮದ ಮಹದೇವಯ್ಯ ಕುಟುಂಬಸ್ಥರು ಈಗ ಆತಂಕದಲ್ಲಿದ್ದಾರೆ. ಯಾಕಂದ್ರೆ 6 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮಹದೇವಯ್ಯ ಮನೆ ನೆಲಸಮವಾಗಿತ್ತು. ಈ ವೇಳೆ ದೇವರ ದಯೆ ಇಂದ ಈ ಬಡ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ಹಾನಿ ಸರ್ವೆ […]

ಅಧಿಕಾರಿಯ ಎಡವಟ್ಟು: ನೆರೆ ಪರಿಹಾರ ವಿತರಣೆಯಲ್ಲಿ ಅನ್ಯಾಯ?
ಸಾಧು ಶ್ರೀನಾಥ್​

Updated on: Feb 28, 2020 | 11:28 AM

ಮೈಸೂರು: ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ? 5 ಲಕ್ಷ ಪರಿಹಾರ ಬದಲಿಗೆ ₹2,100 ಚೆಕ್ ವಿತರಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಸರಿಯಾಗಿ ಪರಿಹಾರ ಸಿಗದೆ ಕುಟುಂಬಗಳು ಕಂಗಾಲಾಗಿವೆ.

ನಂಜನಗೂಡು ತಾಲೂಕಿನ ಕಪ್ಪುಸೋಗೆ ಗ್ರಾಮದ ಮಹದೇವಯ್ಯ ಕುಟುಂಬಸ್ಥರು ಈಗ ಆತಂಕದಲ್ಲಿದ್ದಾರೆ. ಯಾಕಂದ್ರೆ 6 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮಹದೇವಯ್ಯ ಮನೆ ನೆಲಸಮವಾಗಿತ್ತು. ಈ ವೇಳೆ ದೇವರ ದಯೆ ಇಂದ ಈ ಬಡ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ಹಾನಿ ಸರ್ವೆ ಮಾಡಿದ್ರು. ಆದ್ರೀಗ ₹5 ಲಕ್ಷ ಪರಿಹಾರದ ಬದಲು 2,100 ರೂ.ನ ಚೆಕ್‌ ನೀಡಿದ್ದಾರೆ.

ಸರ್ವೆ ವರದಿಯಲ್ಲಿ ಮಹದೇವಯ್ಯ ಮನೆ ಕೊಟ್ಟಿಗೆ ಎಂದು ನಮೂದಿಸಲಾಗಿದೆ. ಸಿಬ್ಬಂದಿ ಎಡವಟ್ಟಿನಿಂದ ಮಹದೇವಯ್ಯ ಕುಟುಂಬ ಕಂಗಾಲಾಗಿದೆ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸುಸ್ತಾಗಿರುವ ಕುಟುಂಬ ಸದ್ಯ ಸೋದರನ ಮನೆಯಲ್ಲಿ ಆಶ್ರಯ ಪಡೆಯುತ್ತಿದೆ. ಸೂಕ್ತ ಪರಿಹಾರ ನೀಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ಕುಟುಂಬ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.


 

 

Published On - 9:55 am, Fri, 28 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us